ನ.21ರಂದು ಪೆರ್ಡೂರು ಮೇಳದ ಪ್ರಥಮ ದೇವರ ಸೇವೆ ಆಟ.

ಪೆರ್ಡೂರು: ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯ 41ನೇ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟ ನ.21ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ.

ಬೆಳಗ್ಗೆ ಗಣಹೋಮ, ರಾತ್ರಿ ಚೌಕಿಯಲ್ಲಿ ಗಣಪತಿ ಪೂಜೆ, ಅನಂತರ ಪ್ರಥಮ ದೇವರ ಸೇವೆ ಆಟ ಅಶ್ವಮೇಧ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಮೇಳದ ವ್ಯವಸ್ಥಾಪಕ ವೈ. ಕರುಣಾಕರ ಶೆಟ್ಟಿ ಅವರು ತಿಳಿಸಿದ್ದಾರೆ.