ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ”

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ ಸೇವೆ ನಿರಂತರವಾಗಿ ನಡೆಯಬೇಕೆನ್ನುವ ಸದುದ್ದೇಶದಿಂದ, ಆ ಸೇವೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುವ “ಮುಷ್ಠಿ ಅಕ್ಕಿ ಕಾಣಿಕೆ ಸೇವೆ”ಗೆ ತುಲಾ ಸಂಕ್ರಮಣದ ಶುಭ ದಿನವಾದ ಇಂದು (17.10.2025, ಶುಕ್ರವಾರ) ನಾಡೋಜ ಡಾ. ಜಿ. ಶಂಕರ್ ರವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಉಪಾಧ್ಯಾಯ, ಗಿರಿಧರ್ ಸುವರ್ಣ, ವಿನಯ್ […]
ಮಣಿಪಾಲ: ಗರ್ಭಿಣಿ ಮಹಿಳೆ ಮೃತ್ಯು

ಮಣಿಪಾಲ: ಹೊಟ್ಟೆಯಲ್ಲಿ ಮೃತಪಟ್ಟ ಮಗುವನ್ನು ಹೆರಿಗೆ ಮಾಡಿಸಲೆಂದಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೈಂದೂರು ಶಿರೂರಿನ ನಾಗರತ್ನ(32) ಎಂದು ಗುರುತಿಸ ಲಾಗಿದೆ. ಇವರು ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಅ.14ರಂದು ಬಂದಿದ್ದರು. ಪರೀಕ್ಷಿಸಿದ ವೈದ್ಯರು ಮಗು ಹೊಟ್ಟೆ ಒಳಗಡೆ ಮೃತಪಟ್ಟಿದ್ದು ಮಗುವನ್ನು ಹೊರಗಡೆ ತೆಗೆಯಬೇಕಾದರೆ ಹೆರಿಗೆ ಮಾಡಿಸಿ ತೆಗೆಯಬೇಕು ಎಂದು ತಿಳಿಸಿದರು. ಅದರಂತೆ ನಾಗರತ್ನ ಅವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅ.16ರಂದು […]
ಉಡುಪಿ:ಮುಂಡ್ಕಿನಜೆಡ್ಡಿನಲ್ಲಿರುವ ಶ್ರೀ ಗೋಪಾಲಕೃಷ್ಣ ಮಂದಿರದ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆ

ಉಡುಪಿ:ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡಿನಲ್ಲಿರುವ ಶ್ರೀ ಗೋಪಾಲಕೃಷ್ಣ ಮಂದಿರದ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಸುಮಾರು 75ಲಕ್ಷ ರೂಪಾಯಿ ವೆಚ್ಚದಲ್ಲಿ ಮಂದಿರವನ್ನು ಸಮಗ್ರವಾಗಿ ಜೀರ್ಣೋದ್ಧಾರಗೊಳಿಸುವ ಸಂಬಂಧ ದಿನಾಂಕ 12-10-2025ರಂದು ಊರಪರವೂರ ಭಕ್ತಾಭಿಮಾನಿಗಳ ಪೂರ್ವಭಾವಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು. ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಮುರಳೀಧರ ಭಟ್,ಪುರುಷೋತ್ತಮ ಪ್ರಭು,ಮಹೇಶ್ ಠಾಕೂರ್,ರಾಜೇಶ್ ಪಾಟೀಲ್, ರಾಜೇಂದ್ರ ಆಚಾರ್ಯ, ರವಿರಾಜ ಭಟ್, ಗೋಪಾಲಕೃಷ್ಣ ಆಚಾರ್ಯ,ವೆಂಕಟೇಶ ಪ್ರಭು , ರವಿಕುಮಾರ ಶೆಟ್ಟಿ ಹಾಗೂ ಊರಿನ ಪ್ರಮುಖರು ಭಕ್ತಾದಿಗಳು ಉಪಸ್ಥಿತರಿದ್ದರು.
ನಿಮ್ಮ ಕಣ್ಣೋಟಕ್ಕೆ ಹೊಸ ಲುಕ್ ಕೊಡೋ ಬ್ರಹ್ಮಾವರದ ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ನಲ್ಲಿ ದೀಪಾವಳಿಗೆ ನಿಮಗಾಗಿ ಡಿಸ್ಕೌಂಟ್ ಆಫರ್!

ಬ್ರಹ್ಮಾವರ: ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್ ನಲ್ಲಿ ದೀಪಾವಳಿಗೆ ಶೇ. 30 ರ ವರೆಗೆ ವಿಶೇಷ ರಿಯಾಯ್ತಿ ಆಫರ್ ನೀಡಲಾಗುತ್ತಿದೆ. ನೀವು ಹೊಸ ಕನ್ನಡಕ, ಸನ್ ಗ್ಲಾಸ್ ಕಾಂಟಾಕ್ಟ್ ಲೆನ್ಸ್ ಹಾಕಿಕೊಂಡು ನಿಮ್ಮ ನೋಡುವ ಕಣ್ಣಿನ ನೋಟವನ್ನು ಇನ್ನಷ್ಟು ಚೆಂದಗೊಳಿಸಬೇಕು ಎನ್ನುವ ಆಸೆ ಹೊಂದಿದ್ದರೆ ನಿಮಗಾಗಿ ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್ ನಲ್ಲಿದೆ ವಿಧ ವಿಧ ಆಯ್ಕೆಗಳು. ಈ ದೀಪಾವಳಿಗೆ ನಿಮ್ಮ ಕಣ್ಣನ್ನು ಇನ್ನಷ್ಟು ಚೆಂದ ಕಾಣಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಏನೆಲ್ಲಾ ಸರ್ವಿಸ್ ಇದೆ? ಕಾಂಟ್ಯಾಕ್ಟ್ […]
“ಜಹಾಂಗೀರ್ ಭಟ್ಸ್” ಉಡುಪಿ ಸ್ವೀಟ್ಸ್ ಹೌಸ್ ಮತ್ತು ವೇದಾಂತ್ ವೆಜ್ ರೆಸ್ಟೋರೆಂಟ್ ನಲ್ಲಿ ದೀಪಾವಳಿಗೆ ಬಂದಿದೆ ರುಚಿಕರ ಸ್ಪೆಷಲ್ ಸ್ವೀಟ್ಸ್: ಬನ್ನಿ ಬಾಯಿ ಸಿಹಿ ಮಾಡೋಣ!

ಉಡುಪಿ: ನಗರದ ಕಲ್ಸಂಕ ವೃತ್ತದ ಬಳಿಯಲ್ಲಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 42 ವರ್ಷಗಳಿಂದ ತೊಡಗಿಸಿಕೊಂಡಿರುವ ”ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ವೈವಿಧ್ಯಮಯ ಸ್ವೀಟ್ಸ್ ಮಾರಾಟವನ್ನು ಆಯೋಜಿಸಲಾಗಿದೆ. ಉಡುಪಿ ಸ್ವೀಟ್ ಹೌಸ್’ನಲ್ಲಿ ಪಾರಂಪರಿಕ ಮತ್ತು ನವೀನ ಮಾದರಿಯ ಎಲ್ಲಾ ತರಹದ ಸಿಹಿ ಹಾಗೂ ಖಾರ ತಿಂಡಿಗಳನ್ನು ಶುದ್ಧ ತುಪ್ಪದಿಂದ ತಯಾರಿಸಲಾಗುತ್ತದೆ. ಗ್ರಾಹಕರಿಗೆ ವಿಶೇಷ ಗಿಫ್ಟ್ ಪ್ಯಾಕ್ ಗಳು ದೊರೆಯಲಿವೆ. ಸೂಪರ್ ಸ್ಪೆಷಲ್ ಸ್ವೀಟ್ಸ್, […]