ಹೆಬ್ರಿ ಶ್ರೀರಾಮ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್.

ಹೆಬ್ರಿ: ಹೆಬ್ರಿಯ ರಾಮನಾಥ ಕಾಂಪ್ಲೆಕ್ಸ್ ಪೂಜಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ರಾಮ್ ಜ್ಯುವೆಲ್ಲರ್ಸ್ ಈ ಬಾರಿ ದೀಪಾವಳಿ ಪ್ರಯುಕ್ತ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಚಿನ್ನ ಖರೀದಿಯಲ್ಲಿ ಪ್ರತಿ ಗ್ರಾಂಗೆ 650 ಕಡಿತ, ಬೆಳ್ಳಿ ಆಭರಣಗಳಿಗೆ ಶೇ10% ರಿಯಾಯಿತಿ, 916 ಹಾಲ್ ಮಾರ್ಕ್ ಪರಿಶುದ್ಧ ಚಿನ್ನಾಭರಣಗಳನ್ನು ಮಾತ್ರ ಮಾಡಿಕೊಡಲಾಗುವುದು. ಈ ಆಫರ್ ಗಳು ಸಂಸ್ಥೆಯ ಸಹ ಸಂಸ್ಥೆಗಳಾದ ಹೆಬ್ರಿ ಶ್ರೀ ರಾಮ್ ಜ್ಯುವೆಲ್ಲರ್ಸ್ ಶ್ರೀರಾಮ್ ಟವರ್ ಸ್ಟೇಟ್ ಬ್ಯಾಂಕ್ ಬಳಿ ಆಗುಂಬೆ ರಸ್ತೆ ಹೆಬ್ರಿ ಹಾಗೂ ಶ್ರೀ ರಾಮ್ […]
ಸಾಹಿತ್ಯ ಅಧ್ಯಯನದಿಂದ ಭಾಷಾ ಕೌಶಲ ಸಿದ್ಧಿಸುತ್ತದೆ- ಡಾ. ಗಿರೀಶ್ ಭಟ್

ಉಡುಪಿ: ಸಾಹಿತ್ಯವನ್ನು ಅಧ್ಯಯನ ಹಾಗೂ ಬೋಧಿಸುವ ಮೂಲಕ ನಮ್ಮಲ್ಲಿ ಭಾಷಾ ಕೌಶಲ ಸಿದ್ಧಿಸುತ್ತದೆ. ಅಲ್ಲದೆ, ಪರಿಣಾಮಕಾರಿಯಾದ ಭಾಷೆಯನ್ನು ಸಿದ್ಧಿಸಿಕೊಳ್ಳಲು ಕೂಡ ಅದು ಸಹಾಯ ಮಾಡುತ್ತದೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಗಿರೀಶ್ ಭಟ್ ಹೇಳಿದ್ದಾರೆ. ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜು ಆವರಣದಲ್ಲಿರುವ ಆರ್.ಆರ್.ಸಿ. ಯ ಧ್ವನ್ಯಲೋಕದಲ್ಲಿ ಶನಿವಾರ ನಡೆದ ಕೇಶವ ಪ್ರಶಸ್ತಿ 2025 ಪ್ರದಾನ ಸಮಾರಂಭದಲ್ಲಿ […]
ಬೈಂದೂರು: ಆಟೋ ರಿಕ್ಷಾಕ್ಕೆ ಪಿಕಪ್ ಡಿಕ್ಕಿ: ರಿಕ್ಷಾ ಚಾಲಕ ಸಾವು

ಉಡುಪಿ: ಪಿಕಪ್ ವಾಹನವೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಶಿರೂರು ಕೆಳಪೇಟೆಯಲ್ಲಿ ಶನಿವಾರ ಸಂಭವಿಸಿದೆ. ಶಿರೂರು ಗ್ರಾಮದ ಹಡವಿನಕೋಣೆ ನ್ಯೂ ಕಾಲೋನಿ ನಿವಾಸಿ ಕರಾ ಇಲಿಯಾಸ್(49) ಮೃತಪಟ್ಟ ಚಾಲಕ. ಮಲ್ಪೆಯಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಮೀನಿನ ವಾಹನ ಶಿರೂರು ಮಾರ್ಕೆಟ್ ಕಡೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾವಳಿ ಹೊರತುಪಡಿಸಿ ಅನ್ಯ ಜಿಲ್ಲೆಗಳಲ್ಲೂ ಕಂಬಳ ನಡೆಸಲು ಹೈಕೋರ್ಟ್ ಹಸಿರು ನಿಶಾನೆ: ಕಂಬಳ ಪ್ರೇಮಿಗಳಲ್ಲಿ ಹರ್ಷ

ಉಡುಪಿ: ಕರಾವಳಿ ಹೊರತುಪಡಿಸಿ ಅನ್ಯ ಜಿಲ್ಲೆಗಳಲ್ಲೂ ಕಂಬಳ ಆಯೋಜಿಸಬಹುದು ಎಂದು ಹೈಕೋರ್ಟ್ ಹಸಿರು ನಿಶಾನೆ ನೀಡಿದೆ. ಬೆಂಗಳೂರಿನಲ್ಲಿ ಕಂಬಳ ನಡೆದಾಗ ಪ್ರಾಣಿಗಳಿಗೆ ಹಿಂಸೆಯಾಗುತ್ತೆ, ಬೇರೆ ಜಿಲ್ಲೆಗಳಲ್ಲಿ ಕಂಬಳ ನಡೆಯಬಾರದು ಎಂದು ಪೇಟಾದವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅವಕಾಶ ನೀಡಿರುವುದು ಕಂಬಳ ಪ್ರೇಮಿಗಳಲ್ಲಿ ಹರ್ಷ ಉಂಟುಮಾಡಿದೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿ ಪ್ರಸಾದ ಶೆಟ್ಟಿ ಅವರು, ಹೈಕೋರ್ಟ್ ಆದೇಶ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಗೆ ಹರ್ಷ ತಂದಿದೆ. […]
ಮಣಿಪಾಲ: ಹಣಕಾಸು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆ!

ಉಡುಪಿ: ಮಣಿಪಾಲ ರಾಹುಲ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಕೊಳತೆ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.ಮೃತವ್ಯಕ್ತಿಯನ್ನು ಆರ್. ಸೆಲ್ವರಾಜ್ ಎಂದು ಗುರುತಿಸಲಾಗಿದೆ. ಇವರು ಹಣಕಾಸು ವ್ಯವಹಾರ ನಡೆಸುತ್ತಿದ್ದು, ರಾಹುಲ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು ಎನ್ನಲಾಗಿದೆ. ಇವರು ಬೆಡ್ ನಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬಂದ ಮಣಿಪಾಲ ಪೋಲಿಸ್ ಠಾಣೆಯ ಎಎಸ್ ಐ ವಿಜಯ್, ಸಿಬ್ಬಂದಿ ಶಶಿಧರ್, ಸುರೇಶ್ ಶೆಟ್ಟಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ […]