ಉಡುಪಿ:ಮುಂಡ್ಕಿನಜೆಡ್ಡಿನಲ್ಲಿರುವ ಶ್ರೀ ಗೋಪಾಲಕೃಷ್ಣ ಮಂದಿರದ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆ

ಉಡುಪಿ:ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡಿನಲ್ಲಿರುವ ಶ್ರೀ ಗೋಪಾಲಕೃಷ್ಣ ಮಂದಿರದ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಸುಮಾರು 75ಲಕ್ಷ ರೂಪಾಯಿ ವೆಚ್ಚದಲ್ಲಿ ಮಂದಿರವನ್ನು ಸಮಗ್ರವಾಗಿ ಜೀರ್ಣೋದ್ಧಾರಗೊಳಿಸುವ ಸಂಬಂಧ ದಿನಾಂಕ 12-10-2025ರಂದು ಊರಪರವೂರ ಭಕ್ತಾಭಿಮಾನಿಗಳ ಪೂರ್ವಭಾವಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು. ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಮುರಳೀಧರ ಭಟ್,ಪುರುಷೋತ್ತಮ ಪ್ರಭು,ಮಹೇಶ್ ಠಾಕೂರ್,ರಾಜೇಶ್ ಪಾಟೀಲ್, ರಾಜೇಂದ್ರ ಆಚಾರ್ಯ, ರವಿರಾಜ ಭಟ್, ಗೋಪಾಲಕೃಷ್ಣ ಆಚಾರ್ಯ,ವೆಂಕಟೇಶ ಪ್ರಭು , ರವಿಕುಮಾರ ಶೆಟ್ಟಿ ಹಾಗೂ ಊರಿನ ಪ್ರಮುಖರು ಭಕ್ತಾದಿಗಳು ಉಪಸ್ಥಿತರಿದ್ದರು.