ಹೆಜಮಾಡಿ:ಆಟೊ ರಿಕ್ಷಾಕ್ಕೆ ಲಾರಿ ಢಿಕ್ಕಿ: ರಿಕ್ಷಾ ಚಾಲಕ ಮೃತ್ಯು

ಪಡುಬಿದ್ರೆ: ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬೈಪಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ರಫೀಕ್ (37) ಮೃತಪಟ್ಟವರು. ರಫೀಕ್ ಇಂದು ಮುಂಜಾನೆ ಮನೆಯಿಂದ ಮಸೀದಿಗೆ ರಿಕ್ಷಾದಲ್ಲಿ ತೆರಳಿದ್ದರು. ಈ ವೇಳೆ ಹೆಜಮಾಡಿ ಬೈಪಾಸ್ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಫೀಕ್ ಅವರನ್ನು ಕೂಡಲೇ ಸ್ಥಳೀಯರು ಅಸ್ಪತ್ರೆಗೆ ಸಾಗಿಸಿದ್ದು, ಈ ವೇಳೆ […]

ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತ್ಯು

ವಿಜಯಪುರ : ಮೂವರು ಮಕ್ಕಳು ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಾದೇವ ವಸ್ತಿಯಲ್ಲಿ ಗುರುವಾರ ನಡೆದಿದೆ. ಅಕ್ಕ ಸ್ವಪ್ನಾ ರಾಜು ರಾಠೋಡ (10), ತಮ್ಮ ಶಿವಂ ರಾಜು ರಾಠೋಡ (8) ಹಾಗೂ ಕಾರ್ತಿಕ ವಿಶ್ವ ರಾಠೋಡ (8) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಸಂಜೆ ಮಕ್ಕಳು ಕುರಿ‌ಗಳ ಜೊತೆಗೆ ಆಟವಾಡುತ್ತಾ ಕೃಷಿ ಹೊಂಡದ ಬಳಿ ತೆರಳಿದ್ದು, ಈ ವೇಳೆ‌ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ […]

ತುಪ್ಪ ಇಷ್ಟ ಅಂತ ಒಟ್ಟಾರೆ  ತಿನ್ನೋದಲ್ಲ:ತುಪ್ಪ ಸೇವಿಸೋಕೂ ಒಂದು ಕ್ರಮ ಉಂಟು!

ನಿಮಗೆ ತುಪ್ಪ ಇಷ್ಟ ಅಂತ ಒಟ್ಟಾರೆ ತುಪ್ಪ ಬಳಸೋಕೆ ಹೋಗ್ಬೇಡಿ. ತುಪ್ಪ ಸೇವಿಸಲೂ ಒಂದಷ್ಟು ಕ್ರಮಗಳಿವೆ. ಆ ಕ್ರಮವನ್ನು ಬಳಸಿದರೆ ಯಾವ ಸಮಸ್ಯೆಯೂ ಆಗದೇ ಆರೋಗ್ಯಯುತವಾಗಿರಬಹುದು! ಹಾಗಾದ್ರೆ ಬನ್ನಿ ಯಾವಾಗೆಲ್ಲಾ ತುಪ್ಪ ಬಳಸಬೇಕು, ಯಾಕಾಗಿ ಬಳಸಬೇಕು ಎನ್ನುವುದನ್ನು ನೋಡೋಣ. ಕೀಲು ನೋವಿದ್ದಾಗ: ಬೆಚ್ಚಗಿನ ತುಪ್ಪದಿಂದ ಕೀಲುಗಳಿಗೆ ಮಸಾಜ್ ಮಾಡುವುದರಿಂದ ಕೀಲುಗಳ ಬಿಗಿತ ಮತ್ತು ನೋವು ಕಡಿಮೆಯಾಗುತ್ತದೆ. ಇದು ಊತವನ್ನು ಕಡಿಮೆ ಮಾಡಲು ತುಪ್ಪ ಬೆಸ್ಟ್. ಹೊಟ್ಟೆ ಉಬ್ಬರ ಮತ್ತುಮಲಬದ್ಧತೆ ಇದ್ದಾಗ: ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು […]

ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಳದುರ್ ನಾರಾಯಣ ಶೆಟ್ಟಿ ನಿಧನ

ಉಡುಪಿ:ಕಳತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ, ಪಾದೂರು ಗ್ರಾಮದ ವಳದುರ್ ನಾರಾಯಣ ಶೆಟ್ಟಿ ಇಂದು (ಅ.17) ನಿದನರಾದರು. ಮೃತರು ಪತ್ನಿ 3ಪುತ್ರರು 2ಪುತ್ರಿಯರು ಅಗಲಿರುತ್ತಾರೆ. ಕಾಪು ಬಂಟರ ಸಂಘದ ನಿರ್ದೇಶಕರು ಮಜೂರ್ ಪಂಚಾಯತ್ ಮಾಜಿ ಸದಸ್ಯರು ಹಲವಾರು ಸಂಘಟನೆಯಲ್ಲಿ ಸದಸ್ಯರಾಗಿದ್ದರು. ಇವರ ನಿಧನಕ್ಕೆ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ಎಲ್ಲೂರು ವಿಶ್ವಶ್ವರ ದೇವಸ್ಥಾನದ ಮಾಜಿ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಫ್ಫುಲ್ಲ ಶೆಟ್ಟಿ ದ್ವಾದಶಿ ಪಬ್ಲಿಸಿಟಿ […]

RSS ಬ್ಯಾನ್ ಬಗ್ಗೆ ಯಾರೂ ಹೇಳಿಕೆ ನೀಡಿಲ್ಲ: ಸಚಿವ ದಿನೇಶ್‌ ಗುಂಡೂರಾವ್

ಚಿತ್ರದುರ್ಗ: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಘಟನೆಯ ಬ್ಯಾನ್ ಯಾರೊಬ್ಬರೂ ಹೇಳಿಕೆ ನೀಡಿಲ್ಲ. ಈ ಬಗ್ಗೆ ಚರ್ಚೆಗಳನ್ನೂ ಮಾಡಲಾಗಿಲ್ಲ. ಕೇವಲ ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಡೆಸದಂತೆ ಕ್ರಮವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಬ್ಯಾನ್ ಮಾಡಬೇಕು ಎಂದು ಯಾರಾದರೂ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಸಚಿವರು, ಆ ಬಗ್ಗೆ ಯಾರೂ ಹೇಳಿಲ್ಲ, ಚರ್ಚೆಯೇ ಮಾಡಿಲ್ಲ ಎಂದು ಖಚಿತಪಡಿಸಿದರು. […]