ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಳದುರ್ ನಾರಾಯಣ ಶೆಟ್ಟಿ ನಿಧನ

ಉಡುಪಿ:ಕಳತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ, ಪಾದೂರು ಗ್ರಾಮದ ವಳದುರ್ ನಾರಾಯಣ ಶೆಟ್ಟಿ ಇಂದು (ಅ.17) ನಿದನರಾದರು.

ಮೃತರು ಪತ್ನಿ 3ಪುತ್ರರು 2ಪುತ್ರಿಯರು ಅಗಲಿರುತ್ತಾರೆ. ಕಾಪು ಬಂಟರ ಸಂಘದ ನಿರ್ದೇಶಕರು ಮಜೂರ್ ಪಂಚಾಯತ್ ಮಾಜಿ ಸದಸ್ಯರು ಹಲವಾರು ಸಂಘಟನೆಯಲ್ಲಿ ಸದಸ್ಯರಾಗಿದ್ದರು.

ಇವರ ನಿಧನಕ್ಕೆ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ಎಲ್ಲೂರು ವಿಶ್ವಶ್ವರ ದೇವಸ್ಥಾನದ ಮಾಜಿ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಫ್ಫುಲ್ಲ ಶೆಟ್ಟಿ ದ್ವಾದಶಿ ಪಬ್ಲಿಸಿಟಿ ಕಾಪುದಿವಾಕರ ಬಿ ಶೆಟ್ಟಿ ಕಳತೂರ್ ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಲಾಲ್ ಹಾಗು ಸದಸ್ಯರುಗಳು ಅಡ್ವಕೇಟ್ ಜಯಕೃಷ್ಣ ಆಳ್ವಾ ಪಾದೂರುಗುತ್ತು ಕಳತೂರ್ ದೇವಸ್ಥಾನದ ಪ್ರದಾನ ಅರ್ಚಕ ಕೇಶವ ತಂತ್ರಿ ಹಾಗೂ ಅರ್ಚಕ ವರ್ಗ ಹಾಗೂ ಸಿಬ್ಬಂದಿ ವರ್ಗ ಅಡ್ವಕೇಟ್ ಉಮೇಶ್ ಶೆಟ್ಟಿ ಅಶ್ವತಗುತ್ತು ಮಯೂರ ನಿತ್ಯಾನಂದ ಶೆಟ್ಟಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.