ಪರೀಕ್ಷೆ ಬರೆದು ಮನೆಗೆ ವಾಪಾಸಾಗುತ್ತಿದ್ದ ಬಿ.ಫಾರ್ಮಾ ವಿದ್ಯಾರ್ಥಿನಿ’ಯ ಕೊಲೆ

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಬಳಿ ಗುರುವಾರ ಸಂಜೆ ನಡೆದಿದೆ. ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿ ಪ್ರಿಯಾ (20) ಕೊಲೆಯಾದ ವಿದ್ಯಾರ್ಥಿನಿ. ಯಾಮಿನಿ‌ ಪ್ರಿಯಾ ಲವ್ ಮಾಡಲು ಒಪ್ಪದಿರುವುದಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿದ್ದು, ವಿಘ್ನೇಶ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ. ಗೋಪಾಲ್ ಅವರ ಪುತ್ರಿ […]

ಉಡುಪಿ:ದೇಸಿ ತಳಿಗಳ ಸಂರಕ್ಷಣೆ, ಉತ್ತೇಜನ ಕಾರ್ಯಕ್ರಮ

ಉಡುಪಿ: ಕೃಷಿ ಇಲಾಖೆ ವತಿಯಿಂದ ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಪ್ರೋತ್ಸಾಹ ನೀಡಲು ದೇಸಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭತ್ತ, ರಾಗಿ, ಜೋಳ, ದ್ವಿದಳ ಬೇಳೆಕಾಳು, ಸಿರಿ ಧಾನ್ಯ ಬೆಳೆಗಳ ದೇಸಿತಳಿಗಳನ್ನು ಸಂರಕ್ಷಿಸುತ್ತಿರುವ ರೈತರಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಿಂದ ಸ್ವಯಂಪ್ರೇರಿತವಾಗಿ 6 ಜನ ರೈತರು ಭಾಗವಹಿಸಬಹುದಾಗಿದ್ದು, ಮಲ್ಲಿಗೆ, ಮಸ್ಸೂರಿ, ಗುಲ್ವಾಡಿ ಸಣ್ಣ, ಗೌರಿ ಸೇರಿದಂತೆ 50 […]

ಉಡುಪಿ:ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ

ಉಡುಪಿ: ಮೈಸೂರಿನ ಕೇಂದ್ರ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ ಸಂಸ್ಥೆಯ ವತಿಯಿಂದ “ಮೆಷಿನ್ ಆಪರೇಟರ್ & ಪ್ರೋಗ್ರಾಮರ್ – ಸಿ.ಎನ್.ಸಿ ಮಿಲ್ಲಿಂಗ್” ವಿಷಯದಲ್ಲಿ ಉಚಿತ ಮೂರುವರೆ ತಿಂಗಳ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿ ಆಯೋಜಿಸಲಾಗಿದ್ದು, ತರಬೇತಿಯಲ್ಲಿ ಉಚಿತ ಆಹಾರ ಹಾಗೂ ವಸತಿ ಸೌಲಭ್ಯ ಒದಗಿಸಲಾಗುವುದು. ತರಬೇತಿಯು ಅಕ್ಟೋಬರ್ 23 ರಿಂದ ಪ್ರಾರಂಭವಾಗಲಿದ್ದು, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆ ಹೊಂದಿರುವ ಆಸಕ್ತರು ತರಬೇತಿಯಲ್ಲಿ ಭಾಗವಹಿಸಬಹುದಾಗಿದ್ದು, ತರಬೇತಿಗೆ ದಾಖಲಾದ ಪ್ರತಿಯೊಬ್ಬ […]

ಉಡುಪಿ:ನಗರಸಭೆಯ ಉಳಿಕೆ ಅನುದಾನದ ಮೊತ್ತದಲ್ಲಿ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2024-25 ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀಸಲಿರಿಸಿದ ಅನುದಾನದ ಉಳಿಕೆ ಮೊತ್ತದಲ್ಲಿ ಎಸ್.ಎಫ್.ಸಿ ಅನುದಾನದ ಶೇ. 5 ರ ವಿಕಲಚೇತನ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಮನೆ ದುರಸ್ಥಿ, ಕೃತಕ ಅಂಗ ಜೋಡಣೆ / ಶಸ್ತ್ರ ಚಿಕಿತ್ಸೆಗೆ ಧನಸಹಾಯ, ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆ / ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಾಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಎಸ್.ಎಸ್.ಎಲ್.ಸಿ ಯಿಂದ ಮಾಸ್ಟರ್ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ಸಹಾಯಧನ, ಎಸ್.ಎಫ್.ಸಿ / ಮುಕ್ತನಿಧಿ ಮತ್ತು ಪುರಸಭಾ […]

ಉಡುಪಿ:ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ವಿಜ್ಞಾನ ವಿಷಯಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳ ಮೇಲೆ ಕನ್ನಡದಲ್ಲಿ 2023ರ ಜನವರಿಯಿಂದ 2025ರ ಡಿಸೆಂಬರ್ ತಿಂಗಳಿನೊಳಗೆ ಒಳಗೆ ಪ್ರಕಟವಾಗುವ ಪುಸ್ತಕಗಳ ಲೇಖಕರಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2026ರ ಜನವರಿ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಅಕಾಡೆಮಿ ವೆಬ್‌ಸೈಟ್ – https://kstcademy.in-ಅನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.