ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಹೆಬ್ರಿ ಆರಕ್ಷಕ ಠಾಣೆಗೆ ಲ್ಯಾಪ್ಟಾಪ್ ಕೊಡುಗೆ.

ಹೆಬ್ರಿ: ಹೆಬ್ರಿಯ ಆರಕ್ಷಕ ಠಾಣೆಗೆ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಲ್ಯಾಪ್ಟಾಪನ್ನು ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಅವರು ಠಾಣೆಯ ಉಪನಿರೀಕ್ಷಕರಾದ ರವಿ ಬಿ.ಕೆ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ.ಎನ್‌.ಶೆಟ್ಟಿ, ಹೆಬ್ರಿಯ ಖ್ಯಾತ ಉದ್ಯಮಿ ಸತೀಶ್ ಪೈ, ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಮಹಾಂತೇಶ್ ಜಾಬಗೌಡ ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.