ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ

ಉಡುಪಿ,ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾವಿದ್ಯಾಲಯದ ಎಮ್‌ಬಿಎ ವಿಭಾಗವು ಅಖಿಲ ಭಾರತ ತಾಂತ್ರಿಕ
ಶಿಕ್ಷಣ ಇಲಾಖೆಯ ಕಲಿಕೆ ಮತ್ತು ತರಬೇತಿ ಅಕಾಡೆಮಿಯ
ಸಹಯೋಗದೊಂದಿಗೆ ಆರು ದಿನಗಳ ಅಧ್ಯಾಪಕರ ತರಬೇತಿ
ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಉದ್ಘಾಟನಾ
ಸಮಾರಂಭವು ದಿನಾಂಕ 6 ಅಕ್ಟೋಬರ್ 2025 ರಂದು ಜರಗಿತು.

ಈ ಅಭಿವೃದ್ಧಿ ಕಾರ್ಯಾಗಾರವು ಅಧ್ಯಾಪಕರ ಮತ್ತು ಸಂಶೋಧಕರನ್ನು ಅಗತ್ಯ ಪರಿಕರಗಳು ಮತ್ತು ತಂತ್ರಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಲಾಗಿಲ್ ಎಂಟರ್‌ಪ್ರೈಸಸ್ ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಸಲಹೆಗಾರರಾದ ಸುಜಿತ್ ಸಾಹೂ ಭಾಗವಹಿಸಿ ಇಂದಿನ ವ್ಯವಹಾರ ವ್ಯವಸ್ಥೆಯಲ್ಲಿ ಡೇಟಾ ಮಾಡೆಲಿಂಗ್‌ನ ಅಗತ್ಯತೆಯ ಬಗ್ಗೆ ತಿಳಿಸಿದರು ಮತ್ತು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.

ಟ್ಯಾಲೆಂಟ್ ಅಕ್ವೇಝಿಷನ್ ಬೆಂಗಳೂರು ಇಲ್ಲಿನ ಸಹಾಯಕ
ನಿರ್ದೇಶಕರಾದ ವಿನಯ್ ವೈಷ್ಣವ್ ಗೌರವ ಅತಿಥಿಗಳಾಗಿ
ಭಾಗವಹಿಸಿದ್ದರು. ಇವರು ಮಾತನಾಡಿ ವ್ಯವಹಾರ ನಿರ್ಧಾರಗಳು
ಮತ್ತು ಪ್ರತಿಭಾ ನಿರ್ವಹಣೆಯಲ್ಲಿ ಮಾನವ ಸಂಪನ್ಮೂಲ
ವಿಶ್ಲೇಷಣೆಯ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ವಿಶ್ಲೇಷಣಾತ್ಮಕ ಚಿಂತನೆಯು ಸಾಂಪ್ರದಾಯಿಕ ಮಾನವ ಸಂಪನ್ಮೂಲ ಕಾರ್ಯಗಳನ್ನು ಹೇಗೆ ಮರುರೂಪಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು.

ಸಂಸ್ಥೆಯ ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್
ನೊರೋನ್ಹಾ ಅತಿಥಿಗಳನ್ನು ಸ್ವಾಗತಿಸಿದರು. ಶೈಕ್ಷಣಿಕ ಡೀನ್ ಡಾ.
ನಾಗರಾಜ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆರು ದಿನಗಳ ಈ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಶೈಕ್ಷಣಿಕ ಜ್ಞಾನ, ಸಂಶೋಧನೆ, ನಾವೀನ್ಯತೆ ಮತ್ತು ಪ್ರಭಾವಶಾಲಿ ಬೋಧನಾ ವಿಧಾನಗಳನ್ನು ಬೆಳೆಸುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.