ಕುಂದಾಪುರ:ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಕಾರ್ಯಾಗಾರ.

ಕುಂದಾಪುರ :ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಕುಂದಾಪುರ ಇವರ ಸಹಭಾಗಿತ್ವದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 22 ರಂದು ರಸಾಯನ ಶಾಸ್ತ್ರ ಉಪನ್ಯಾಸಕರಿಗೆ 1 ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ ಇದರ ಕಾರ್ಯ ದರ್ಶಿ ಯವರಾದ ಶ್ರೀ.ಕೆ. ರಾಧಾಕೃಷ್ಣ ಶೆಣೈ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು […]
ಮಂಗಳೂರು:“ಎಜುಪಾತ್ ಸರಣಿ ಉಪನ್ಯಾಸ – 2025 -ವೃತ್ತಿಯಾಗಿ ವಾಸ್ತುಶಿಲ್ಪ”

ಮಂಗಳೂರು:ವಾಸ್ತುಶಿಲ್ಪ ಎಂಬುದು ಕಲೆ, ವಿಜ್ಞಾನ, ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ವೃತ್ತಿಯಾಗಿದ್ದು ಸೃಜನಾತ್ಮಕ, ತಾಂತ್ರಿಕಜ್ಞಾನ ಹಾಗೂ ಕಾರ್ಯಕ್ಷಮತೆಯ ಮಿಶ್ರಣವಾಗಿದೆ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಕೀಸ್ಟೋನ್ ಅರ್ಕಿಟೆಕ್ಚರ್‌ನ ಶ್ರೀಮತಿ ದೀಪಿಕಾ ಎ.ನಾಯಕ್ ಅವರು ಹೇಳಿದರು. ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನಲ್ಲಿ ‘ವೃತ್ತಿಯಾಗಿ ವಾಸ್ತುಶಿಲ್ಪ’ ಎಂಬ ವಿಷಯದ ಕುರಿತು ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ವಾಸ್ತುಶಿಲ್ಪ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೀಸ್ಟೋನ್ ಅರ್ಕಿಟೆಕ್ಚರ್‌ನ ದೀಪಿಕಾ ಎ […]
ಉಡುಪಿ:ಕಟಪಾಡಿಯ ತ್ರಿಶಾ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ

ಕಟಪಾಡಿ:ಶಿಕ್ಷಕನು ಸಮಾಜಕ್ಕೆ ಪರಿಚಿತನಾಗಬೇಕು, ಬದುಕು ರೂಪಿಸುವ ಶಿಕ್ಷಣ ಮಕ್ಕಳಿಗೆ ದೊರಕಬೇಕು, ಅಧ್ಯಾಪನ ವೃತ್ತಿಗೆ ಗೌರವ ಹೆಚ್ಚಾಗಬೇಕು, ಅಂಕಗಳಿಗಿಂತ ವ್ಯಕ್ತಿತ್ವ ವಿಕಸನವು ಮುಖ್ಯವಾಗಬೇಕು, ಸಮಾಜ ಬದಲಾಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾಸಂಘದ ರಾಷ್ಟ್ರೀಯ ಸಂಚಾಲಕರಾಗಿರುವ ಡಾಕ್ಟರ್ ರಘು ಅಕಮಂಚಿ ಹೇಳಿದರು. ಅವರು ಇತ್ತೀಚಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಉಡುಪಿ ಜಿಲ್ಲೆ ಮತ್ತು ತ್ರಿಶಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದಂತಹ ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ […]
ಉಡುಪಿ ಮತ್ತು ಮಂಗಳೂರಿನ ಪ್ರಖ್ಯಾತ ಗ್ರೂಪ್ ಆಫ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಮತ್ತು ಮಂಗಳೂರಿನ ಅತಿ ದೊಡ್ಡ ಗ್ರೂಪ್ ಆಫ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔸ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್🔸ಡಾಟ್ ಎಂಟ್ರಿ ಆಪರೇಟರ್ 🔸ಅಕೌಂಟೆಂಟ್ /ಅಕೌಂಟೆಂಟ್ ಅಸಿಸ್ಟೆಂಟ್🔸 ಬಿಲ್ಲಿಂಗ್ ಸ್ಟಾಫ್🔸ಮೆಷಿನ್ ಆಪರೇಟರ್ 🔸ಎಲೆಕ್ಟ್ರಿಷಿಯನ್/ ಟೆಕ್ನಿಷಿಯನ್🔸ಸೂಪರ್ವೈಸರ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 8050364397, 📞9071275778
ಬೆಂಗಳೂರಲ್ಲಿ ಜುಲೈ 26-27 ರಂದು ‘ಕುಂದಾಪ್ರ ಕನ್ನಡ ಹಬ್ಬ’

ಬೆಂಗಳೂರು: ರಾಜಧಾನಿ ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ವರ್ಷಂಪ್ರತಿ ಆಯೋಜಿಸುವ ʼಕುಂದಾಪ್ರ ಕನ್ನಡ ಹಬ್ಬʼ ಈ ಸಲ ಜುಲೈ 26 ಮತ್ತು 27ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ನಲ್ಲಿ ನಡೆಯಲಿದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ. ʼಕುಂದಾಪ್ರ ಕನ್ನಡ ಹಬ್ಬ-2025ʼರ ಕುರಿತು ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಆರನೇ ಕುಂದಾಪ್ರ ಕನ್ನಡ ಹಬ್ಬವಾಗಿದ್ದು, ಈ ಸಲ ಇದನ್ನು […]