ಮಂಗಳೂರಿನಲ್ಲಿ ಆ.3 ರಂದು “ಕುಂದಾಪ್ರ ಕನ್ನಡ ಹಬ್ಬ”

ಕುಂದಗನ್ನಡದ ನೆಲದಲ್ಲಿ ಹುಟ್ಟಿ, ಬದುಕಿಗೊಂದು ನೆಲೆಯರಸಿ ಮಂಗಳೂರಿಗೆ ಬಂದು ಸೇರಿ, ಇಲ್ಲಿಯವರಾದವರೆಲ್ಲರೂ ಸೇರಿ, ತಮ್ಮ ಮೂಲ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ “ಕುಡ್ಲದಗಿಪ್ಪ ಕುಂದಾಪ್ರದರ್” ಎಂಬ ವಾಟ್ಸಾಪ್ ಬಳಗವನ್ನು ರಚಿಸಿಕೊಂಡಿದ್ದಾರೆ. ಈಗ ಈ ವಾಟ್ಸಾಪ್ ಬಳಗದ ಸದಸ್ಯರ ಸಂಖ್ಯೆ 650ನ್ನು ಮೀರಿದೆ.ಈ ವಾಟ್ಸಾಪ್ ಬಳಗದ ಸದಸ್ಯರೆಲ್ಲರೂ ಸೇರಿ , ಕಳೆದ ಐದು ವರ್ಷಗಳಿಂದ, ಆಷಾಢ ಮಾಸದ ಒಂದು ದಿನದಂದು “ಕುಂದಾಪ್ರ ಕನ್ನಡ ಹಬ್ಬ” ಆಚರಿಸುತ್ತಾ ಬಂದಿದ್ದಾರೆ.ಪ್ರತಿವರ್ಷದಂತೆ, ಈ ವರ್ಷವೂ ” ಕುಂದಾಪ್ರ […]

ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿದ ಆರೋಪ; RCB ವೇಗಿ ಯಶ್‌ ದಯಾಳ್‌ ವಿರುದ್ಧ ಪೋಕ್ಸೊ ಕೇಸ್‌ ದಾಖಲು.

ಜೈಪುರ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ವೇಗಿ ಯಶ್ ದಯಾಳ್‌ ವಿರುದ್ಧ ಬಾಲಕಿಯೊಬ್ಬಳ ಮೇಲೆ 2‌ ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಕ್ಸೋ ಪ್ರಕರಣ ದಾಕಲಾಗಿದೆ. 2025ರ ಐಪಿಎಲ್‌ ಮುಕ್ತಾಯಗೊಂಡ ಕೆಲ ದಿನಗಳಿಂದ ಸ್ಟಾರ್‌ ವೇಗಿಗೆ ಮೇಲಿಂದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಗಾಜಿಯಾಬಾದ್‌ನ ಯುವತಿಯೊಬ್ಬಳು ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ಈ ಸಂಬಂಧ ಕೇಸ್‌ ಕೂಡ ದಾಖಲಾಗಿತ್ತು. ಇದೀಗ ಅಪ್ರಾಪ್ತೆ ಮೇಲೆ […]

ದೇಶದ 2ನೇ ಅತಿ ಸುದೀರ್ಘ ಪ್ರಧಾನಿ; ಇಂದಿರಾ ಗಾಂಧಿ ದಾಖಲೆ ಮುರಿದ ನರೇಂದ್ರ ಮೋದಿ.

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ 4,078 ದಿನಗಳು ಪೂರ್ಣಗೊಳ್ಳುತ್ತಿದ್ದು, 4,077 ದಿನಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿಯಲಿದ್ದಾರೆ. 1966ರ ಜ.24ರಿಂದ 1977ರ ಮಾ.24ರವರೆಗೆ ಇಂದಿರಾ ಗಾಂಧಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿದ್ದರು. ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಆ ಹೆಗ್ಗಳಿಕೆ ಮೋದಿಯವರ ಪಾಲಾಗಲಿದೆ. ಈ ಹಿಂದೆ ಸತತ 3 ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನೆಹರೂ ಅವರ ಇತಿಹಾಸವನ್ನೂ […]

ಬಂಟಕಲ್:“ಬ್ಯಾಂಕಿಂಗ್‌ನಲ್ಲಿ ಉದ್ಯಮ ಪ್ರವೃತ್ತಿ” ಎಂಬ ವಿಷಯದ ಕುರಿತು ಉಪನ್ಯಾಸ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂ ಬಿ ಎ ವಿಭಾಗವು ಪ್ರಥಮ ಮತ್ತು ದ್ವಿತೀಯವರ್ಷದ ವಿದ್ಯಾರ್ಥಿಗಳಿಗಾಗಿ 21 ಜುಲೈ 2025 ರಂದು “ಬ್ಯಾಂಕಿಂಗ್‌ನಲ್ಲಿ ಉದ್ಯಮ ಪ್ರವೃತ್ತಿ” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎಚ್. ಡಿ. ಎಫ್. ಸಿ ಬ್ಯಾಂಕ್, ಶಿರ್ವ ಶಾಖೆಯ ಮುಖ್ಯಸ್ಥರಾದ ಪ್ರಸಾದ್ ಪ್ರಭು ಇವರು ಭಾಗವಹಿಸಿದ್ದರು. ಇವರು ಮಾತನಾಡಿ ಬ್ಯಾಂಕ್‌ಗಳು ತಮ್ಮ ಹೆಚ್ಚುವರಿ ಹಣವನ್ನು ಉಳಿಸುವಲ್ಲಿ ವೈವಿಧ್ಯಮಯವಾದ ಪಾತ್ರವನ್ನು ವಹಿಸುತ್ತದೆ. ಬ್ಯಾಂಕ್ ಠೇವಣಿ, […]

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಕಾರ್ಯಾಗಾರ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಎಂ. ಆಳ್ವ ಗಣಿತವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಎಲ್ಲಾ ತಾರ್ಕಿಕ ವಿಜ್ಞಾನಗಳಿಗೆ ಹೇಗೆ ಅಡಿಪಾಯವನ್ನು ಹಾಕುತ್ತದೆ ಎಂಬುದನ್ನು ಉಲ್ಲೇಖಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ […]