ಮಲ್ಪೆ ಕಡಲತೀರದಲ್ಲಿ ಕೇರಳ ಸಮಾಜದಿಂದ ಬಲಿತರ್ಪಣಂ; ಎಪ್ಪತ್ತಕ್ಕೂ ಅಧಿಕ ಕುಟುಂಬಗಳಿಂದ ಅಗಲಿದ ಪಿತೃಗಳಿಗೆ ತರ್ಪಣ

ಉಡುಪಿ: ತುಳು ನಾಡಿನಲ್ಲಿ ಆಟಿ ಅಮಾವಾಸ್ಯೆಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಹಾಲೆ ಮರದ ಕಷಾಯ ಕುಡಿದು ಸರ್ವರೋಗದಿಂದ ವರ್ಷವಿಡೀ ದೂರವಿದ್ರೆ ಇನ್ನೊಂದೆಡೆ ಅಗಲಿದ ಪಿತೃಗಳಿಗೆ ತರ್ಪಣ ಬಿಡುವ ಧಾರ್ಮಿಕ ವಿಧಿವಿಧಾನಕ್ಕೆ ಇಂದು ವಿಶೇಷ ಮಹತ್ವ. ಈ ವಿಶೇಷ ದಿನದಲ್ಲಿ ಕೇರಳ ಸಮಾಜ ಕೂಡ ತುಳುನಾಡಿನಲ್ಲಿ ಮೊದಲ ಬಾರಿ ಪಿತೃಗಳಿಗೆ ತರ್ಪಣ ಬಿಟ್ಟಿದ್ದಾರೆ. ಹೌದು, ಕೇರಳದಿಂದ ಕರಾವಳಿಗೆ ಬಂದು ನೆಲೆಸಿರುವ ನೂರಾರು ಮಂದಿ ಇಷ್ಟರವರೆಗೆ ಕರಾವಳಿಯ ಪದ್ದತಿಯಂತೆ ತರ್ಪಣ ಬಿಡುತ್ತಿದ್ದರು. ಆದರೆ ಇದೇ ಮೊದಲು ಕೇರಳ ಸಮಾಜಂ […]
ಕಾಪು: ಯುವನಿಧಿ ಯೋಜನೆಯ 2025 ನೇ ಸಾಲಿನ ನೊಂದಾವಣಿ ಪ್ರಕ್ರಿಯೆಯ ಪೋಸ್ಟರ್ ಬಿಡುಗಡೆ

ಕರ್ನಾಟಕ ರಾಜ್ಯ ಸರ್ಕಾರ ಬಡವರ ಮತ್ತು ಮಧ್ಯಮ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಹಾಕಿಕೊಂಡ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ 2025 ನೇ ಸಾಲಿನ ನೋಂದಾವಣಿ ಪ್ರಕ್ರಿಯೆಯ ಆರಂಭದ ಬಗ್ಗೆ ಪೋಸ್ಟರ್ ಬಿಡುಗಡೆಯು ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ, ಕಾಪು ತಹಶೀಲ್ದಾರರ ಕಚೇರಿಯಲ್ಲಿ, ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಈ ಸಂಧರ್ಭ ಕಾಪು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ನವೀನ್ಚಂದ್ರ ಸುವರ್ಣ, ಕಾಪು ತಾಲೂಕು ಪಂಚಾಯತ್ […]
ಕೋಳಿ ಅಂಕ ಬಗ್ಗೆ ಅವಹೇಳನಕಾರಿ ಹೇಳಿಕೆ- ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕೂಡಲೇ ಕ್ಷಮೆ ಯಾಚಿಸಲಿ

ಉಡುಪಿ: ತುಳುನಾಡಿನ ದೈವಾರಾಧನೆಯ ಭಾಗವಾದ ಕೋಳಿ ಅಂಕದ ಆಚರಣೆ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಅವಹೇಳನಕಾರಿ ಹೇಳಿಕೆ ನೀಡಿದ್ದು , ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಎಂದು ತುಳುನಾಡ ಧರ್ಮ ಜಾಗರಣ ವೇದಿಕೆ ಒತ್ತಾಯ ಮಾಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಉಡುಪಿ ಜಿಲ್ಲಾ ಪ್ರಮುಖ್ ಉದಯಕುಮಾರ್ ಹಿರಿಯಡಕ ಅವರು, ಕಳೆದ ಮಂಗಳವಾರ ಬ್ರಹ್ಮಾವರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ […]
ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಕಲಿಕಾ ಮಾರ್ಗದರ್ಶನ ಕಾರ್ಯಾಗಾರ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕಾ ಮಾರ್ಗದರ್ಶನ ಕಾರ್ಯಾಗಾರವನ್ನು18 ಜುಲೈ 2025 ರಂದು ಇನ್ನಂಜೆಯ ಎಸ್ ವಿ ಹೆಚ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಎಸ್ ವಿ ಹೆಚ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಶಾಲಾ ವಿದ್ಯಾರ್ಥಿಗಳಲ್ಲಿ ಸಂವಾದಾತ್ಮಕ ಮತ್ತು ಆಕರ್ಷಕ ಚಟುವಟಿಕೆಗಳ ಮೂಲಕ ನಾವೀನ್ಯತೆ ಮತ್ತು ಸೃಜನಶೀಲ ಸಮಸ್ಯೆ ಪರಿಹಾರದಲ್ಲಿ ಆಸಕ್ತಿಯನ್ನು ಹುಟ್ಟುಹಾಕುವುದಾಗಿದೆ. ಶಾಲೆಯಲ್ಲಿ ನಡೆದ ಅಧಿವೇಶನವು ಎಲೆಕ್ಟ್ರಾನಿಕ್ ಮತ್ತು ಸಂವೇದಕ […]
ಮಣಿಪಾಲದಲ್ಲಿ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕಿದೆ

ಉಡುಪಿ:ಮಣಿಪಾಲದಲ್ಲಿ ಮೈನ್ ರೋಡ್ ಟಚ್ ಆಗಿರುವ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕಿದ್ದು, ಸುಸ್ಥಿರ ಬೆಲೆಗೆ ಆಧುನಿಕ ವಾಸಸ್ಥಳ ಮಣಿಪಾಲದ ಹೃದಯಭಾಗದಲ್ಲಿದೆ. ನಿಮ್ಮ ಮನೆಯ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಇದಾಗಿದೆ. ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ, ರಾಜೀವ್ ನಗರದ ಅಲೇವೂರು ರಸ್ತೆಯಲ್ಲಿರುವ GSJ ರಿಡ್ಜ್ ಮಾಉಂಟ್ ಬಿಲ್ಡಿಂಗ್ನಲ್ಲಿ ವಿಶಿಷ್ಟ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕೆ ಲಭ್ಯವಿದೆ. ಈ ಬಿಲ್ಡಿಂಗ್ ಗೆ 6-7 ವರ್ಷಗಳಾಗಿದ್ದು,1120 ಚದರ ಅಡಿ – 2 ಬೆಡ್‌ರೂಮ್ ಇದೆ. ಕವರ್ ಕಾರ್ ಪಾರ್ಕಿಂಗ್, ಪವರ್ ಬ್ಯಾಕಪ್, […]