ಉಡುಪಿ: 10 ಲಕ್ಷ ರೂ. ವೆಚ್ಚದ ಸಂತೆಕಟ್ಟೆ ಒಣಮೀನು ಮಾರುಕಟ್ಟೆ ಉದ್ಘಾಟನೆ

ಉಡುಪಿ: ಉಡುಪಿ ನಗರಸಭೆಯ ಅನುದಾನದಲ್ಲಿ ನಿರ್ಮಾಣ ಗೊಂಡ ಗೋಪಾಲಪುರ ವಾರ್ಡಿನ ಸಂತೆಕಟ್ಟೆ ಒಣ ಮೀನು ಮಾರುಕಟ್ಟೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಸಂತೆಕಟ್ಟೆಯ ಒಣ ಮೀನು ಮಾರಾಟಗಾರ ಮಹಿಳೆಯರ ಬಹು ವರ್ಷಗಳ ಬೇಡಿಕೆಯಂತೆ ಉಡುಪಿ ನಗರಸಭೆಯ ಮೂಲಕ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರು ಕಟ್ಟೆ ನಿರ್ಮಿಸಲಾಗಿದ್ದು, ವಿದ್ಯುತ್ ದೀಪ ಹಾಗೂ ಫ್ಯಾನ್ ಅಳವಡಿಕೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಮೀನು ಮಾರುಕಟ್ಟೆಗಳ ಅಭಿವೃದ್ಧಿಗೆ […]

ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜು: ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಕುಂದಾಪುರ: ಜುಲೈ 5ರಂದು ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಸತ್ ನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರತ್ತು ಬಾಯಿ ಜನತಾ ಪ್ರೌಢಶಾಲೆ ಬೈಂದೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀ ಆನಂದ ಮದ್ದೋಡಿಯವರು ಜೀವನದಲ್ಲಿ ಶಿಸ್ತು, ಸಂಯಮ , ಸಮರ್ಪಣಾ ಮನೋಭಾವವನ್ನು ತಮ್ಮಲ್ಲಿ ಅಳವಡಿಸಿಕೊಂಡು ಭಾವನಾತ್ಮಕ, ಪ್ರಜ್ಞಾವಂತ ನಾಗರಿಕರಾಗಿ ಬದುಕನ್ನು ಸಾಗಿಸುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ […]

ಸಿಎ ಫೈನಲ್ ಫಲಿತಾಂಶ: ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳ ಸಾಧನೆ

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಜಾಗೃತಿ ನಾಯಕ್ ಉತ್ತೀರ್ಣ:ಹೊಸದಿಲ್ಲಿಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಮೇ 2025 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಜಾಗೃತಿ ನಾಯಕ್ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ಅಮ್ಮುಂಜೆ ಮಾಧವ ನಾಯಕ್ ಮತ್ತು ಉಷಾ ನಾಯಕ್ ದಂಪತಿಯ ಪುತ್ರಿ. ಇವರು ತಮ್ಮ ಆರ್ಟಿಕಲ್‌ಶಿಫ್‌ನ್ನು ಉಡುಪಿಯ ಪೈ ನಾಯಕ್ ಮತ್ತು ಅಸೊಶಿಯೇಟ್ಸ್ ನಲ್ಲಿ ಪೂರೈಸಿದ್ದಾರೆ. ಸಿಎ ಫೌಂಡೇಶನ್, ಇಂಟರ್‌ಮಿಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದುಕೊಂಡಿದ್ದಾರೆ. ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಸುಧನ್ವ […]

ಮಂಗಳೂರು ಮತ್ತು ಮಣಿಪಾಲದ ಪ್ರೊಡಕ್ಷನ್ ಇಂಡಸ್ಟ್ರಿ ಮತ್ತು ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಮಂಗಳೂರು ಮತ್ತು ಮಣಿಪಾಲದ ಪ್ರೊಡಕ್ಷನ್ ಇಂಡಸ್ಟ್ರಿ ಮತ್ತು ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◼ಅಕೌಂಟೆಂಟ್◼ಬಿಲ್ಲಿಂಗ್◼ಕ್ಯಾಶಿಯರ್◼ಗ್ರಾಫಿಕ್ ಡಿಸೈನರ್◼ಡಾಟಾ ಎಂಟ್ರಿ◼ಕಸ್ಟಮರ್ ಸಪೋರ್ಟ್◼ಸೇಲ್ಸ್- ಮಾರ್ಕೆಟಿಂಗ್◼ಎಕ್ಸಿಕ್ಯೂಟಿವ್ ಪ್ರೊಡಕ್ಷನ್◼ಸೂಪರ್ ವೈಸರ್◼ಎಲೆಕ್ಟ್ರಿಷಿಯನ್◼ಟೆಕ್ನಿಷಿಯನ್◼ಸ್ಟೋರ್ ಎಕ್ಸಿಕ್ಯೂಟಿವ್◼ಪ್ಯಾಕಿಂಗ್◼ಡ್ರೈವರ್◼ಸೆಕ್ಯೂರಿಟಿ ಗಾರ್ಡ್ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ, ಪಿಯುಸಿ, ಐ ಟಿ ಐ, ಡಿಗ್ರಿ, ಡಿಪ್ಲೋಮಾ, ಬಿ.ಇ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ: 9606968198, 7019891796