ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಉಚಿತ ಗಿಡ ವಿತರಣೆ ಕಾರ್ಯಕ್ರಮ

ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವತಿಯಿಂದ ಉಚಿತವಾಗಿ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ‌ ಮಾತನಾಡಿ, ಪ್ರಕೃತಿ ಇದ್ದರೆ ಮನುಷ್ಯ ಜೀವಿಸಲು ಸಾಧ್ಯ. ಪ್ರತಿಯೊಂದು ಸಂದರ್ಭದಲ್ಲಿ ಪ್ರಕೃತಿ ನಮ್ಮ ಜೊತೆ ಇರುತ್ತದೆ. ನಾವು ಅದನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ಉದ್ಯಾವರ, ಅಲೆವೂರು, ಆತ್ರಾಡಿ, 80 ಬಡಗಬೆಟ್ಟು ಗ್ರಾಮಗಳು ಶೀಘ್ರವೇ ಮಹಾನಗರ ಪಾಲಿಕೆಯಾಗಿ ಘೋಷಣೆಯಾಗಲಿದೆ‌. ಮಹಾನಗರ ಪಾಲಿಕೆ ಆದ ಬಳಿಕ […]

ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ: ವಜ್ರ ಮಹೋತ್ಸವ ಪ್ರಯುಕ್ತ ಬಡ ಕುಟುಂಬಕ್ಕೆ ಮನೆ ಹಸ್ತಾಂತರ.

ಕೋಟ: ಮಂಗಳೂರಿನ ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವ ಆಚರಣೆಯ ಪ್ರಯುಕ್ತ ಮಂದಾರ್ತಿ ಸಮೀಪ ಬಿಲ್ಲಾಡಿ ಗ್ರಾಮದ ಬೂದಾಡಿಯ ಬಡ ಕುಟುಂಬಕ್ಕೆ ನಿರ್ಮಿಸಿಕೊಟ್ಟ ಹೊಸ ಮನೆಯ ಹಸ್ತಾಂತರ ಜು.6 ರಂದು ಜರುಗಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮಾಜ ಪ್ರಾಮಾಣಿಕತೆ ಹಾಗೂ ಕಠಿಣ ದುಡಿಮೆಗೆ ಹೆಸರುವಾಸಿಯಾಗಿದೆ. ಸಂಸ್ಥೆಯ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿ ಎಂದರು. ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ […]

 ಹೊಟ್ಟೆ ತುಂಬಾ ನಗು-ಚೂರು ಕಣ್ಣೀರು ತರಿಸುವ “ಜುಗ್ಗ ನನ್ ಗಂಡ” 2 : ಟ್ರೆಂಡಿಂಗ್ ನಲ್ಲಿದೆ ಗಂಡ-ಹೆಂಡ್ತಿಯ ಸುಂದರ ಕತೆ

ಕಷ್ಟ ಪಟ್ಟು ದುಡಿಯೋ ಗಂಡ, ದುಡಿದದ್ದನ್ನೆಲ್ಲಾ ನೀರಂತೆ ಅದು ಬೇಕು ಇದು ಬೇಕು ಎಂದು ಖರ್ಚು ಮಾಡೋ ಹೆಂಡ್ತಿ, ಒಂದಷ್ಟು ಜಗಳ, ಸಿಟ್ಟಿನ ಸನ್ನಿವೇಶಗಳ ಮೂಲಕ ನಗಿಸುವ ಗಂಡ-ಹೆಂಡತಿಯ ಪಂಚಿಂಗ್ ಡೈಲಾಗ್ ಗಳು, ಕಾಮಿಡಿ ದೃಶ್ಯಗಳ ನಡುವೆಯೂ ಆಳವಾಗಿ ಗಂಭೀರತೆ ಇದ್ದಂತೆ ಕಾಣಿಸುವ ನಟನೆ. ಕೊನೆಗೆ ಜಗಳ ಸಿಟ್ಟು ಮಾಡಿಕೊಂಡೇ ಇರುವ  ಹೆಂಡ್ತಿ, ಬದುಕಿನ ಅನಿವಾರ್ಯತೆಯಲ್ಲಿ ಗಂಡನ ಶ್ರಮವನ್ನು ನಿಯತ್ತಿನ ಬದುಕನ್ನು ಹೇಗೆ ಅರ್ಥಮಾಡಿಕೊಂಡು  ಮಿಡಿಯುತ್ತ ಹೇಗೆ ಬದಲಾಗುತ್ತಾಳೆ ಎನ್ನುವುದು “ಜುಗ್ಗ ನನ್ ಗಂಡ” 2 ದ […]

ಸಿಇಟಿಯಲ್ಲಿ 1.41 ಲಕ್ಷ ಎಂಜಿನಿಯರಿಂಗ್‌ ಸೀಟು ಲಭ್ಯ.!

ಬೆಂಗಳೂರು: ಸಿಇಟಿಯಲ್ಲಿ ಅರ್ಹತೆ ಪಡೆದು ಎಂಜಿನಿಯರಿಂಗ್‌ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ 2025–26ನೇ ಸಾಲಿನಲ್ಲಿ 1.41 ಲಕ್ಷ ಸೀಟುಗಳು ಲಭ್ಯವಿವೆ.ವಿವಿಧ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳೂ ಸೇರಿ 1,41,009 ಸೀಟುಗಳ ಅಂತಿಮ ಪಟ್ಟಿಯನ್ನು (ಸೀಟ್‌ ಮ್ಯಾಟ್ರಿಕ್ಸ್‌) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಬಿಡುಗಡೆ ಮಾಡಿದೆ. 2024–25ನೇ ಸಾಲಿನಲ್ಲೂ ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ 1.41 ಲಕ್ಷ ಇತ್ತು. ಈ ವರ್ಷವೂ ಅಷ್ಟೇ ಸಂಖ್ಯೆಯ ಸೀಟುಗಳು ಲಭ್ಯವಾಗಿವೆ. ಕಂಪ್ಯೂಟರ್ ಸೈನ್ಸ್‌ 30,573, ಕೃತಕ ಬುದ್ಧಿಮತ್ತೆ 7,209, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ […]

ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಬೇಕು; ಪ್ರಧಾನಿ ಮೋದಿ

ಬ್ರೆಜಿಲ್: ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವಲ್ಲಿ ಭಾರತದ ಪರವಾಗಿ ನಿಂತ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿ, ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಪಹಲ್ಗಾಮ್‌ನಲ್ಲಿ ನಡೆದ ಪಾಕಿಸ್ತಾನ ಸಂಬಂಧಿತ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದರು, ನಂತರ ಭಾರತ ಆಪರೇಷನ್ ಸಿಂಧೂರ್ ನ್ನು ಪ್ರಾರಂಭಿಸಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯ, ವಾಯುನೆಲೆಗಳನ್ನು ವಿಮಾನ ನಿಗ್ರಹ ಕ್ಷಿಪಣಿ […]