ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ: ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಉಡುಪಿ: ಅಲೈನ್ಸ್ ಕ್ಲಬ್ ಉಡುಪಿ ವತಿಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರ ಉಡುಪಿ ನಗರದಲ್ಲಿರುವ ಕ್ಲಿನಿಕ್‌ನಲ್ಲಿ ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಹಾಗೂ ಪ್ರಸ್ತುತ ಅಲೈನ್ಸ್ ಜಿಲ್ಲೆ 275ರ ಅಡ್ವೈಸರ್ ಅಲೈ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಉಡುಪಿಯ ಜನಪ್ರಿಯ ವೈದ್ಯರಾಗಿರುವ ಡಾ.ಆರ್.ಎನ್.ಭಟ್ ಅವರು ಪ್ರತೀ ಶನಿವಾರ ತಮ್ಮ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಉಚಿತ ಸೇವೆಯನ್ನು […]

ಕಾರ್ಕಳ: ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಳಕಳಿ ಮೆರೆದ ನವಜ್ಯೋತಿ ಫ್ರೆಂಡ್ಸ್

ಕಾರ್ಕಳ: ಪುರಸಭೆಯ ವ್ಯಾಪ್ತಿಯಲ್ಲಿರುವ ಆನೆಕೆರೆ ತಾವರೆ ವೃತ್ತದ ಬಳಿಯ ರಸ್ತೆಯು ಹೊಂಡ ಗುಂಡಿಗಳಿಂದ ಹಲವಾರು ದ್ವಿಚಕ್ರ ವಾಹನ ಹಾಗೂ ಇತರ ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದು, ಅದನ್ನು ಕಂಡ ಕಾರ್ಕಳ ಆನೆಕೆರೆಯ ನವಜ್ಯೋತಿ ಫ್ರೆಂಡ್ಸ್ ,(ರಿ) ಇದರ ವತಿಯಿಂದ ಶ್ರೀಕಾಂತ್ ಭಾಗವತ್ ಇವರ ನೇತೃತ್ವದಲ್ಲಿ ಜುಲೈ 6ರಂದು ಸಂಘದ ಅಧ್ಯಕ್ಷರಾದ ಗೌತಮ್, ಕಾರ್ಯದರ್ಶಿ ರಂಜಿತ್ , ಕೋಶಾಧಿಕಾರಿ ಶ್ರೀಕಾಂತ್, ನಿರ್ದೇಶಕರಾದ ಹರೀಶ್ ದೇವಾಡಿಗ ಹಾಗೂ ಇನ್ನಿತರ ಸಂಘದ ಸದಸ್ಯರು ರಸ್ತೆ ದುರಸ್ತಿ ಕಾರ್ಯ ನಿರ್ವಹಿಸಿದರು.

ಉಡುಪಿ: ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರಿಗೆ ಸನ್ಮಾನ

ಉಡುಪಿ: ಭಾರತ ಸರ್ಕಾರದ SEAC SEIAA ಸದಸ್ಯ ಮತ್ತು ಮಣಿಪಾಲದ MIT ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರನ್ನು ಪರಿಸರ, ಶಿಕ್ಷಣ ಮತ್ತು ಆರೋಗ್ಯಕ್ಕೆ ಕ್ಷೇತ್ರ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಕುಂದಾಪುರದ ರಕ್ಷಾ ಚಾರಿಟೇಬಲ್ ಟ್ರಸ್ಟ್‌ ಸನ್ಮಾನಿಸಿತು. ಈ ಮನ್ನಣೆಯು ಸುಸ್ಥಿರತೆ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸುವ ಅವರ ಸಮರ್ಪಣೆಯನ್ನು ಗುರುತಿಸುತ್ತದೆ. ಗೌರವಾನ್ವಿತ ಶಿಕ್ಷಣ ತಜ್ಞ ಮತ್ತು ಪರಿಸರ ತಜ್ಞರಾಗಿ, ಡಾ. ಮದ್ದೋಡಿ ಅವರ ಕೆಲಸವು ಸಮುದಾಯದ ಮೇಲೆ […]

ಪ್ರವೀಣ ಕುಮಾರಿ ಎಂ.ಕೆ ಅವರಿಗೆ ಪಿ.ಎಚ್.ಡಿ ಪದವಿ

ಉಡುಪಿ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಂ.ಸಿ.ಎ ವಿಭಾಗದ ಸಹಪ್ರಾಧ್ಯಾಪಿಕೆಯಾಗಿರುವ ಪ್ರವೀಣ ಕುಮಾರಿ ಎಂ.ಕೆ. ಅವರು ಮಂಡಿಸಿರುವ “Advanced Data Analytics Model for Intelligent Transport System in Smart City” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟ‌ರ್ ಸೈನ್ಸ್ ವಿಭಾಗದ ಚೇರ್ಮನ್ ಹಾಗೂ ಸೀನಿಯರ್ ಪ್ರೊಫೆಸರ್ ಮಂಜಯ್ಯ ಡಿ.ಎಚ್. ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದರು. ಪ್ರವೀಣ ಕುಮಾರಿ […]

ಮನೆ ಮನದಲ್ಲಿ ಯಕ್ಷಗಾನದ ಕಂಪು ಸಾರುತ್ತಿರುವ ಚಿಕ್ಕಮೇಳಗಳ ಪ್ರದರ್ಶನ…

ಉಡುಪಿ : ಕರಾವಳಿಯ ಗಂಡು ಕಲೆ,ಆರಾಧನಾ ಕಲೆ ಯಕ್ಷಗಾನ. ಈ ಕಲೆಯನ್ನೇ ನಂಬಿ ಬದುಕುವ ನೂರಾರು ಕಲಾವಿದರಿದ್ದಾರೆ. ಆದರೆ ಮಳೆಗಾಲ ಬಂತೆಂದರೆ ಯಕ್ಷಗಾನ ಮೇಳಗಳ ತಿರುಗಾಟ ಇರೋದಿಲ್ಲ. ಅಲ್ಲೊಂದು ಇಲ್ಲೊಂದು ಅಪರೂಪದ ಪ್ರದರ್ಶನಗಳು ಬಿಟ್ಟರೆ ಕಲಾವಿದರು ನಿರುದ್ಯೋಗಿಗಳು ಎನ್ನಬಹುದು. ಹಾಗಾಗಿ ಮೇಳದ ಕಲಾವಿದರಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ಹೇಗೆ ಎನ್ನುವ ಚಿಂತೆ ಮೂಡುವುದು ಸಹಜ. ಹೀಗಾಗಿ ಮಳೆಗಾಲದಲ್ಲಿ ಮನೆಮನೆಗೆ ಹೋಗಿ ಗೆಜ್ಜೆ ಸೇವೆಯ ಮೂಲಕ ಕಲಾವಿದರು ತಮ್ಮ ಬದುಕಿನ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಈ ಮೇಳಗಳನ್ನು ಚಿಕ್ಕಮೇಳ ಎಂದು […]