ದಾಂಪತ್ಯ ಜೀವನದ ಸಿಹಿ ಕಹಿ ಹಂಚುವ ಕಿರುಚಿತ್ರ “ಟಾಮ್& ಜೆರ್ರಿ ಸಂಸಾರ”: ಸಂಸಾರದಲ್ಲಿ ಜಗಳ ಆಡುವವರು ಒಮ್ಮೆ ನೋಡಿ

ಒಂದು ಸುಂದರ ದಾಂಪತ್ಯ ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ನವಿರಾಗಿ, ಒಂದಷ್ಟು ಹಾಸ್ಯದ ಕಚಕುಳಿಯೊಂದಿಗೆ ಹೇಳುವ ಟಾಮ್ &ಜೆರ್ರಿ ಸಂಸಾರ ಕಿರುಚಿತ್ರ ರಿಲೀಸ್ ಆಗಿದ್ದು,ಒಟ್ಟು 16 ನಿಮಿಷದ ಈ ಕಿರುಚಿತ್ರ ಸಂಸಾರದ ಬಿಕ್ಕಟ್ಟುಗಳನ್ನು ಸಹಜವಾಗಿ ಮತ್ತು ಸುಂದರವಾಗಿ ಪ್ರಸ್ತುತಪಡಿಸುತ್ತ ಸಾಗುತ್ತದೆ. ಪ್ರೀತಿಸಿ ಮದುವೆಯಾದ ಜೋಡಿ ಕ್ರಮೇಣ ಪರಸ್ಪರ ಹೊಂದಾಣಿಕೆಯಿಲ್ಲದೇ,ಹೇಗೆ ದಾಂಪತ್ಯದ ದಿನಗಳನ್ನು ಕಳೆಯುತ್ತಾರೆ,ಇನ್ನೇನು ಸಂಸಾರ ಬಿದ್ದೇ ಹೋಗುತ್ತದೆ ಎನ್ನುವಾಗ ಮತ್ತೆ ಸಂಬಂಧ ಹೇಗೆ ಹೂವಂತೆ ಅರಳುತ್ತದೆ ಎನ್ನುವುದು ಕಿರು ಚಿತ್ರದ ತಿರುಳು. ಈ ಭೂಮಿ ಮೇಲಿರುವ ಪ್ರತಿಯೊಬ್ಬರಲ್ಲೂ ದೆವ್ವ […]

ಉಡುಪಿ:ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ಕಾಶೀಮಠಾದೀಶರ ಭೇಟಿ ;”ಬೆಳ್ಳಿಯ ಶೇಷ ವಾಹನ ಸಮರ್ಪಣೆ “

ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಶ್ರೀ ಪುರಂದರ ಜಯಂತಿ ಆರಾಧನೆಯ ಪರ್ವಕಾಲದಲ್ಲಿ ಬುಧವಾರ ಪೂಜ್ಯಶ್ರೀ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ ಭೇಟಿ ನೀಡಿದರು. ಉಡುಪಿ ದೇವಳದ ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ವತಿಯಿಂದ ನಿರ್ಮಿಸಲಾದ “ಬೆಳ್ಳಿಯ ಶೇಷ ವಾಹನ ಸಮರ್ಪಣೆ ” ಶ್ರೀ […]

ಉಡುಪಿ: ಇಂದು (ಫೆ.2) ನಕ್ಸಲ್ ತೊಂಬಟ್ಟು ಲಕ್ಷ್ಮೀ ಜಿಲ್ಲಾಡಳಿತದ ಮುಂದೆ ಶರಣಾಗತಿ

ಉಡುಪಿ: ನಕ್ಸಲ್‌ ಚಟುವಟಿಕೆಯಲ್ಲಿದ್ದು ಬಳಿಕ ಅದನ್ನು ತೊರೆದು ಸಾಂಸಾರಿಕ ಜೀವನ ನಡೆಸುತ್ತಿರುವ ತೊಂಬಟ್ಟು ಲಕ್ಷ್ಮೀ ಫೆ.2ರಂದು ಶರಣಾಗತಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿಗೆ ಸಿದ್ಧತೆ ನಡೆದಿದ್ದು, ಬೆಳಿಗ್ಗೆ 11 ಗಂಟೆಗೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ತೊಂಬೊಟ್ಟು ನಿವಾಸಿ ಲಕ್ಷ್ಮಿ, 2006ರಿಂದ ಕಣ್ಮರೆಯಾಗಿದ್ದರು. ಬಳಿಕ ಆಂಧ್ರಪ್ರದೇಶದಲ್ಲಿ ಪತಿಯ ಜೊತೆಗೆ ವಾಸವಾಗಿದ್ದಾರೆ. ಇವರು ಆಂಧ್ರಪ್ರದೇಶದಲ್ಲಿ ಪೊಲೀಸರಿಗೆ ಶರಣಾಗಿರುವ ನಕ್ಸಲ್ ಆರೋಪಿತ ಸಂಜೀವನ ಪತ್ನಿ. ಆಂಧ್ರ ಪ್ರದೇಶದಲ್ಲಿ ಲಕ್ಷ್ಮಿ […]

ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ,ಕರಂದಾಡಿ ಕಾಪು, ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಾಪು :ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ,ಕರಂದಾಡಿ ಕಾಪು, ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇವತ್ತಿನಿಂದ ಪ್ರಾರಂಭಗೊಂಡಿತು. ಇದರ ಅಂಗವಾಗಿ ಹೊರಕಾಣಿಕೆಯ ಭವ್ಯ ಮೆರವಣಿಗೆಯ ಸಂಧರ್ಭದಲ್ಲಿ ಮೆರವಣಿಗೆಯಲ್ಲಿ ಬಂದವರನ್ನು ಮಜೂರುವ ಮತ್ತು ಕರಂದಾಡಿ ಪರಿಸರದ ಮುಸ್ಲೀಂ ಭಾಂಧವರು ಆತ್ಮೀಯವಾಗಿ ಸ್ವಾಗತಿಸಿ ಸಿಹಿ ತಿಂಡಿ ಮತ್ತು ತಂಪು ಪಾನೀಯವನ್ನು ಹಂಚಿದರು. ಮೆರವಣಿಗೆಯಲ್ಲಿ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆಯವರು, ದೇವಸ್ಥಾನದ ಪ್ರಮುಖರು,ಊರಿನ ಎಲ್ಲಾ ಹಿಂದು ಭಾಂಧವರು ಹಾಗೂ ಮುಸ್ಲೀಂ ಸಮುಧಾಯದ ಮುಖಂಡರಾದ ಶರ್ಫುದ್ದೀನ್ ಶೇಖ್, ಡಾ. ಯು,ಮಹಮ್ಮದ್ […]