ಎಲ್ಲೂರು ಮಹತೋಭಾರ ವಿಶ್ವೇಶ್ವೆ ದೇವಸ್ಥಾನ: ವಾಸ್ತು ಹೋಮ, ಅಘೋತ ಹೋಮ ಸಂಪನ್ನ

ಎಲ್ಲೂರು: ಮಹತೋಭಾರ ಶ್ರೀ ವಿಶ್ವೇಶ್ವೆ ದೇವಸ್ಥಾನ, ಎಲ್ಲೂರುದಿನಾಂಕ: 31/01/2025 ರಂದು ಸಂಜೆ ಗಂಟೆ 6:00 ಕ್ಕೆ ಶ್ರೀ ದೇವಳದ ನಂದಿ ಶಿವೇಂದ್ರನ ನೂತನ ಹಟ್ಟಿಗೆ ಶ್ರೀ ದೇವಳದ ಸರದಿ ತಂತ್ರಿಗಳಾದ ಪಾದೂರು ಶ್ರೀ ಲಕ್ಷ್ಮೀ ನಾರಾಯಣ ತಂತ್ರಿಗಳವರ ನೇತೃತ್ವದಲ್ಲಿ ವಾಸ್ತು ಹೋಮ ಹಾಗೂ ಅಘೋರ ಹೋಮ ಮತ್ತು ಶ್ರೀ ದೇವಳ ನೂತನ ಕೆರೆಗೆ ತಟಕಾ ಶಾಂತಿ ಹೋಮವು ಜರಗಿತು. ಈ ಸಂರ್ದಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು, ಶ್ರೀ ದೇವಳದ ಪವಿತ್ರಪಾಣಿಯವರು, ಗ್ರಾಮ ಸೀಮೆಯ […]
ಆಸ್ಟ್ರೋ ಮೋಹನ್ ಅವರ ‘ಉಡುಪಿ ಮಣಿಪಾಲ ಅಂದು ಇಂದು’ ಮಿನಿ ಕಾಫಿ ಟೇಬಲ್ ಕೃತಿ ಬಿಡುಗಡೆ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಭೂತರಾಜ ಪಬ್ಲಿಕೇಶನ್ ವತಿಯಿಂದ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರ ‘ಉಡುಪಿ ಮಣಿಪಾಲ ಅಂದು ಇಂದು’ ಮಿನಿ ಕಾಫಿ ಟೇಬಲ್ ಆರನೇ ಕೃತಿ ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕೃತಿ ಲೋಕಾರ್ಪಣೆಗೊಳಿಸಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಐದು ದಶಕಗಳಲ್ಲಿ ಉಡುಪಿ- ಮಣಿಪಾಲದಲ್ಲಿ ಆದಷ್ಟು ಬದಲಾವಣೆ ಬೇರೆ ಯಾವ ಜಿಲ್ಲೆಯಲ್ಲೂ ಆಗಿಲ್ಲ. ಇದರಲ್ಲಿ ಡಾ. ಟಿಎಂಎ […]
ನಕ್ಸಲ್ ತೊಂಬಟ್ಟು ಲಕ್ಷ್ಮೀ ಜಿಲ್ಲಾಡಳಿತ ಮುಂದೆ ಶರಣಾಗತಿ

ಉಡುಪಿ: 20 ವರ್ಷಗಳ ಹಿಂದೆ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡು ಬಳಿಕ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಭಾನುವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹಾಗೂ ಎಸ್ಪಿ ಡಾ. ಅರುಣ್ ಕೆ ಅವರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದರು. ಮೊದಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಯಿತು. ಅಲ್ಲಿಂದ ಬೀಗಿ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಲಕ್ಷ್ಮೀ ಅವರನ್ನು ಕರೆತರಲಾಯಿತು. ಅಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಮ್ಮುಖದಲ್ಲಿ ಲಕ್ಷೀ ಶರಣಾಗತಿ ಘೋಷಿಸಿದರು.ಬಳಿಕ ಮಾತನಾಡಿದ ತೊಂಬಟ್ಟು ಲಕ್ಷ್ಮೀ, […]
ಫೆ.9ರಂದು ಏಳನೇ ಆವೃತ್ತಿಯ “ಮಣಿಪಾಲ ಮ್ಯಾರಥಾನ್”

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ವತಿಯಿಂದ ‘ಮಣಿಪಾಲ ಮ್ಯಾರಥಾನ್’ನ ಏಳನೇ ಆವೃತ್ತಿ ಇದೇ ಫೆ.9ರಂದು ನಡೆಯಲಿದ್ದು, ಈ ಬಾರಿ ದಾಖಲೆಯ 20,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ. ಮಣಿಪಾಲ ಮಾಹೆಯಲ್ಲಿ ನಡೆ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ 15,000 ಸ್ಪರ್ಧಿಗಳು ದೇಶದ ಈ ಪ್ರತಿಷ್ಠಿತ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು, ಈ ಬಾರಿ ಇಂದಿನವರೆಗೆ 20,000ಕ್ಕೂ ಅಧಿಕ ಮಂದಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು. ಮಣಿಪಾಲ ಮ್ಯಾರಥಾನ್ […]
ವಿಕಸಿತ ಭಾರತಕ್ಕೆ ಮುನ್ನುಡಿ, ಸಮೃದ್ಧ ಭಾರತಕ್ಕೆ ಅಡಿಪಾಯ ಹಾಕಿದ ಬಜೆಟ್: ಶ್ರೀನಿಧಿ ಹೆಗ್ಡೆ

ಉಡುಪಿ: ಆದಾಯ ತೆರಿಗೆ ವ್ಯಾಪ್ತಿಯನ್ನು ₹ 12 ಲಕ್ಷ ರೂ. ವರೆಗೆ ವಿಸ್ತರಿಸುವ ಮೂಲಕ ಬಡ, ಮದ್ಯಮ ವರ್ಗದ ಜನರ ಆರ್ಥಿಕ ಶಕ್ತಿಗೆ ಕೇಂದ್ರ ಬಜೆಟ್ ಹೊಸ ಚೈತನ್ಯ ನೀಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ವರೆಗೆ ವಿಸ್ತರಿಸಿದ್ದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲ ಒದಗಿಸಿರುವ ಜೊತೆಗೆ ಉಳಿತಾಯಕ್ಕೂ ಅವಕಾಶ ಮಾಡಿಕೊಟ್ಟಿದೆ. ಬಜೆಟ್ ನಲ್ಲಿ ತೆರಿಗೆ, ಇಂಧನ ವಲಯ, ನಗರಾಭಿವೃದ್ಧಿ, […]