ಕಾಪು :ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ,ಕರಂದಾಡಿ ಕಾಪು, ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇವತ್ತಿನಿಂದ ಪ್ರಾರಂಭಗೊಂಡಿತು.
ಇದರ ಅಂಗವಾಗಿ ಹೊರಕಾಣಿಕೆಯ ಭವ್ಯ ಮೆರವಣಿಗೆಯ ಸಂಧರ್ಭದಲ್ಲಿ ಮೆರವಣಿಗೆಯಲ್ಲಿ ಬಂದವರನ್ನು ಮಜೂರುವ ಮತ್ತು ಕರಂದಾಡಿ ಪರಿಸರದ ಮುಸ್ಲೀಂ ಭಾಂಧವರು ಆತ್ಮೀಯವಾಗಿ ಸ್ವಾಗತಿಸಿ ಸಿಹಿ ತಿಂಡಿ ಮತ್ತು ತಂಪು ಪಾನೀಯವನ್ನು ಹಂಚಿದರು.

ಮೆರವಣಿಗೆಯಲ್ಲಿ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆಯವರು, ದೇವಸ್ಥಾನದ ಪ್ರಮುಖರು,ಊರಿನ ಎಲ್ಲಾ ಹಿಂದು ಭಾಂಧವರು ಹಾಗೂ ಮುಸ್ಲೀಂ ಸಮುಧಾಯದ ಮುಖಂಡರಾದ ಶರ್ಫುದ್ದೀನ್ ಶೇಖ್, ಡಾ. ಯು,ಮಹಮ್ಮದ್ ಫಾರೂಕ್, ಸಾಬಾನ್ ಕರಂದಾಡಿ, ರಝಾಕ್,ಹಾಜಬ್ಬ,ಅಶ್ರಫ್ ಕರಂದಾಡಿ ಶಂಶುದ್ದೀನ್ ಹನೀಫ್,ಯಂಗ್ ಮೆನ್ಸ್ ಕಮಿಟಿಯ ಸದಸ್ಯರು,ಮತ್ತು ಅನೇಕ ಪ್ರಮುಖರು, ಮತ್ತು ಯುವಕರು ಉಪಸ್ಥಿತರಿದ್ದರು.





















