ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅಸ್ವಸ್ಥಗೊಂಡು ಮೃತ್ಯು

ಉಡುಪಿ: ಮುಂಬೈಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮಹಿಳೆ ಮಗನೊಂದಿಗೆ ಮುಂಬೈಯಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಪ್ರಯಾಣದ ಹಾದಿಯಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು, ಆರೋಗ್ಯ ಸ್ಥಿತಿಯನ್ನು ಅರಿತು, ಕೃತಕ ಉಸಿರಾಟದ‌ ವ್ಯವಸ್ಥೆಗೊಳಿಸಿದ್ದರು. ರೈಲ್ವೇ ವೈದ್ಯಾಧಿಕಾರಿ ಡಾ. ಸ್ಟಿವನ್ ಜಾರ್ಜ್ ಅವರು‌ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ‌ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವಿನಿಂದ, ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು ಮಹಿಳೆ ಅದಾಗಲೇ […]

ಉಡುಪಿಯ ಸರಕಾರಿ ಜಿಮ್ ನಲ್ಲಿ ಹೊಡೆದಾಟ- ದೂರು ಪ್ರತಿ ದೂರು ದಾಖಲು

ಉಡುಪಿ:ಪ್ರದೀಪ್‌ ಸ್ಯಾಮುವೆಲ್‌ (45) ಉದ್ಯಾವರ, ಉಡುಪಿ ಇವರು ದಿನಾಂಕ:31/12/2024 ರಂದು ಅಜ್ಜರಕಾಡು ಸರ್ಕಾರಿ ಎ ಸಿ ಜಿಮ್‌ ಗೆ ಎಂದಿನಂತೆ ಬೆಳಿಗ್ಗೆ 7:30 ಗಂಟೆಗೆ ತೆರಳಿ 8:30 ಗಂಟೆಗೆ ಜಿಮ್‌ ವರ್ಕೌಟ್‌ ಮುಗಿಸಿ ಪಾದರಕ್ಷೆಯನ್ನು ಬದಲಾಯಿಸಲು ಹೊರಗೆ ಹೊರಟು ಪಾದರಕ್ಷೆಯನ್ನು ಇಡುವ ಸ್ಥಳದಲ್ಲಿ ಅದೇ ಜಿಮ್‌ ನ ಸದಸ್ಯನಾದ ಲಕ್ಷೀತ್ ಎಂಬಾತನು ಫಿರ್ಯಾದರಾರರನ್ನು ಕಂಡು ನಿಮ್ಮನ್ನು ಜಿಮ್‌ ಟ್ರೈನರ್‌ ಉಮೇಶ್ ರವರು ಕರೆಯುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ಫಿರ್ಯಾದುದಾರರು ಉಮೇಶ್‌ ರವರ ಬಳಿ ಹೋಗಿ ವಿಚಾರಿಸಿದಾಗ ಅವರು […]

ಮಂಗಳೂರು: ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಮೃತ್ಯು.

ಮಂಗಳೂರು: ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿಯೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯರ ಪುತ್ರರಾದ ಪ್ರವಿತ್ ಆಚಾರ್ಯ(21) ಬಂಟ್ವಾಳ ತಾಲೂಕಿನ ವಿಟ್ಲದ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಎಸ್‌ಡಬ್ಲ್ಯು ವಿದ್ಯಾರ್ಥಿ. ಕಾಲೇಜು ವ್ಯಾಸಂಗದ ಉದ್ದೇಶದಿಂದ ಮಂಗಳೂರು ಸಮೀಪ ತನ್ನ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದರು. ಪ್ರವಿತ್ ಆಚಾರ್ಯ ಪಡೀಲ್ ಅಥವಾ ಬಿ.ಸಿ.ರೋಡ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ವಿಟ್ಲಕ್ಕೆ ಕಾಲೇಜಿಗೆ ಹೋಗುತ್ತಿದ್ದರು. ಎಂದಿನಂತೆ […]

ಕುಂದಾಪುರ: ಅಪೂರ್ಣ ಅರ್ಜಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ

udupixpress

ಉಡುಪಿ: ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ ಒಟ್ಟು 31 ಅಂಗನವಾಡಿ ಕಾರ್ಯಕರ್ತೆ ಹಾಗೂ 52 ಅಂಗನವಾಡಿ ಸಹಾಯಕಿಯರ ಗೌರವಸೇವೆ ಹುದ್ದೆಗಳಿಗೆ ಆಗಸ್ಟ್ 16 ರಂದು ನೇಮಕಾತಿ ಅಧಿಸೂಚನೆ ಹೊರಡಿಸಿ, ಸೆಪ್ಟಂಬರ್ 19 ರ ವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿರುತ್ತದೆ. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದ್ದು, ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್‌ನಲ್ಲಿ ಒಟ್ಟು 4 ವಿವಿಧ ಹಂತಗಳಿದ್ದು, ಇದರಲ್ಲಿ ಕೆಲವು ಅರ್ಜಿದಾರರಿಗೆ 1ನೇ […]

ಉಡುಪಿ:ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮ

udupixpress

ಉಡುಪಿ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರ ವತಿಯಿಂದ ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನವರಿ 03 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನೀತಿ ಹಾಗೂ ಕಾಯ್ದೆಗಳ ಕುರಿತು ಉಡುಪಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ, ಅಂದು ಮಧ್ಯಾಹ್ನ 2.30 ಕ್ಕೆ ಬ್ರಹ್ಮಾವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳ ಹಕ್ಕುಗಳ ಕುರಿತು ಅಹವಾಲು ಸ್ವೀಕಾರ ಹಾಗೂ ಸಂವಾದ ಕಾರ್ಯಕ್ರಮ […]