ಮೊದಲ ಬ್ಯಾಚ್ ಡ್ರೋನ್ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮಣಿಪಾಲದ MSDC RPTO

ಮಣಿಪಾಲ: ಡಾ. ಟಿಎಂಎ ಪೈ ಫೌಂಡೇಶನ್‌ನ ಘಟಕವಾದ ಎಂಎಸ್‌ಡಿಸಿ ರಿಮೋಟ್ ಪೈಲಟ್ ತರಬೇತಿ ಸಂಸ್ಥೆ (ಆರ್‌ಪಿಟಿಒ), ಡಿಜಿಸಿಎ ಪ್ರಮಾಣೀಕೃತ ಡ್ರೋನ್ ಪೈಲಟ್ ತರಬೇತಿಯ ಉದ್ಘಾಟನಾ ಬ್ಯಾಚ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತದೆ. ಡಿಸೆಂಬರ್ 26 ರಿಂದ ಡಿಸೆಂಬರ್ 30, 2024 ರವರೆಗೆ ನಡೆದ ಕಾರ್ಯಕ್ರಮವು ಮಹತ್ವಾಕಾಂಕ್ಷೆಯ ಪೈಲಟ್‌ಗಳಿಗೆ ಸೈದ್ಧಾಂತಿಕ ಜ್ಞಾನ, ತಾಂತ್ರಿಕ ಕೌಶಲ್ಯ ಮತ್ತು ಪ್ರಾಯೋಗಿಕ ಹಾರಾಟದ ಅನುಭವವನ್ನು ನೀಡಿತು. ಕಾರ್ಯಕ್ರಮದ ಮುಖ್ಯಾಂಶಗಳು: ಮೊದಲೆರಡು ದಿನಗಳು ಡ್ರೋನ್ ನಿಯಮಗಳು, ವಾಯುಬಲವಿಜ್ಞಾನ, ಹವಾಮಾನಶಾಸ್ತ್ರ ಮತ್ತು ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಒಳಗೊಂಡಿರುವ ತರಗತಿಗಳು […]
ಉಡುಪಿ: ಮಂಚಿ ಕುಮೇರಿಯ ಮಾಶಾಸನ ಫಲಾನುಭವಿ ಪ್ರಮೀಳಾ ಅವರಿಗೆ ‘ವಾತ್ಸಲ್ಯ ಮನೆ’ ಹಸ್ತಾಂತರ.

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ.) ವತಿಯಿಂದ ಉಡುಪಿ ತಾಲೂಕಿನ ಮಣಿಪಾಲ ವಲಯದ ಮಂಚಿ ಕುಮೇರಿಯ ಮಾಶಾಸನ ಫಲಾನುಭವಿ ಪ್ರಮೀಳಾ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತ ನಡೆಯಿತು. ಪ್ರಮೀಳಾ ಅವರು ಅತ್ಯಂತ ಸಂಕಷ್ಟದಲ್ಲಿದ್ದು ಯೋಜನೆಯ ವತಿಯಿಂದ ಪ್ರತೀ ತಿಂಗಳು ರೂ.1,000 ಮಾಶಾಸನ ಹಾಗೂ ‘ವಾತ್ಸಲ್ಯ’ ಆಹಾರ ಮಿಕ್ಸ್ ಪಡೆಯುತ್ತಿದ್ದರು. ಪ್ರಮೀಳಾ ಅವರಿಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲದೇ ಇರುವುದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ವಾತ್ಸಲ್ಯ ಮನೆ’ಯನ್ನು ನಿರ್ಮಿಸಿ […]
ಉಡುಪಿ: ಸಿಬ್ಬಂದಿ ಇಲ್ಲದೆ ವರ್ಷದ ಮೊದಲ ದಿನವೇ ಬಾಗಿಲು ಮುಚ್ಚಿದ 23ನೇ ಬೈರಂಪಳ್ಳಿ ಗ್ರಾಪಂ

ಉಡುಪಿ: ಸಿಬ್ಬಂದಿಗಳಿಲ್ಲದ ಕಾರಣದಿಂದ ವರ್ಷದ ಮೊದಲ ದಿನವೇ ಉಡುಪಿ ತಾಲೂಕಿನ 23ನೇ ಬೈರಂಪಳ್ಳಿ ಗ್ರಾಮ ಪಂಚಾಯತ್ ನ ಬಾಗಿಲು ಮುಚ್ಚಿದೆ. ಡಿ. 19ರ ಗುರುವಾರ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸದ ಒತ್ತಡ, ಮಾನಸಿಕ ಕಿರುಕುಳದಿಂದ ಕಾರ್ಯನಿರ್ವಹಿಸಲು ಸಂಕಷ್ಟವಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರ ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ, ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜ.1ರ ಬುಧವಾರ ಸಿಬ್ಬಂದಿ ಗ್ರಾಮ ಪಂಚಾಯತ್ ಕಚೇರಿಗೆ […]
ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಲಿ

ಉಡುಪಿ: ಆತ್ಮಹತ್ಯೆ ಹಾಗೂ ಬಾಣಂತಿ ಸಾವಿನಲ್ಲಿ ಸರಕಾರ ಪೈಪೋಟಿಗೆ ಬಿದ್ದಂತಿದೆ. ಇತಿಹಾಸದಲ್ಲೇ ಈ ರೀತಿಯ ದುರಾಡಳಿತವನ್ನು ರಾಜ್ಯ ಕಂಡಿರಲಿಲ್ಲ. ರಾಜ್ಯದಲ್ಲಿ ಹೆರಿಗೆಗೆ ಸರಕಾರಿ ಆಸ್ಪತ್ರೆಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್, ರಾಜ್ಯದಲ್ಲಿ ಪ್ರಿಯಾಂಕ ಖರ್ಗೆ ಮಿನಿ ಕಮಾಂಡ್. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ […]
ಜ.5ರಿಂದ ಉಡುಪಿಯಲ್ಲಿ 23ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆ

ಉಡುಪಿ: ತುಳುಕೂಟ ಉಡುಪಿ ಸಂಸ್ಥೆಯ ವತಿಯಿಂದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ 23ನೇ ವರ್ಷದ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆಯು ಇದೇ ಜನವರಿ 5ರಿಂದ 10ರ ವರೆಗೆ ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟ ಉಡುಪಿ ಸಂಸ್ಥೆಯ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ […]