ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಕುತ್ಯಾರು ಗ್ರಾಮದ ತಂತ್ರಿ ನಿವಾಸಿ ಮಥಾಯಿ (64) ಎಂಬ ವ್ಯಕ್ತಿಯು 2022 ರ ಫೆಬ್ರವರಿ 10 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಹಿಂದಿ, ಇಂಗ್ಲೀಷ್ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 08258-231333, 9480805421, ಕಾಪು ವೃತ್ತ […]

ಉಡುಪಿ:ವಿಕಲಚೇತನರ ರಿಯಾಯಿತಿ ಬಸ್‌ಪಾಸ್ : ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದ ವತಿಯಿಂದ ಸಕಾಲ ಸಂಬಂಧಿತ ಸೇವೆಯಾದ ವಿಕಲಚೇತನರ ರಿಯಾಯಿತಿ ಬಸ್ಸುಪಾಸನ್ನು ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ನಲ್ಲಿ ಅಗತ್ಯ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ 2024 ನೇ ಸಾಲಿನಲ್ಲಿ ವಿತರಿಸಿರುವ ಬಸ್ಸು ಪಾಸುಗಳ ಅವಧಿಯು 2024 ರ ಡಿಸೆಂಬರ್ 31 ಕ್ಕೆ ಮುಕ್ತಾಯಗೊಂಡಿದ್ದು, 2025 ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು ಜನವರಿ […]

ಉಡುಪಿ:ಕಲಾವಿದರು ಹಾಗೂ ತಂತ್ರಜ್ಞರ ನೇಮಕ :ಅರ್ಜಿ ಆಹ್ವಾನ

ಉಡುಪಿ: ಕಾರ್ಕಳ ಯಕ್ಷ ರಂಗಾಯಣವು ತಾನು ಸಿದ್ದಪಡಿಸುವ ನಾಟಕಗಳು ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 3 ಜನ ತಂತ್ರಜ್ಞರು (ಸಂಗೀತ/ಧ್ವನಿ ಸಂಯೋಜಕರು-1, ಬೆಳಕಿನ ವಿನ್ಯಾಸ-1, ರಂಗಸಜ್ಜಿಕೆ-ಪರಿಕರ-1) ಹಾಗೂ 12 ಮಂದಿ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ 18 ರಿಂದ 32 ವರ್ಷದೊಳಗಿನ ಕಲಾವಿದರು ಮತ್ತು 25 ರಿಂದ 40 ವರ್ಷದೊಳಗಿನ ತಂತ್ರಜ್ಞರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ನಾಟಕ ಶಾಲೆಯ ಪದವಿ, ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಣ ಪದವಿ ಅಥವಾ ಡಿಪ್ಲೋಮಾ ಹಾಗೂ ರಾಜ್ಯ […]