ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣವಿನ್ನು ಸುಲಭ: ಕೇವಲ ಏಳು ಗಂಟೆಗಳಲ್ಲಿ ತಲುಪಿಸಲಿದೆ ‘ಪರಾಲಿ’ ಹೈಸ್ಪೀಡ್ ದೋಣಿ!
ಮಂಗಳೂರು: ಲಕ್ಷದ್ವೀಪ ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ‘ಪರಾಲಿ’ ಎಂಬ ಹೆಸರಿನ ಹೈಸ್ಪೀಡ್ ದೋಣಿಯನ್ನು ಪ್ರಾರಂಭಿಸಲಾಗಿದೆ. ಈ ಹಡಗುಗಳ ಪರಿಚಯವು ಎರಡು ಸ್ಥಳಗಳ ನಡುವಿನ ಸಮುದ್ರ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ! ಮೇ 3 ರಂದು, ಹೊಸ ದೋಣಿಯು ಲಕ್ಷದ್ವೀಪದಿಂದ (Lakshadweep) 160 ಪ್ರಯಾಣಿಕರನ್ನು ಕೇವಲ ಏಳು ಗಂಟೆಗಳಲ್ಲಿ ಮಂಗಳೂರು ಹಳೆ ಬಂದರಿಗೆ ತಲುಪಿಸಿದೆ. ಹಿಂದೆ ಇದೇ ಪ್ರಯಾಣವು ಪೂರ್ಣಗೊಳ್ಳಲು 13 ಗಂಟೆಗಳನ್ನು ತೆಗೆದುಕೊಳ್ಳುತ್ತಿತ್ತು. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ […]
ಸರಸ್ವತಿ ಪ್ರಭಾ ಪುರಸ್ಕಾರ -2024: ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಆಯ್ಕೆ
ಕುಂದಾಪುರ: ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ ಇತ್ಯಾದಿ ಕ್ಷೇತ್ರಕ್ಕೆ ಹಾಗೂ ತಮ್ಮ ಸುತ್ತಲ ಸಮಾಜಕ್ಕೆ ಅಪಾರ ದೇಣಿಗೆ, ಸೇವ ನೀಡಿಯೂ ಕೊಂಕಣಿ ಭಾಷಾ ಸಮೂಹದಿಂದ ಗುರುತಿಸಲ್ಪಡದ ಅಪಾರ ಸಾಧಕರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆಗೆ 30ರಿಂದ 50 ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸ ಬೇಕೆನ್ನುವ ಉದ್ದೇಶದಿಂದ ಹುಬ್ಬಳ್ಳಿಯಿಂದ ನಿಯಮಿತವಾಗಿ ಪ್ರಕಟಗೊಳ್ಳುತ್ತಾ ಇದೀಗ ಪ್ರಕಟಣೆಯ […]
ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಬಸ್ ವ್ಯವಸ್ಥೆ
ಬೈಂದೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 15- ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ, ಎ.ಪಿ.ಆರ್.ಓ ಹಾಗೂ ಪಿ.ಓ ಆಗಿ ಕೆಲಸ ನಿರ್ವಹಿಸಲು ನೇಮಕಗೊಂಡ ಬೇರೆ ವಿಧಾನಸಭಾ ಕ್ಷೇತ್ರದ ಅಧಿಕಾರಿ ಹಾಗೂ ಸಿಬ್ಬಂದಿಗಳು ಮೇ 6 ರಂದು ಚುನಾವಣಾ ಕರ್ತವ್ಯ ನಿಮಿತ್ತ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಉಚಿತ ಬಸ್ಸುಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದ್ದು, ಬೈಂದೂರಿಗೆ ತೆರಳಲು ಈ […]
ಗಾಂಧಿ ಆಸ್ಪತ್ರೆಯ 30 ನೇ ವರ್ಷದ ವಾರ್ಷಿಕೋತ್ಸವ: ಮೇ.5 ರಂದು ಬೃಹತ್ ರಕ್ತದಾನ ಶಿಬಿರ
ಉಡುಪಿ: 1995 ಮೇ 5 ರಂದು ಪ್ರಾರಂಭವಾದ ಗಾಂಧಿ ಆಸ್ಪತ್ರೆಯು 30 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಪಂಚಮಿ ಟ್ರಸ್ಟ್ ಮತ್ತು ಪಂಚಲಹರಿ ಫೌಂಡೇಶನ್ ಆಶ್ರಯದಲ್ಲಿ ಮೇ.5 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ರಕ್ತನಿಧಿ, ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಕಾರ್ಯಕ್ರಮವನ್ನುದ್ಘಾಟಿಸಲಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ ಗಡಾದ್, ಉಡುಪಿ ಜಿಲ್ಲಾ ಸರ್ಜನ್, ಡಾ. ಎಚ್ ಅಶೋಕ್, ಐ.ಎಂ.ಎ ಉಡುಪಿ-ಕರಾವಳಿ […]
ಜೂ. 3 ರಂದು ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ
ಉಡುಪಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಚುನಾವಣಾ ಕಾರ್ಯಸೂಚಿಯನ್ನು ಹೊರಡಿಸಿರುತ್ತದೆ. ಮೇ 9 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ. ಮೇ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 20 ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 3 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ರ ವರೆಗೆ ಮತದಾನ ನಡೆಯಲಿದ್ದು, ಜೂನ್ 6 […]