ಉಡುಪಿ: ಕರಾವಳಿ ಕರಾಟೆಪಟುಗಳಿಗೆ ಕಪ್ಪುಪಟ್ಟಿ
ಉಡುಪಿ: ಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ಇದರ ವತಿಯಿಂದ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ (ರಿ) ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮಶಾಲೆ ಇಲ್ಲಿ 2024 ನೇ ಸಾಲಿನ ಕರಾಟೆ ಕಪ್ಪು ಪಟ್ಟಿ ವಿಭಾಗದ ಪರೀಕ್ಷೆಯು ಏ.28ರಂದು ಜರುಗಿತು. ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ಎನ್. ಬಿ. ವಿಜಯ ಬಲ್ಲಾಳ್,ಮುಖ್ಯ ಅತಿಥಿಗಳಾದ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀ ಪ್ರಭಾಕರ್ ಪೂಜಾರಿ, ಯಕ್ಷಗಾನ ಕಲಾಕೇಂದ್ರ ಗುಂಡಿಬೈಲು ಇದರ ಅಧ್ಯಕ್ಷರಾದ ಶ್ರೀ ಬಾಬು ಗೌಡ, ವ್ಯಾಯಾಮಶಾಲೆ […]
ಉಡುಪಿ: ಮೇ4 ಮತ್ತು 5 ರಂದು ನಿಟ್ಟೂರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ
ಉಡುಪಿ: ನಿಟ್ಟೂರು ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವ ಮತ್ತು ಮಹಾಅನ್ನಸಂತರ್ಪಣೆ ಇದೇ ಮೇ 4 ಮತ್ತು 5 ರಂದು ನಡೆಯಲಿದೆ. ದಿನಾಂಕ 4 ರ ಶನಿವಾರ ಬೆಳಿಗ್ಗೆ 7.30ಕ್ಕೆ ಗಜ ಕಂಬ ಮೂಹೂರ್ತ,10.30ಗೆ ಮಹಾಚಪ್ಪರದ ಆರೋಹಣ,12 ಗಂಟೆಗೆ ಮಹಾಪೂಜೆ,12.30 ಯಿಂದ 3 ರ ವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ.ಅಂದು ಸಂಜೆ 4.30ಕ್ಕೆ ದೈವಗಳ ದರ್ಶನ, 5.30 ಗಂಟೆಗೆ ದೈವಸ್ಥಾನದಿಂದ ಮುಖಮೂರ್ತಿ ಭಂಡಾರಗಳನ್ನು ಭವ್ಯ ಮೆರವಣಿಗೆಯಲ್ಲಿ ಮಹಾಚಪ್ಪರಕ್ಕೆ ತಂದು 7.30 ಕ್ಕೆ ಚಪ್ಪರದಲ್ಲಿ ಮಹಾ ಪೂಜೆ ನಡೆಯಲಿದೆ. […]
ಚೆಸ್ ಪ್ರತಿಭೆ ವೈಶಾಲಿ ರಮೇಶ್ ಬಾಬು ಅವರಿಗೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯ ಗರಿ: ಕೊನೆರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಸಾಲಿಗೆ ಸೇರಿದ ವೈಶಾಲಿ
ನವದೆಹಲಿ: ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಭಾರತೀಯ ಚೆಸ್ ಪ್ರತಿಭೆ ವೈಶಾಲಿ ರಮೇಶ್ ಬಾಬು ಅವರಿಗೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ನೀಡಿದೆ. ವೈಶಾಲಿ ಈಗ 3ನೇ ಭಾರತೀಯ ಮಹಿಳಾ ಗ್ರ್ಯಾಂಡ್ಮಾಸ್ಟರ್ ಆಗಿದ್ದು, ಕೊನೆರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಅವರ ಜೊತೆ ಪಟ್ಟಿಯಲ್ಲಿ ಸೇರಿದ್ದಾರೆ. ನಾಲ್ಕು ತಿಂಗಳ ಬಳಿಕ ವೈಶಾಲಿ ರಮೇಶ್ ಬಾಬು ಅವರನ್ನು ಅಧಿಕೃತವಾಗಿ ಗ್ರ್ಯಾಂಡ್ ಮಾಸ್ಟರ್ ಎಂದು ಘೋಷಿಸಲಾಗಿದೆ. FIDE ಇತ್ತೀಚಿನ ಬ್ಯಾಚ್ ಶೀರ್ಷಿಕೆ ಅರ್ಜಿಗಳನ್ನು ಅನುಮೋದಿಸಿದೆ. ಚೆಸ್ ಇತಿಹಾಸದಲ್ಲಿ ಮೊದಲ ಸಹೋದರ-ಸಹೋದರಿ ಗ್ರ್ಯಾಂಡ್ ಮಾಸ್ಟರ್ […]
ನೇಹಾ ಹೀರೇಮಠ್ ತಂದೆಯನ್ನು ಭೇಟಿ ಮಾಡಿದ ಗೃಹ ಸಚಿವ ಅಮಿತ್ ಶಾ: ನ್ಯಾಯದ ಭರವಸೆ
ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಕಾಂಗ್ರೆಸ್ ಕೌನ್ಸಿಲರ್ ನಿರಂಜನ್ ಹಿರೇಮಠ ಅವರನ್ನು ಭೇಟಿ ಮಾಡಿ, ಕಳೆದ ತಿಂಗಳು ಕಾಲೇಜು ಕ್ಯಾಂಪಸ್ನಲ್ಲಿ ಕೊಲೆಗೀಡಾದ ನೇಹಾಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕೌನ್ಸಿಲರ್ ಅವರ ಪುತ್ರಿ 23 ವರ್ಷದ ನೇಹಾ ಅವರನ್ನು ಏಪ್ರಿಲ್ 18 ರಂದು ಧಾರವಾಡದ ಕಾಲೇಜಿನ ಕ್ಯಾಂಪಸ್ನಲ್ಲಿ ಆಕೆಯ ಮಾಜಿ ಸಹಪಾಠಿ ಫಯಾಜ್ ಖೋಡುನಾಯ್ಕ್ ಚಾಕುವಿನಿಂದ ಇರಿದು ಕೊಂದಿದ್ದ.ಈ ಘಟನೆಯು ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. […]
ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ: “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ ಚಲನಚಿತ್ರಕ್ಕೆ ವಿಶೇಷ ಪ್ರಶಸ್ತಿ
ನವದೆಹಲಿ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಸಂಶೋಧಕಿ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿನಿ ಪೂರ್ಣಿಮಾ ರವಿ ನಿರ್ದೇಶಿಸಿರುವ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ ಚಲನಚಿತ್ರ ಪ್ರತಿಷ್ಠಿತ 14 ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2024ದಲ್ಲಿ (ಡಿ ಎಸ್ ಪಿ ಎಫ್ ಎಫ್ 24 DSPFF-24) ದಲ್ಲಿ ಚಲನ ಚಿತ್ರೋತ್ಸವದ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ. ಮಂಗಳವಾರ (ಏಪ್ರಿಲ್ 30ರಂದು) ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕಿ ಪೂರ್ಣಿಮಾ […]