ನೇಹಾ ಹೀರೇಮಠ್ ತಂದೆಯನ್ನು ಭೇಟಿ ಮಾಡಿದ ಗೃಹ ಸಚಿವ ಅಮಿತ್ ಶಾ: ನ್ಯಾಯದ ಭರವಸೆ

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಕಾಂಗ್ರೆಸ್ ಕೌನ್ಸಿಲರ್ ನಿರಂಜನ್ ಹಿರೇಮಠ ಅವರನ್ನು ಭೇಟಿ ಮಾಡಿ, ಕಳೆದ ತಿಂಗಳು ಕಾಲೇಜು ಕ್ಯಾಂಪಸ್‌ನಲ್ಲಿ ಕೊಲೆಗೀಡಾದ ನೇಹಾಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕೌನ್ಸಿಲರ್ ಅವರ ಪುತ್ರಿ 23 ವರ್ಷದ ನೇಹಾ ಅವರನ್ನು ಏಪ್ರಿಲ್ 18 ರಂದು ಧಾರವಾಡದ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಕೆಯ ಮಾಜಿ ಸಹಪಾಠಿ ಫಯಾಜ್ ಖೋಡುನಾಯ್ಕ್ ಚಾಕುವಿನಿಂದ ಇರಿದು ಕೊಂದಿದ್ದ.ಈ ಘಟನೆಯು ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.

ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ನಿರಂಜನ್ ಹಿರೇಮಠ್, ಕೇಂದ್ರ ಗೃಹ ಸಚಿವರು ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದು, ಅಗತ್ಯವಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಿ ಹೆಚ್ಚಿನ ತನಿಖೆ ನಡೆಸಬಹುದು ಎಂದರು.