ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ತೆರೆಗೆ
ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ಶುಕ್ರವಾರ ಕರಾವಳಿಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರು ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ”ಗಬ್ಬರ್ ಸಿಂಗ್” ಸಿನಿಮಾ ತೆರೆ ಕಾಣಲಿದೆ. ಗಬ್ಬರ್ ಸಿಂಗ್ […]
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಾಂಪ್ರದಾಯಿಕ ದಿನಾಚರಣೆ
ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಾಂಪ್ರದಾಯಿಕ ದಿನವನ್ನು ಆಚರಿಸಲಾಯಿತು. ಸದಾಕಾಲ ಶಿಸ್ತಿನಿಂದ ಸಮವಸ್ತ್ರವನ್ನು ಧರಿಸುತ್ತಿದ್ದ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನದಂದು ವಿವಿಧ ಬಗೆಯ ಉಡುಗೆಗಳಿಂದ ಕಂಗೊಳಿಸಿದರು. ವಿದ್ಯಾರ್ಥಿನಿಯರು ಸೀರೆ, ಲಂಗ ದಾವಣಿ ತೊಟ್ಟಿದ್ದರೆ ವಿದ್ಯಾರ್ಥಿಗಳು ಬಿಳಿ ಪಂಚೆ, ಶರ್ಟು ,ಕುರ್ತಾ ಹೆಗಲ ಮೇಲೊಂದು ಶಾಲು ಧರಿಸಿ ಸಂಭ್ರಮದಿಂದ ಓಡಾಡುತ್ತಾ ಗಮನ ಸೆಳೆದರು. ಹಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿದ್ಯಾರ್ಥಿಗಳು ತರಗತಿಯನ್ನು ವಿವಿಧ ಆಚರಣೆಯನ್ನು ಪ್ರತಿನಿಧಿಸುವ ರೀತಿಯಲ್ಲಿ ಸಂಭ್ರಮದಿಂದ ಅಲಂಕರಿಸಿ ಹಾಗೂ ಪ್ರಾಚ್ಯ ವಸ್ತುಗಳ ಪ್ರದರ್ಶನ ಹಾಗೂ ಹಬ್ಬದ […]
ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನಸಾಮಾನ್ಯರು ಮನವಿ ಮಾಡಿದಾಗ ಕೂಡಲೇ ಸ್ಪಂದಿಸಿ, ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರ ಅಥವಾ ಗ್ರಾಮೀಣ ಭಾಗದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ನೀರಿನ […]
ಬಿ.ಸಿ.ಎ: ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನದ ಕಲಿಕೆ
ವೃತ್ತಿಪರ ಕೋರ್ಸ್ಗಳ ತರಬೇತಿಯೊಂದಿಗೆ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಉಡುಪಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಅಂಗಸಂಸ್ಥೆಯನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಬಿ.ಕಾಂ ಶಿಕ್ಷಣದ ಜೊತೆಗೆ ಸಿಎ ಮತ್ತು ಸಿಎಸ್ಕೋರ್ಸ್ತರಬೇತಿಯನ್ನು ನೀಡುತ್ತಿದೆ ಹಾಗೂ ಕಂಪ್ಯೂಟರ್ಕ್ಷೇತ್ರದಲ್ಲಿಅತ್ಯಂತ ಬೇಡಿಕೆಯ ಗುಣಮಟ್ಟದ ಬಿ.ಸಿ.ಎ ಪದವಿಯನ್ನು ನೀಡುತ್ತಿದೆ. ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ಬಿ.ಸಿ.ಎ ಪಠ್ಯದ ಕಲಿಕೆಯನ್ನು ಪ್ರಾಯೋಗಿಕ ಅಭ್ಯಾಸದೊಂದಿಗೆ ಸಂಯೋಜಿಸುವ ಮೂಲಕ ಕಂಪ್ಯೂಟರ್ಅಪ್ಲಿಕೇಶನ್ಗಳಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾಸಂಸ್ಥೆಯು […]
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ ರಾಮದಾಸ್ ಎಂ ಪೈ ಬ್ಲಾಕ್ ಉದ್ಘಾಟನೆ
ಮಣಿಪಾಲ: ಡಾ ಟಿ ಎಂ ಎ ಪೈ ಅವರ 126ನೇ ಜನ್ಮ ದಿನಾಚರಣೆಯ ಅಂಗವಾಗಿ ಎಂ ಈ ಎಂ ಜಿ ಮುಖ್ಯಸ್ಥರು ಹಾಗೂ ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ ರಂಜನ್ ಆರ್ ಪೈ ಅವರ ಉಪಸ್ಥಿತಿಯಲ್ಲಿ ಮಾಹೆ ಟ್ರಸ್ಟಿ ವಸಂತಿ ಆರ್ ಪೈ ಅವರು ಮಂಗಳವಾರದಂದು ಡಾ ರಾಮದಾಸ್ ಎಂ ಪೈ ಬ್ಲಾಕ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್, ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ ಪ್ರೈ. […]