ಡಾ‌.ಉಮೇಶ್ ಪ್ರಭು ಮಡಿಲಿಗೆ ಬಾಲ‌ ವಾತ್ಸಲ್ಯ ಸಿಂಧು ಪ್ರಶಸ್ತಿ.

ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀಕೃಷ್ಣ ಬಾಲನಿಕೇತನ, ವಿಶ್ವೇಶತೀರ್ಥ ಸೇವಾಧಾಮ, ಶ್ರೀ ಕೃಷ್ಣ ಸೇವಾಧಾಮ‌ ಟ್ರಸ್ಟ್ ವತಿಯಿಂದ ಬುಧವಾರ ಕೊಡಮಾಡುವ ಬಾಲ್ಯ ವಾತ್ಸಲ್ಯ ಸಿಂಧು ಪ್ರಶಸ್ತಿಯನ್ನು ಸಂತೆಕಟ್ಟೆ ಕೃಷ್ಣಾನುಗ್ರಹ ಸಂಸ್ಥೆ ಚೇರ್ಮನ್ ಡಾ.ಉಮೇಶ್ ಪ್ರಭು ಅವರಿಗೆ ಪ್ರಧಾನ ಮಾಡಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಎಲ್ಲಿಯೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಇರಬಾರದು. ಶಿಕ್ಷಣದ ಜತೆಗೆ ಮೌಲ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು ಎಂದು ಡಾ.ಉಮೇಶ್ ಪ್ರಭು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 60ರ ಸಂಭ್ರಮದಲ್ಲಿರುವ ಪೇಜಾವರ ಸ್ವಾಮೀಜಿಯವರನ್ನು ಬಾಲನಿಕೇತನ ಟ್ರಸ್ಟ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. […]

ಎಲ್ಲಾ ರೀತಿಯ ದಂತ ಸಮಸ್ಯೆಗಳಿಗೆ ಡಾ. ತಲ್ಲಾಣಿ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಗೆ ಭೇಟಿ ನೀಡಿ

ಉಡುಪಿ: ಇಲ್ಲಿನ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ, ಆಲ್ವಿನ್ ಬೇಕರಿ ಎದುರುಗಡೆ ಕಾರ್ಯನಿರ್ವಹಿಸುತ್ತಿರುವ ಡಾ.ತಲ್ಲಾಣಿ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ನಲ್ಲಿ ಸೇವೆ ಪ್ರಾರಂಭವಾಗಿದ್ದು ಡಾ. ಸಚಿನ್ ತಲ್ಲಾಣಿ ಹಾಗೂ ಇತರ ತಜ್ಞರು ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ ಸೇವೆಗೆ ಲಭ್ಯರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಅಪಾಯಿಂಟ್ಮೆಂಟ್ಗಳಿಗಾಗಿ ಸಂಪರ್ಕಿಸಿ: 9901008538

ಮೇ.5: ಮೂಡಬಿದಿರೆಯಲ್ಲಿ “ಕ್ರಿಯೇಟಿವ್ ಪುಸ್ತಕಮನೆ” ಶುಭಾರಂಭ

ಕ್ರಿಯೇಟಿವ್ ಪುಸ್ತಕ ಮನೆ ಮೂಡಬಿದಿರೆಯ ಪಂಚರತ್ನ ಕಟ್ಟಡದಲ್ಲಿ ಮೇ 5ರಂದು ಬೆಳಗ್ಗೆ 10.00ಗಂಟೆಗೆ ಶುಭಾರಂಭಗೊಳ್ಳಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಹಾಗೂ ಯುವರಾಜ್ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳು, ಕಲ್ಲಬೆಟ್ಟು ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಕಾರ್ಕಳದಲ್ಲಿ ‘ಪುಸ್ತಕ ಮನೆ’ಯು ಪುಸ್ತಕ ಪ್ರೇಮಿಗಳ, ಸಾಹಿತ್ಯಾಸಕ್ತರ ಮನಗೆದ್ದಿದ್ದು ಕರಾವಳಿಯಲ್ಲಿ ಸುಪ್ರಸಿದ್ಧ ಪುಸ್ತಕ ಮಳಿಗೆಯಾಗಿ ಗುರುತಿಸಿಕೊಂಡಿದೆ. ಪುಸ್ತಕ ಪ್ರಕಾಶನವು ಸೇರಿದಂತೆ ‘ಪುಸ್ತಕ ಸಂತೆ’, ಸರಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ಒದಗಿಸುವ ‘ಪುಸ್ತಕ […]

ಕಮಲಶಿಲೆ ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನ: ಶಿಲಾಮಯ ರಾಜಗೋಪುರ ಲೋಕಾರ್ಪಣೆ

ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಬ್ರಹ್ಮಕುಂಭಾಭಿಷೇಕವು ಬುಧವಾರದಂದು ವಿವಿಧ ವಿಧಿ-ವಿಧಾನಗಳೊಂದಿಗೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತರಿಂದ ಜರಗಿತು. ನೂತನವಾಗಿ ಶಿಲಾಮಯಗೊಂಡ ರಾಜಗೋಪುರವನ್ನು ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ತತ್ತರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಶ್ರೀ ಬ್ರಾಹ್ಮಿದುರ್ಗಪರಮೇಶ್ವರಿ ಅಮ್ಮನವರಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿಸಿ, ಅನಂತರ ತಮ್ಮ ಅಮೃತ ಹಸ್ತರಿಂದ ರಾಜಗೋಪುರವನ್ನು ಲೋಕಾರ್ಪಣೆಗೊಳ್ಳಿಸಿದರು. ಆನಂತರ ನಡೆದ […]

ಶ್ವಾನಗಳಿಗೆ ಉಚಿತ ರೇಬೀಸ್ ರೋಗ ಲಸಿಕಾ ಕಾರ್ಯಕ್ರಮ

ಉಡುಪಿ: ಎ.ಎಸ್.ಸಿ.ಎ.ಡಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ರೇಬೀಸ್ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಎಲ್ಲಾ ಶ್ವಾನಗಳ ಮಾಲೀಕರು ತಮ್ಮ ಸಮೀಪದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ, ಶ್ವಾನಗಳಿಗೆ ಉಚಿತವಾಗಿ ರೇಬೀಸ್ ರೋಗ ನಿಯಂತ್ರಣ ಲಸಿಕೆಯನ್ನು ಹಾಕಿಸುವುದರ ಮೂಲಕ ಇದರ ಸದುಪಯೋಗ ಪಡೆಯಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.