ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯ ಮಾಪನ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಬೈಂದೂರು ಮತ್ತು ಕುಂದಾಪುರ ತಾಲೂಕಿನಲ್ಲಿ ಪ್ರಥಮ ಸ್ಥಾನ.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, 11 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ಸ್ಥಾನ ಪಡೆಯುವುದರ ಮೂಲಕ ಸಾಧನೆ ಮೆರೆದಿದೆ. ವಾಣಿಜ್ಯ ವಿಭಾಗದಲ್ಲಿ ವಿನಯ್ ಶ್ಯಾನುಭಾಗ್ 593 ಅಂಕದೊಂದಿಗೆ ರಾಜ್ಯಕ್ಕೆ 5ನೇ ಸ್ಥಾನ ಪಡೆದು ತಾಲೂಕಿಗೆ ಪ್ರಥಮ ಸ್ಥಾನ. ವಿಜ್ಞಾನ ವಿಭಾಗದಲ್ಲಿ ಶ್ರೀ ಲಕ್ಷ್ಮಿ ಹೆಬ್ಬಾರ್ 593 ಅಂಕದೊಂದಿಗೆ […]
ಬ್ರಹ್ಮಾವರ: ಎಸ್ಎಮ್ಎಸ್ ಕಾಲೇಜು 2024- 25ಕ್ಕೆ ಪ್ರಥಮ ಪಿಯುಸಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ.

ಎಸ್ಎಮ್ಎಸ್ ಕಾಲೇಜು ಬ್ರಹ್ಮಾವರ 2024- 25ಕ್ಕೆ ಪ್ರಥಮ ಪಿಯುಸಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಕೋರ್ಸ್ಗಳು ಲಭ್ಯವಿದ್ದು ಕೋರ್ಸ್ ಗಳ ವಿವರ ಈ ಕೆಳಗಿನಂತಿದೆ. ವಿಜ್ಞಾನ ವಿಭಾಗ:ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ (PCMB)ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್. ವಿಜ್ಞಾನ (PCMC)ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ. ವಾಣಿಜ್ಯ ವಿಭಾಗ:ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ (HEBA)ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನಗಳು, ಅಕೌಂಟೆನ್ಸಿ, ಕಂಪ್ಯೂಟರ್. ವಿಜ್ಞಾನ (EBACS)ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನಗಳು, ಲೆಕ್ಕಶಾಸ್ತ್ರ, ಅಂಕಿಅಂಶಗಳು (ಇಬಿಎಎಸ್)ವ್ಯಾಪಾರ ಅಧ್ಯಯನಗಳು, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ, ಕಂಪ್ಯೂಟರ್. […]
ಜೆಇಇ ಮೈನ್ ಅಂತಿಮ ಫಲಿತಾಂಶ–2024: ಜ್ಞಾನಸುಧಾದ 8 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಫೇಸ್‍ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪಿಯು ಕಾಲೇಜಿನ 8 ವಿದ್ಯಾರ್ಥಿಗಳು 99ಗಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದು, ವಿದ್ಯಾರ್ಥಿಗಳಾದ ಬಿಪಿನ್ ಜೈನ್.ಬಿ.ಎಂ 99.8252192 ಪರ್ಸಂಟೈಲ್, ಪ್ರಿಯಾಂಶ್ ಎಸ್.ಯು 99.7914848 ಪರ್ಸಂಟೈಲ್, ಚಿರಂತನ ಜೆ.ಎ 99.7560565 ಪರ್ಸಂಟೈಲ್, ನಿಮೇಶ್ ಆರ್ ಆಚಾರ್ಯ 99.5745755 ಪರ್ಸಂಟೈಲ್, ರಿಷಿತ್ ವೇಣು ಬಿಳಿಮಗ 99.4436757 ಪರ್ಸಂಟೈಲ್, ಕ್ಷಿರಾಜ್ ಎಸ್ ಆಚಾರ್ಯ 99.2863832 ಪರ್ಸಂಟೈಲ್, ಶ್ರೀದಾ ಕಾಮತ್ 99.1701862 ಪರ್ಸಂಟೈಲ್, ಪ್ರತೀಕ್ […]
ದೇಶಾದ್ಯಂತ ಎರಡನೇ ಹಂತದ ಮತದಾನ: ಕರ್ನಾಟಕದಲ್ಲಿ 69 ಪ್ರತಿಶತದಷ್ಟು ಮತದಾನ; ಶೇ.81.48 ಮತದಾನದೊಂದಿಗೆ ಮಂಡ್ಯ ಜಿಲ್ಲೆಗೆ ಮೊದಲನೆ ಸ್ಥಾನ

ಬೆಂಗಳೂರು: ಏಪ್ರಿಲ್ 26 ರಂದು 2024 ರ ಲೋಕಸಭಾ ಚುನಾವಣೆಯ (Loksabha Elections) ಎರಡನೇ ಹಂತದಲ್ಲಿ ನಡೆದ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನವು ಮುಕ್ತಾಯಗೊಂಡಿದೆ, ರಾಜ್ಯದಲ್ಲಿ 69 ಪ್ರತಿಶತದಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ತಾತ್ಕಾಲಿಕ ವರದಿ ತಿಳಿಸಿದೆ. ಸುಡು ಬಿಸಿಲನ್ನೂ ಲೆಕ್ಕಿಸದೆ ಮತದಾರರು ಅತ್ಯುತ್ಸಾಹದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ತಮ್ಮ ಜವಾಬ್ದಾರಿ ಪೂರೈಸಿದ್ದಾರೆ. ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತಿ ಹೆಚ್ಚು ಶೇ.81.48ರಷ್ಟು ಮತದಾನವಾಗಿದ್ದು, ಕೋಲಾರದಲ್ಲಿ ಶೇ.78.07 ಹಾಗೂ ಬೆಂಗಳೂರು […]
ದ.ಕ ಜಿಲ್ಲೆಯ ನಕ್ಸಲ್ ಕೇಂದ್ರಿತ ಬಾಂಜಾರುಮಲೆಯಲ್ಲಿ ಶೇ.100 ಮತದಾನದ ದಾಖಲೆ

ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಎಂಬಂತೆ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಕೇಂದ್ರಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ದಾಖಲೆ ನಿರ್ಮಿಸಿದೆ. ಮತಗಟ್ಟೆ ಸಂಖ್ಯೆ 86 ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. ಕಳೆದ ಬಾರಿ 2019 ರಲ್ಲಿ ಇಲ್ಲಿ ಶೇ.99 ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಟ್ ಸಮಿತಿ […]