ಕಾಂಗ್ರೆಸ್ ಕಾರ್ಪೋರೇಟರ್ ಮಗಳ ಹತ್ಯೆ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು: ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಭೀಕರ ಹತ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಘರ್ಷಣೆಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನ ಮಗಳಿಗೆ ಆಕೆ ಓದುತ್ತಿದ್ದ ಕಾಲೇಜಿನ ಹಳೆ ವಿದ್ಯಾರ್ಥಿ ಫಯಾಜ್ ಎಂಬಾತ ಏಳು ಬಾರಿ ಚಾಕುವಿನಿಂದ ಇರಿದಿದ್ದಾನೆ. ಆತನ ಪ್ರೀತಿಯನ್ನು ನಿರಾಕರಿಸಿದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. 23 ವರ್ಷದ ನೇಹಾ ಹಿರೇಮಠ್ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್‌ನ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಫಯಾಜ್ ಖೋಂಡುನಾಯಕ್ ಈ ಹಿಂದೆ ಆಕೆಯ ಸಹಪಾಠಿಯಾಗಿದ್ದ. ಹಿರಿಯ […]

ಗುಜರಾತ್ ನ ಕಚ್ ನಲ್ಲಿ ದೊರೆಯಿತು ಅತಿದೊಡ್ಡ ಸರೀಸೃಪ ‘ವಾಸುಕಿ ಇಂಡಿಕಸ್’ ಹಾವಿನ ಪಳೆಯುಳಿಕೆ!! 47 ಮಿಲಿಯನ್ ವರ್ಷಗಳ ಹಿಂದೆ ಬದುಕಿತ್ತು 15 ಮೀಟರ್ ಉದ್ದದ ಈ ಹಾವು…

ಗಾಂಧಿನಗರ: ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯ ಸಂಶೋಧಕರು ಮಧ್ಯ ಇಯಸೀನ್ ಎಂದು ಕರೆಯಲ್ಪಡುವ ಅವಧಿಯಲ್ಲಿ 47 ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಮತ್ತು ಬಹುಶಃ ಬದುಕಿದ್ದ ಅತಿದೊಡ್ಡ ಹಾವುಗಳ ಪಳೆಯುಳಿಕೆಗಳ ಆವಿಷ್ಕಾರವನ್ನು ವರದಿ ಮಾಡಿದ್ದಾರೆ. ಪಳೆಯುಳಿಕೆಗಳು ಗುಜರಾತ್‌ನ ಕಚ್‌ನಲ್ಲಿ ಕಂಡುಬಂದಿವೆ ಮತ್ತು ವಾಸುಕಿ ಇಂಡಿಕಸ್ ಎಂಬ ಹೆಸರಿನ ಸರೀಸೃಪವು 10 ಮೀಟರ್ ಮತ್ತು 15 ಮೀಟರ್ ಉದ್ದ ಅಥವಾ ಆಧುನಿಕ ಶಾಲಾ ಬಸ್‌ನಷ್ಟು ದೊಡ್ಡದಾಗಿರಬಹುದು ಎಂದು ಅಂದಾಜಿಸಲಾಗಿದೆ!! ಇದು ಈಗ ಅಳಿವಿನಂಚಿನಲ್ಲಿರುವ ಮ್ಯಾಡ್ಸೊಯಿಡೆ […]

ಕಾಂಗ್ರೆಸ್ ನ ಕಾಮಾಲೆ ಕಣ್ಣಿಗೆ ಜಗವೆಲ್ಲಾ ಹಳದಿ: ಕಿದಿಯೂರು ಉದಯಕುಮಾರ್ ಶೆಟ್ಟಿ

ಉಡುಪಿ: ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ಜಾಹೀರಾತುಗಳಲ್ಲಿ ಬಿಜೆಪಿ ಕರ್ನಾಟಕದ ಜನತೆಗೆ ಚೆಂಬು ನೀಡಿದೆ ಎಂದು ಪ್ರಚಾರ ಮಾಡುತ್ತಿರುವುದು, ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯಕುಮಾರ್ ಶೆಟ್ಟಿ ವ್ಯಂಗ್ಯ ಮಾಡಿದ್ದಾರೆ. ಅವರು ಉಡುಪಿ ವಿಧಾನಸಭಾ ಕ್ಷೇತ್ರದ ದೊಡ್ಡಣಗುಡ್ಡೆಯ ಮಣೋಲಿಗುಜ್ಜಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು ನಾಲ್ಕು ತಲೆಮಾರುಗಳ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಕನಿಷ್ಠ ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಾಗದೇ ಜನರ ಕೈಗೆ […]

ನಮ್ಮೂರ ಡಾಕ್ಟರ್ ನಮ್ಮೂರ ಹೆಮ್ಮೆ : ಯು.ಪಿ.ಎಸ್.ಸಿ.ಪರೀಕ್ಷೆಯಲ್ಲಿಯೂ ಕರಾವಳಿಗೆ ಗೆಲ್ಮೆ: ಯುಪಿ ಎಸ್ ಸಿ ಟಾಪರ್ ಶ್ರೇಯಸ್ ಬಗ್ಗೆ ಪ್ರೊ. ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಅವರ ಬರಹ

ಪ್ರತಿ ವರುಷದಂತೆ ಯು.ಪಿ.ಎಸ್.ಸಿ .ಪರೀಕ್ಷಾ ಫಲಿತಾಂಶ ಬಂದಾಗ ಆ ಪಟ್ಟಿಯಲ್ಲಿ ನಮ್ಮ ರಾಜ್ಯದವರಿದ್ದಾರಾ?..ಕೊನೆಗೆ ನಮ್ಮ ಜಿಲ್ಲೆಯವರಿದ್ದಾರಾ? ಅಂತ ಹುಡುಕುವುದು.. ಅಂತೂ ಕೊನೆಗೂ ನಮ್ಮ ಊರು ಬೈಂದೂರಿನ ಉಪುಂದದ ಡಾಕ್ಟರ್ ಈ ಬಹು ಪ್ರತಿಷ್ಠಿತ ಪರೀಕ್ಷೆಯಲ್ಲಿ 651ನೇ ಸ್ಠಾನದಲ್ಲಿ ಪಾಸಾದವರು ನಮ್ಮೂರ ಡಾ. ಶ್ರೇಯಸ್.ಜಿ.ರಾವ್. ಅನ್ನುವ ಸಿಹಿ ಸುದ್ದಿ ನಮ್ಮ ಜಿಲ್ಲೆಗೆ ಬಂದು ತಲುಪಿದೆ. ಈ ಕಠಿಣ ಪರೀಕ್ಷೆಯಲ್ಲಿ ಹಿರಿಯ ಸಾಧನೆಗೈದ ಡಾ.ಶ್ರೇಯಸ್.ಜಿ.ರಾವ್ ರವರ ಜೊತೆ ನಾನು ನಡೆಸಿದ ಟೆಲಿ ಫೇೂನಿಕ್ ಸಂದಶ೯ನ ನಮ್ಮ ಯುವ ಕನಸುಗಾರ ವಿದ್ಯಾರ್ಥಿಗಳಿಗೆ […]

ಅವಿಭಜಿತ ಜಿಲ್ಲೆಗೆ ತಂಪೆರೆದ ಮಳೆ; ಗುಡುಗು-ಸಿಡಿಲಿನ ಅಬ್ಬರ

ಉಡುಪಿ/ ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಶನಿವಾರ ಮುಂಜಾನೆ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪದಿಂದ ಜನರನ್ನು ತಾತ್ಕಾಲಿಕವಾಗಿ ರಕ್ಷಿಸಿದೆ. ಮಂಗಳೂರು ನಗರದಲ್ಲಿಯೂ ಉತ್ತಮ ಮಳೆಯಾಗಿದೆ. ಉಡುಪಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಹಲವು ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಶುಕ್ರವಾರವೂ ದ.ಕ ಜಿಲ್ಲೆಯ ಒಳನಾಡಿನ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ ಜಿಲ್ಲೆಗಳಲ್ಲಿ ಕೂಡಾ ಮಳೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ರಾ.ಹೆ.ಕಾಮಗಾರಿಯಿಂದಾಗಿ ಮಳೆರಾಯನ ಆಗಮನ […]