ಅವಿಭಜಿತ ಜಿಲ್ಲೆಗೆ ತಂಪೆರೆದ ಮಳೆ; ಗುಡುಗು-ಸಿಡಿಲಿನ ಅಬ್ಬರ

ಉಡುಪಿ/ ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಶನಿವಾರ ಮುಂಜಾನೆ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪದಿಂದ ಜನರನ್ನು ತಾತ್ಕಾಲಿಕವಾಗಿ ರಕ್ಷಿಸಿದೆ. ಮಂಗಳೂರು ನಗರದಲ್ಲಿಯೂ ಉತ್ತಮ ಮಳೆಯಾಗಿದೆ. ಉಡುಪಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಹಲವು ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಶುಕ್ರವಾರವೂ ದ.ಕ ಜಿಲ್ಲೆಯ ಒಳನಾಡಿನ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ ಜಿಲ್ಲೆಗಳಲ್ಲಿ ಕೂಡಾ ಮಳೆಯಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಆಲಿಕಲ್ಲು ಮಳೆಯಾಗಿದೆ.

ರಾ.ಹೆ.ಕಾಮಗಾರಿಯಿಂದಾಗಿ ಮಳೆರಾಯನ ಆಗಮನ ಸವಾರರಿಗೆ ಕಿರಿಕಿರಿಯನ್ನುಂಟುಮಾಡಿದೆ.