ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಾಳೆ ಅಷ್ಟಪವಿತ್ರ ನಾಗಮಂಡಲೋತ್ಸವ.

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.18 ಗುರುವಾರ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಳೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 6-15ರಿಂದ: ಪುಣ್ಯಾಹ ಸರ್ಪಸೂಕ್ತ ಹೋಮ, ಪುರುಷಸೂಕ್ತ ಹೋಮ, ಪಾರಾಯಣ. ಬೆಳಿಗ್ಗೆ 7-30ರಿಂದ: ಕಲಶಾಭಿಷೇಕ ಪ್ರಾರಂಭ. ಬೆಳಿಗ್ಗೆ 9-00ರಿಂದ: ಬ್ರಹ್ಮಕಲಶಾಭಿಷೇಕ ಪೂಜೆ, ದಾನಾದಿಗಳು, ದಶದಾನ, ವಟುಆರಾಧನೆ, ಬ್ರಾಹ್ಮಣ ಆರಾಧನೆ, ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಪೂಜಾ, ಸಂದರ್ಶನ, ಫಲ್ಲಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ […]

ರಂಗೇರಿದ ಚುನಾವಣಾ ಕಣ: ಹಿಂದುತ್ವದ ಭದ್ರಕೋಟೆ ಉಡುಪಿಗೆ ಯೋಗಿ ಆದಿತ್ಯನಾಥ್, ಅಣ್ಣಾಮಲೈ ಆಗಮನ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿಗೆ ಆಗಮಿಸಲಿದೆ ಎನ್ನಲಾಗಿದೆ. ಎ. 19ರಂದು ಉಪ್ಪೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ಹಾಗೂ ಸಂಸದೆ ಸುಮಲತಾ, ಎ. 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಎ. 21ರಂದು ಕಾಪುವಿಗೆ ಸಂಸದ ಪ್ರತಾಪ್‌ ಸಿಂಹ, ಎ. 22ರಂದು ಹಿರಿಯಡಕಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಎ. 24ರಂದು […]

ಬ್ರಹ್ಮಾವರ: ಮತದಾನದ ಕರ್ತವ್ಯ ಪೂರೈಸಿ ಇಹಲೋಕ ತ್ಯಜಿಸಿದ ಹಿರಿ ಜೀವ

ಬ್ರಹ್ಮಾವರ: ವಯೋವೃದ್ದರಾಗಿದ್ದ ಹಿರಿ ಜೀವವೊಂದು ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಸಾವನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪಿ.ಯಶೋಧಾ ನಾರಾಯಣ ಉಪಾಧ್ಯ (83) ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗವು ದಿವ್ಯಾಂಗ ಹಾಗೂ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಅದಾಗಲೇ ಜಿಲ್ಲೆಯಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧಾ ಕೂಡಾ ಈ ಸೌಲಭ್ಯ ಬಳಸಿ ಮನೆಯಲ್ಲೆ ಮತದಾನ […]

ರಾಮನವಮಿಯಂದು ರಾಮಲಲ್ಲಾನ ಹಣೆಗೆ ತಿಲಕವಿಟ್ಟ ಸೂರ್ಯ!!

ಅಯೋಧ್ಯೆ: ಶ್ರೀ ರಾಮನವಮಿಯ ಪವಿತ್ರ ಸಂದರ್ಭದಲ್ಲಿ 500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭವ್ಯ ರಾಮನವಮಿಯನ್ನು ರಾಮಜನ್ಮಭೂಮಿಯಲ್ಲಿ ಆಚರಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಸೂರ್ಯವಂಶಿ ರಾಮನಿಗೆ ಸೂರ್ಯತಿಲಕ (Surya Tilak) ವನ್ನಿಡಲಾಗಿದೆ. ವಿಶಿಷ್ಟ ಮಸೂರಗಳನ್ನು ಬಳಸಿ ಮಧ್ಯಾಹ್ನದ ಸೂರ್ಯನ ಕಿರಣಗಳು ನೇರವಾಗಿ ರಾಮವಿಗ್ರಹದ ಹಣೆಗೆ ತಿಲವನ್ನಿಡುವಂತೆ ಮಾಡಲಾಗಿದೆ.

ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರೂ 2.59 ಕೋಟಿ ನಿವ್ವಳ ಲಾಭ.

ಉಡುಪಿ: ಪರ್ಕಳದಲ್ಲಿ ಪ್ರಧಾನ ಕಚೇರಿ ಹೊಂದಿ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ 6 ಶಾಖೆಗಳನ್ನು ತೆರೆದು ಸದಸ್ಯರ ಸೇವೆಯಲ್ಲಿ ನಿರತವಾಗಿರುವ ಸೊಸೈಟಿಯು ಆರ್ಥಿಕ ವರ್ಷ 2023-24 ರಲ್ಲಿ ರೂ. 1.80 ಕೋಟಿಗೂ ಮಿಗಿಲಾದ ಪಾಲುಬಂಡವಾಳ, ರೂ . 11.70 ಕೋಟಿಗೂ ಮಿಕ್ಕಿ ಸ್ವಂತ ನಿಧಿಗಳನ್ನು ಸ್ಥಾಪಿಸಿ, ರೂ 116.86 ಕೋಟಿ ಠೇವಣಿ, ರೂ 82.43 ಕೋಟಿ ಸಾಲ ಹೊರಬಾಕಿಯೊಂದಿಗೆ, ರೂ 478 ಕೋಟಿ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿ ರೂ 2.59 ಕೋಟಿ ನಿವ್ವಳ ಲಾಭ ಗಳಿಸಿತು. […]