ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಾಳೆ ಅಷ್ಟಪವಿತ್ರ ನಾಗಮಂಡಲೋತ್ಸವ.

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.18 ಗುರುವಾರ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ನಾಳೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು:

ಸಂಜೆ 6-15ರಿಂದ: ಪುಣ್ಯಾಹ ಸರ್ಪಸೂಕ್ತ ಹೋಮ, ಪುರುಷಸೂಕ್ತ ಹೋಮ, ಪಾರಾಯಣ.

ಬೆಳಿಗ್ಗೆ 7-30ರಿಂದ: ಕಲಶಾಭಿಷೇಕ ಪ್ರಾರಂಭ.

ಬೆಳಿಗ್ಗೆ 9-00ರಿಂದ: ಬ್ರಹ್ಮಕಲಶಾಭಿಷೇಕ ಪೂಜೆ, ದಾನಾದಿಗಳು, ದಶದಾನ, ವಟುಆರಾಧನೆ, ಬ್ರಾಹ್ಮಣ ಆರಾಧನೆ, ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಪೂಜಾ, ಸಂದರ್ಶನ, ಫಲ್ಲಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 1-00ರಿಂದ ಭಕ್ತಿ ಸಿಂಚನಾ (ದೀಪ್ತಿ ಭಟ್ ಮತ್ತು ಬಳಗ, ಮೂಡುಬಿದ್ರೆ ಇವರಿಂದ)ಮಧ್ಯಾಹ್ನ3.30ರಿಂದ: ಸ್ಯಾಕ್ಸೋಫೋನ್ ವಾದನಸಂಜೆ 5.30ರಿಂದ: ಸಂಗೀತ ಗಾನ ಸಂಭ್ರಮ (ತುಳುನಾಡ ಗಾನ ಗಂಧರ್ವ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗ)ಅಸಂಜೆ: ಕ್ಷೀರಾರ್ಥ್ಯ ಪ್ರಧಾನ ಹಾಲಿಟ್ಟು ಸೇವೆ ಮಂಡಲ ಪೂಜಾ “ಅಷ್ಟಪವಿತ್ರ ನಾಗಮಂಡಲೋತ್ಸವ”, ಪ್ರಸಾದ ವಿತರಣೆ ಜರಗಲಿದೆ.

ಎ.19 ಶುಕ್ರವಾರ: ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದ್ದು,‌‌ 22-04-2024ರಿಂದ 27-04-2024ರ ವರೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀಮನ್ಮಹಾರಥೋತ್ಸವ ನಡೆಯಲಿದೆ.