2023-24 ವಿತ್ತೀಯ ವರ್ಷದಲ್ಲಿ13.12 ಕೋಟಿ ಲಾಭ ದಾಖಲಿಸಿದ ಎಂಸಿಸಿ ಬ್ಯಾಂಕ್: ಕರ್ನಾಟಕ ರಾಜ್ಯಕ್ಕೆ ಕಾರ್ಯಕ್ಷೇತ್ರ ವಿಸ್ತರಣೆ; ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಹೊಸ ಶಾಖೆ ಪ್ರಾರಂಭ
ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ (MCC) ಲಿಮಿಟೆಡ್ 31 ಮಾರ್ಚ್ 2024 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ ಹಾಗೂ ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.07% ಎನ್.ಪಿ.ಎ. ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು. ಅವರು ಶುಕ್ರವಾರದಂದು ಸೆನೆಟ್ […]
ಥ್ರಿಲ್ಲರ್ ಹಾರರ್ ಶಾರ್ಟ್ ಫಿಲ್ಮ್ ‘ಡೀಮನ್ ಇನ್ ಯೂ’ ವರಾಹ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ
ಶ್ರಾವಣ್ ಶೆಟ್ಟಿ ಬರೆದು ನಿರ್ದೇಶಿಸಿರುವ, ನಿಶಾಂತ್ ಶೆಟ್ಟಿ ಸಹ ನಿರ್ದೇಶನದ ವರಾಹ ಫಿಲ್ಮ್ಸ್ ಬ್ಯಾನರ್ ನಡಿ ಹೊಸ ಥ್ರಿಲ್ಲರ್ ಶಾರ್ಟ್ ಮೂವಿ ನಾಳೆ ವರಾಹ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಡಿಒಪಿ ಮತ್ತು ಎಡಿಟಿಂಗ್ ವಿಗ್ನೇಶ್, ಅಸಿಸ್ಟೆಂಟ್ ಡಿಒಪಿ ಮತ್ತು ಎಡಿಟಿಂಗ್ ದೀಕ್ಷಿತ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಘುನಾಥ್ ನಾಯಕ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಪ್ರತೀಕ್ ನಾಯಕ್, ಪೋಸ್ಟ್ ಪ್ರೊಡಕ್ಷನ್ ಮತ್ತು ವಿ.ಎಫ್.ಎಕ್ಸ್ ಸ್ಪೆಕ್ಟ್ರಮ್ ವಿಶುವಲ್ಸ್, ಪಬ್ಲಿಸಿಟಿ ಡಿಸೈನ್ ಶಿವಪ್ರಸನ್ನ.
ಗಂಗೊಳ್ಳಿ: ಸಮುದ್ರಕ್ಕೆ ಹಾರಿ ವ್ಯಕ್ತಿ ಸಾವು
ಗಂಗೊಳ್ಳಿ: ಬ್ರಹ್ಮಾವರ ಇಂದಿರಾನಗರದ ಮಂಜುನಾಥ (47) ಎಂಬವರ ಮಾವ ಸಂಜೀವ (67) ಎನ್ನುವವರು ಕಳೆದ ಒಂದು ವರ್ಷದಿಂದ ಮೂತ್ರ ಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಮಣಿಪಾಲ ಹಾಗೂ ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಏ. 03 ರಂದು ಮದ್ಯಾಹ್ನ 2 ಗಂಟೆ ಹೊತ್ತಿಗೆ ಪತ್ನಿ ಸರೋಜಿನಿಯವರಲ್ಲಿ ಬ್ರಹ್ಮಾವರಕ್ಕೆ ಔಷಧ ತರಲು ಹೋಗುವುದಾಗಿ ತಿಳಿಸಿದ್ದು ಮನೆಯಿಂದ ಹೊರಹೋದವರು ಮನೆಗೆ ವಾಪಾಸಾಗಿಲ್ಲ. ವಾಪಾಸು ಮನೆಗೆ ಬರದಿದ್ದ ಸಂಜೀವ ಅಂದು ಸಂಜೆ 4 ರಿಂದ 5 ರ ಮದ್ಯಾವಧಿಯಲ್ಲಿ ಸಮುದ್ರಕ್ಕೆ ಹಾರಿ […]
ಉಡುಪಿ ಸುವಿದ್ಯಾ ಅಕಾಡೆಮಿಯಲ್ಲಿ ಪ್ರಥಮ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆಗೆ ಕೋಚಿಂಗ್
ಉಡುಪಿ: ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆಯಲು ಅನುಕೂಲವಾಗಲು ವಿಶೇಷ ಕೋಚಿಂಗನ್ನು ಸುವಿದ್ಯಾ ಅಕಾಡೆಮಿ ನಡೆಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗೆ ಉಡುಪಿ ರಥ ಬೀದಿಯಲ್ಲಿರುವ ಶ್ರೀ ಪೇಜಾವರ ಮಠದ ಪ್ರಹ್ಲಾದ ಗುರುಕುಲದಲ್ಲಿರುವ ಸುವಿದ್ಯಾ ಅಕಾಡೆಮಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯು ಪ್ರಕಟಣೆ ತಿಳಿಸಿದೆ. ಸಂಪರ್ಕಿಸಿ: 8892036401, 8971535230
ಕಣಂಜಾರು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಕಣಂಜಾರು ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮುಂಬರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಗುರುವಾರದಂದು ಊರ ಹಿರಿಯರಾದ ಡಾ.ಎಂ.ಬಿ.ಆಚಾರ್, ನಿವೃತ್ತ ಶಿಕ್ಷಕ ಬಿ.ಕೃಷ್ಣ ಪ್ರಭು, ನವೀನಚಂದ್ರ ಹೆಗ್ಡೆ ಪಟೇಲರ ಮನೆ ಇವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ತಂತ್ರಿಗಳಾದಂತಹ ಬ್ರಹ್ಮಶ್ರೀ ಷಡಂಗ ಬಿ.ಲಕ್ಷ್ಮೀನಾರಾಯಣ ತಂತ್ರಿ, ಅರ್ಚಕ ಗುರುರಾಜ ಮಂಜಿತ್ತಾಯ, ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ.ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ,ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, […]