ಸುಡು ಬಿಸಿಲಿಗೆ ತನು-ಮನ ತಂಪಾಗಿಸುವ ತಂಪು ಬೀಜದ ಆರೋಗ್ಯ ಪ್ರಯೋಜನಗಳು

ದಿನದಿಂದ ಏರುತ್ತಿರುವ ತಾಪಮಾನ, ಸುಡು ಬಿಸಿಲು, ತೀರದ ದಾಹ, ಮಳೆಯ ವಿಳಂಬ ಆಗಮನದಿಂದಾಗಿ ಪ್ರಾಣಿ ಪಕ್ಷಿಯಾದಿಯಾಗಿ ಜನರೂ ಹೈರಾಣಾಗುತ್ತಿದ್ದಾರೆ. ಜನರು ತಂಪು ಪಾನೀಯ, ಹಣ್ಣಿನ ಜ್ಯೂಸ್, ಎಳನೀರು, ಐಸ್ ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಈ ಸುಡು ಬೇಸಿಗೆಯಲ್ಲಿ ತನು ಹಾಗೂ ಮನ ತಂಪಾಗಿಸುವ ತಂಪು ಬೀಜ ಅಥವಾ ಕಾಮಕಸ್ತೂರಿ ಅಥವಾ ತುಳಸಿ ಬೀಜದ ಆರೋಗ್ಯ ಪ್ರಯೋಜನಗಳು ಹಲವಿವೆ ಎಂದರೆ ಅಚ್ಚರಿಯಾಗಬಹುದು. ಕಾಮಕಸ್ತೂರಿ, ಇಂಡಿಯನ್ ಬೇಸಿಲ್, ತುಳಸಿ, ಸಬ್ಜಾ, ತಂಪು ಬೀಜ ಎಂದು ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ […]

ಬಂಟಕಲ್ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೀವನ ಕೌಶಲ್ಯ ಕುರಿತು ಕಾರ್ಯಾಗಾರ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ ಜೀವನ ಕೌಶಲ್ಯ ಕುರಿತು ಜಾಗೃತಿ ಕಾರ್ಯಾಗಾರವನ್ನು ಇತ್ತೀಚಿಗೆ ಕಾಲೇಜಿನಆವರಣದಲ್ಲಿ ಆಯೋಜಿಸಿತ್ತು. ಎಂಐಟಿ ಮಣಿಪಾಲದ ಸಹ ಪ್ರಾಧ್ಯಾಪಕ ಡಾ. ಗುರುಮೂರ್ತಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಬಗ್ಗೆ “ಲೈಫ್ ಸ್ಕಿಲ್: ಟ್ಯಾಲೆಂಟ್+ಎನ್*ಎಕ್ಸ್= ಮಿರಾಕಲ್” ಎಂಬ ಸೂತ್ರದ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು ಇಲ್ಲದಿದ್ದರೆ ಅವರ ಸಾಧನೆಯು ಅಸ್ಪಷ್ಟವಾಗುತ್ತದೆ ಎಂದು […]

ಚುನಾವಣಾ ಅಕ್ರಮಗಳ ದೂರು ಸಲ್ಲಿಸಲು ಸಹಾಯವಾಣಿ ಪ್ರಾರಂಭ

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರುಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ಹಿತೇಶ್ ಕೆ ಕೋಯಲ್ ಅವರನ್ನು ನೇಮಕ ಮಾಡಲಾಗಿರುತ್ತದೆ. ಸದ್ರಿ ಚುನಾವಣಾ ವೀಕ್ಷಕರ ಕಛೇರಿಯನ್ನು ನಗರದ ಬನ್ನಂಜೆಯ ಪ್ರವಾಸಿ ಮಂದಿರದಲ್ಲಿ ತೆರೆಯಲಾಗಿದ್ದು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂ.ಸಂಖ್ಯೆ: 0820-2001203, ಮೊ.ನಂ:9482245032 ಗೆ ಪ್ರತಿದಿನ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನೀತಿ ಸಂಹಿತೆ ಉಲ್ಲಂಘನೆ: 11,600 ರೂ ಮೌಲ್ಯದ ಮದ್ಯ ವಶ

ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆ, ಮಾದರಿ ನೀತಿ ಸಂಹಿತೆಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅಬಕಾರಿ ಇಲಾಖೆ ವತಿಯಿಂದ 11,600 ರೂ. ಮೌಲ್ಯದ 62.690 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ತ್ರಿಶಾ ಕ್ಲಾಸಸ್: ಏಪ್ರಿಲ್ 7 ರಂದು ಸಿ.ಎ ಫೌಂಡೇಶನ್ ಮಾಹಿತಿ ಕಾರ್ಯಾಗಾರ

ಉಡುಪಿ: ವಾಣಿಜ್ಯ ವಿಭಾಗದಲ್ಲಿ ವೃತ್ತಿಪರ ಕೋರ್ಸ್ ಗಳ ತರಬೇತಿಯನ್ನು ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ ಫೌಂಡೇಶನ್ ಕುರಿತಾದ ವಿವರಣಾತ್ಮಕ ಮಾಹಿತಿ ಕಾರ್ಯಗಾರವು ಏಪ್ರಿಲ್ 7 ರಂದು ಸಂಸ್ಥೆಯ ಎರಡು ಕೇಂದ್ರಗಳಾದ ಮಂಗಳೂರಿನಲ್ಲಿ ಬೆಳಿಗ್ಗೆ 10:00 ರಿಂದ ಹಾಗೂ ಉಡುಪಿಯಲ್ಲಿ ಮದ್ಯಾಹ್ನ 2:30 ರಿಂದ ನಡೆಯಲಿದೆ. ದ್ವಿತೀಯ ಪಿಯುಸಿ ಮುಗಿಸಿ ಸಿ.ಎ ಮಾಡಲು ಇಚ್ಛಿಸುವ ಅಥವಾ ಸಿ.ಎ ಕೋರ್ಸ್ ಬಗ್ಗೆ ಮಾಹಿತಿ ಪಡೆಯಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಈ ಉಚಿತ ಕಾರ್ಯಾಗಾರದ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆಸಕ್ತ ವಿದ್ಯಾರ್ಥಿಗಳು […]