ತ್ರಿಶಾ ಕ್ಲಾಸಸ್: ಏಪ್ರಿಲ್ 7 ರಂದು ಸಿ.ಎ ಫೌಂಡೇಶನ್ ಮಾಹಿತಿ ಕಾರ್ಯಾಗಾರ

ಉಡುಪಿ: ವಾಣಿಜ್ಯ ವಿಭಾಗದಲ್ಲಿ ವೃತ್ತಿಪರ ಕೋರ್ಸ್ ಗಳ ತರಬೇತಿಯನ್ನು ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ ಫೌಂಡೇಶನ್ ಕುರಿತಾದ ವಿವರಣಾತ್ಮಕ ಮಾಹಿತಿ ಕಾರ್ಯಗಾರವು ಏಪ್ರಿಲ್ 7 ರಂದು ಸಂಸ್ಥೆಯ ಎರಡು ಕೇಂದ್ರಗಳಾದ ಮಂಗಳೂರಿನಲ್ಲಿ ಬೆಳಿಗ್ಗೆ 10:00 ರಿಂದ ಹಾಗೂ ಉಡುಪಿಯಲ್ಲಿ ಮದ್ಯಾಹ್ನ 2:30 ರಿಂದ ನಡೆಯಲಿದೆ.

ದ್ವಿತೀಯ ಪಿಯುಸಿ ಮುಗಿಸಿ ಸಿ.ಎ ಮಾಡಲು ಇಚ್ಛಿಸುವ ಅಥವಾ ಸಿ.ಎ ಕೋರ್ಸ್ ಬಗ್ಗೆ ಮಾಹಿತಿ ಪಡೆಯಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಈ ಉಚಿತ ಕಾರ್ಯಾಗಾರದ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಆಸಕ್ತ ವಿದ್ಯಾರ್ಥಿಗಳು ಉಡುಪಿಯ ಕೋರ್ಟ್ ಮುಂಭಾಗದ ತ್ರಿಶಾ ಕ್ಲಾಸಸ್ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.