ಫೆ.19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ

ಉಡುಪಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಪೂರ್ವ ಭಾವಿ ಸಭೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅಧ್ಯಕ್ಷತೆಯಲ್ಲಿ ಜರಗಿತು. ಫೆ.19 ಸೋಮವಾರದಂದು ಸರಕಾರಿ ಬಾಲಕಿಯರ ಪ್ರೌಢ ಶಾಲಾ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲು ನಿರ್ಣಯಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಛತ್ರಪತಿ ಶಿವಾಜಿ ವಿವಿದೊದ್ದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸಿ ನಾಯ್ಕ್, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶಿರೂರು, ನಿರ್ದೇಶಕರಾದ ಆರ್ ಸಿ ನಾಯ್ಕ್, […]

ಮಾರ್ಚ್ 3: ಅಲೆವೂರು ಅಮ್ಮನೆಡೆಯಿಂದ ಕಡಿಯಾಳಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ

ಉಡುಪಿ: ಮಾರ್ಚ್ 3 ಭಾನುವಾರದಂದು ಬೆಳ್ಳಿಗ್ಗೆ 6 ಗಂಟೆಗೆ ಅಲೆವೂರು ಮಹಿಳಾ ಸಂಘ ಹಾಗೂ ಯುವಕ ಸಂಘದ ನೇತೃತ್ವದಲ್ಲಿಅಲೆವೂರು ಅಮ್ಮನಡೆಯಿಂದ ಕಡಿಯಾಳಿ ಅಮ್ಮನಡೆಗೆ ಬೃಹತ್ಪಾದಯಾತ್ರೆ ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕ್ರಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ. ಪಾದಯಾತ್ರೆಯು ಅಲೆವೂರಮ್ಮ ನಡೆಯಿಂದ ಹೊರಟು ರಾಮಪುರ, ಡಯಾನ ವೃತ್ತ, ಬೀಡಿನಗುಡ್ಡೆ ಮಾರ್ಗವಾಗಿ ವಿದ್ಯೋದಯ ಕಾಲೇಜಿನ ಎದುರು, ಪಾರ್ಕಿಂಗ್ ಪ್ರದೇಶದಿಂದ ಕಲ್ಸಂಕ ಮಾರ್ಗವಾಗಿ ಕಡಿಯಾಳಿ ಅಮ್ಮನಡೆಗೆ ಸಾಗಲಿರುವುದು.

ಪೆರ್ಡೂರು ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಲೋಕಾರ್ಪಣೆ

ಪೆರ್ಡೂರು: ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ (Perduru Buntara Bhavana) ಭಾನುವಾರದಂದು ಲೋಕಾರ್ಪಣೆಗೊಂಡಿತು. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಭೋಜನ ಶಾಲೆಯನ್ನು, ಸಂತೋಷ್ ರೈಸ್ ಮಿಲ್ ಭದ್ರಾವತಿ ಮಾಲಕ ಸುಧಾಕರ ಶೆಟ್ಟಿ ಸಹಕಾರಿ ಭವನವನ್ನು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅತಿಥಿಗೃಹವನ್ನು, ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಸಭಾ ಭವನವನ್ನು, ಬ್ರಹ್ಮಾವರದ ಬಂಟರ […]

ಕಾಪು: ಫೆ. 20ರಂದು ರವಿಶಂಕರ್ ಗುರೂಜಿ ಅವರಿಂದ ಆನಂದ ಲಹರಿ ಮಹಾ ಸತ್ಸಂಗ

ಕಾಪು: ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲಿವಿಂಗ್‌ನ (Art Of Living) ಸಂಸ್ಥಾಪಕ  ರವಿಶಂಕರ್ ಗುರೂಜಿ (Ravi Shankar Guruji) ಅವರಿಂದ ಕಾಪು ಸಮುದ್ರ ಕಿನಾರೆಯ ಮಂಥನ್ ರೆಸಾರ್ಟ್ ಬಳಿ ಆನಂದ ಲಹರಿ ಮಹಾ ಸತ್ಸಂಗ ಫೆ. 20ರಂದು ಸಂಜೆ 4.30 ರಿಂದ 8 ರ ವರೆಗೆ ನಡೆಯಲಿದೆ ಎಂದು ಆಯೋಜಕ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮನುಷ್ಯನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಸಫಲವಾಗಿರುವ ಜೀವನ ಕಲೆ ಹಾಗೂ ಸುದರ್ಶನ […]

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿಗೆ RGUHS ಹೋಮಿಯೋಪಥಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ 110 ರ‍್ಯಾಂಕ್

ಮಂಗಳೂರು: ಸಪ್ಟೆಂಬರ್ 2018ರಿಂದ ಜೂನ್ 2022ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ನಡೆಸಿರುವ ಹೋಮಿಯೋಪಥಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ (Fr.Mullers Medical College) ಪದವಿಪೂರ್ವ ವಿದ್ಯಾರ್ಥಿಗಳು (ಬಿ.ಎಚ್.ಎಮ್.ಎಸ್ 2017-18) 10 ರ‍್ಯಾಂಕ್ ಗಳಲ್ಲಿ 7 ರ‍್ಯಾಂಕ್ ಗಳಿಸುವ ಮೂಲಕ ಸ್ಥಿರ ಮತ್ತು ದಕ್ಷ ಪರಿಶ್ರಮವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕೋರ್ಸ್ ವಾರು 21 ಹಾಗೂ ವಿಷಯವಾರು 82 ರ‍್ಯಾಂಕ್‌ಗಳನ್ನು ಪಡೆದು ಒಟ್ಟು 110 ರ‍್ಯಾಂಕ್‌ಗಳನ್ನು ಗಳಿಸಿಕೊಂಡಿದೆ. […]