ಪೆರ್ಡೂರು ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಲೋಕಾರ್ಪಣೆ

ಪೆರ್ಡೂರು: ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ (Perduru Buntara Bhavana) ಭಾನುವಾರದಂದು ಲೋಕಾರ್ಪಣೆಗೊಂಡಿತು.

ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಭೋಜನ ಶಾಲೆಯನ್ನು, ಸಂತೋಷ್ ರೈಸ್ ಮಿಲ್ ಭದ್ರಾವತಿ ಮಾಲಕ ಸುಧಾಕರ ಶೆಟ್ಟಿ ಸಹಕಾರಿ ಭವನವನ್ನು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅತಿಥಿಗೃಹವನ್ನು, ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಸಭಾ ಭವನವನ್ನು, ಬ್ರಹ್ಮಾವರದ ಬಂಟರ ಸಂಘದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ ಸಭಾ ವೇದಿಕೆಯನ್ನು , ಪೆಜಕೊಡಂಗೆಯ ಲೀಲಾವತಿ ಎಸ್.ಹೆಗ್ಡೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಬೆಂಗಳೂರಿನ ಎಂಜಿಆರ್ ಗ್ರೂಪ್‌ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ರಾಮಕೃಷ್ಣ ಗ್ರೂಪ್ ಆಫ್ ಹೋಟೆಲ್ ವಿಲೇಪಾರ್ಲೆ ಮುಂಬೈ ಇದರ ಚಂದ್ರಶೇಖರ್ ಶೆಟ್ಟಿ, ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಂಗಳೂರಿನ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಕೈಲ್ಕೆರ್ ಭಾಸ್ಕರ್ ಶೆಟ್ಟಿ, ಪಳ್ಳಿ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ಉಡುಪಿಯ ನಿವೃತ್ತ ವೈದ್ಯಾಧಿಕಾರಿ ಡಾ.ಎ.ಮನೋರಂಜನ್ ದಾಸ್ ಹೆಗ್ಡೆ, ಮುಂಬೈಯ ಲೆಕ್ಕಪರಿಶೋಧಕ ಎನ್.ಬಿ.ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಚ್.ಮಂಜುನಾಥ ಭಂಡಾರಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಅದಾನಿ ಗ್ರೂಪ್ನ ಅಧ್ಯಕ್ಷ ಕಿಶೋರ್ ಆಳ್ವ, ಬಂಟರ ಸಂಘ ಬೆಂಗಳೂರು ಇದರ ನಿಕಟಪೂರ್ವ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಡುಪಿ ತಾಲೂಕು ಸಮಿತಿಯ ಸಂಚಾಲಕ ಶಿವ ಪ್ರಸಾದ್ ಹೆಗ್ಡೆ, ಬೆಂಗಳೂರು ಉದ್ಯಮಿ ದಿನೇಶ್ ಹೆಗ್ಡೆ, ಹಿರಿಯಡ್ಕ ಉದ್ಯಮಿ ಕೆ.ರಾಜರಾಮ ಹೆಗ್ಡೆ, ಉದಯ ಕೃಷ್ಣಯ್ಯ ಶೆಟ್ಟಿ ಚಾಲಿಟೇಬಲ್ ಟ್ರಸ್ಟ್ನ ನಮಿತಾ ಉದಯ ಕುಮಾರ್ ಶೆಟ್ಟಿ. ಡಾ.ರಾಮಾನಂದ ಸೂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಮಾಡಿದ ವಿನ್ಯಾಸಕರು ಹಾಗೂ ಇಂಜಿನಿರ್ ಗಳನ್ನು ಸನ್ಮಾನಿಸಲಾಯಿತು. ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಪೆರ್ಡೂರು ಮಂಡಲದ ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸತೀಶ್ ಶೆಟ್ಟಿ ಕುತ್ಯಾರು ಬೀಡು ಸ್ವಾಗತಿಸಿದರು. ವಿಜಯ ಕುಮಾರ್ ಶೆಟ್ಟಿ ಸಿದ್ಧಾಪುರ ಕಾರ್ಯಕ್ರಮ ನಿರೂಪಿಸಿದರು.