ಹಿರಿಯಡಕ: ಮನೆಯೊಂದರಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ – ಮೂವರು ಆರೋಪಿಗಳು ಪೊಲೀಸರ ವಶಕ್ಕೆ.

ಉಡುಪಿ: ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಉಡುಪಿ ಬೊಮ್ಮರಬೆಟ್ಟುವಿನಲ್ಲಿ ನಡೆದಿದೆ. ಪವನ್, ಚೇತನ್ ಸಿ.ಬಿ., ಪಂಜು ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಣಿಪಾಲ ಈಶ್ವರ ನಗರದ ರೆಸಿಡೆನ್ಸಿಯೊಂದರಲ್ಲಿ ಮಹಿಳೆಯರನ್ನು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡಲಾಗುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ ಪವನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಈತ ನೀಡಿದ ಮಾಹಿತಿಯ ಆಧಾರದ ಮೇಲೆ ಉಡುಪಿ ಬೊಮ್ಮರಬೆಟ್ಟುವಿನಲ್ಲಿರುವ ಮನೆಯೊಂದಕ್ಕೆ ದಾಳಿ […]

ಶತಮಾನ ಕಂಡ MCC ಬ್ಯಾಂಕ್ 1000 ಕೋಟಿ ವ್ಯವಹಾರ ಸಂಭ್ರಮ: ಫೆ.1 ರಿಂದ ಮೇ 10 ರವರೆಗೆ ವಿಶೇಷ ಕೊಡುಗೆಗಳು!! ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ!

ಮಂಗಳೂರು: ಕಳೆದ 112 ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸಿ ಉತೃಷ್ಟ ಗುಣಮಟ್ಟದ ಸೇವೆ ನೀಡಿ 1000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ಸ್ಥಾಪಿಸಿರುವ ದ.ಕ ಜಿಲ್ಲೆಯ ಸುಪ್ರಸಿದ್ದ MCC ಬ್ಯಾಂಕ್ ಫೆ.1 ರಿಂದ ಮೇ 10 ರವರೆಗೆ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ವಾಹನ ಸಾಲ, ಚಿನ್ನಾಭರಣ ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ. ಭದ್ರತಾ ಲಾಕರ್ ಮೇಲೆ ಶೂನ್ಯ ಬಾಡಿಗೆ(ಒಂದು ವರ್ಷ ಕಾಲ) ಹಾಗೂ ವಿದ್ಯಾ ಭವಿಷ್ಯ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಸಾಲದ ಮೇಲೆ 0% ಸಂಸ್ಕರಣಾ […]

ಖೇಲೋ ಇಂಡಿಯಾ ಮಿಡ್ಲೇ ರಿಲೇಯಲ್ಲಿ ಸ್ತುತಿ ಪಿ ಶೆಟ್ಟಿಗೆ ರಜತ ಪದಕ

ಉಡುಪಿ: ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಸ್ತುತಿ ಪಿ ಶೆಟ್ಟಿ ಕಿದಿಯೂರು ಇವರು ಮಿಡ್ಲೇ ರಿಲೇಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ರಜತಪದಕವನ್ನು ಪಡೆದಿದ್ದಾರೆ. ಈಕೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಉಡುಪಿ ಇದರ ಅಥ್ಲೆಟಿಕ್ಸ್ ವಿಭಾಗದ ಕೋಚ್ ಸಮರ್ಥ್ ಸದಾಶಿವ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಸಾಧಕ ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಭೋಧಕೇತರ […]

ಡಿ.ಕೆ.ಸುರೇಶ್ ‘ಪ್ರತ್ಯೇಕ ದೇಶ’ ಹೇಳಿಕೆ: ಕ್ರಮಕ್ಕೆ ಒತ್ತಾಯಿಸಿದ ಪ್ರಹ್ಲಾದ್ ಜೋಶಿ

ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ “ಪ್ರತ್ಯೇಕ ದೇಶದ ಬೇಡಿಕೆ” ಹೇಳಿಕೆಯನ್ನು ಪ್ರಸ್ತಾಪಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು, ಕೆಳಮನೆಯಲ್ಲಿ ಮಾತನಾಡಿದ ಜೋಶಿ, ಲೋಕಸಭಾ ಸಂಸದರಾಗಿ ಇದು ಅವರ ಪ್ರಮಾಣ ವಚನದ ಉಲ್ಲಂಘನೆಯಾಗಿದೆ ಎಂದಿದ್ದಾರೆ. “ನಾನು ಸೋನಿಯಾ ಗಾಂಧಿಯವರಿಂದ ಕ್ಷಮೆಯಾಚನೆ ಮತ್ತು ಕ್ರಮಕ್ಕೆ ಒತ್ತಾಯಿಸುತ್ತೇನೆ. ಇದು ಅವರ (ಸಂಸದರಾಗಿ) ಪ್ರಮಾಣ ವಚನದ ಉಲ್ಲಂಘನೆಯಾಗಿದೆ. ವಿಷಯವನ್ನು ನೈತಿಕ ಸಮಿತಿಗೆ ಕಳುಹಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಬೇಕು. ಅವರು ತೆಗೆದುಕೊಳದಿದ್ದರೆ ದೇಶದ […]

ಮಂಗಳೂರು: ಎನೋಕ್ ರೆನಾಲ್ಟ್ ಕಂಪನಿಗೆ ಡೆಲಿವರಿ ಇನ್ ಚಾರ್ಜ್ ಬೇಕಾಗಿದ್ದಾರೆ

ಮಂಗಳೂರು: ಎನೋಕ್ ರೆನಾಲ್ಟ್ ಕಂಪನಿಗೆ ಡೆಲಿವರಿ ಇನ್ ಚಾರ್ಜ್ ಬೇಕಾಗಿದ್ದಾರೆ. ಮಹಿಳಾ ಅಭರ್ಥಿಗಳಿಗೆ ಮಾತ್ರ. ಉತ್ತಮ ಸಂವಹನ ಮತ್ತು ಗ್ರಾಹಕ ವ್ಯವಹಾರ ತಿಳಿದಿರಬೇಕು. ಕೆಲಸದ ಸ್ಥಳ: ಮಂಗಳೂರು ಆಸಕ್ತರು riz1m@yahoo.co.in ಗೆ ಸಿವಿ ಕಳುಹಿಸಬಹುದು. ಸಂಪರ್ಕ: 7022002555