ವಿಆರ್‌ಎಲ್ ಸಮೂಹ ಸಂಸ್ಥೆ ಪ್ರಾಯೋಜಕತ್ವದ ಬ್ರೈಲ್ ಲಿಪಿಯಲ್ಲಿ ಬರೆದ ಪತ್ರಿಕೆ ಲೋಕಾರ್ಪಣೆ: ನೇತ್ರಹೀನರಿಗೆ ಪ್ರಧಾನಿ ಮೋದಿ ಜೀವನದ ಬಗ್ಗೆ ತಿಳಿಸುವ ಪ್ರಯತ್ನ

ನವದೆಹಲಿ: ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷ ಇರುವವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮೀಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ- ದ ಮೇಕರ್ ನ್ಯೂ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಾರ್ಪಣೆಗೊಳಿಸಿದರು. ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಪುಸ್ತಕ […]

ಮಾರ್ಚ್ 1 ರಿಂದ Paytm ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಠೇವಣಿ ನಿರ್ಬಂಧ: Paytm ಆಪ್ ಬಳಕೆದಾರರಿಗೆ ತಿಳಿದಿರಬೇಕಾದ ಮಾಹಿತಿ ಇಂತಿವೆ

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಮಾರ್ಚ್ 1 ರಿಂದ ಗ್ರಾಹಕರ ಠೇವಣಿಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿದೆ. ಲೆಕ್ಕಪರಿಶೋಧನೆಯು “ನಿರಂತರವಾದ ಅನುಸರಣೆಗಳು” ಮತ್ತು “ನಿರಂತರವಾದ ವಸ್ತು ಮೇಲ್ವಿಚಾರಣಾ ಕಾಳಜಿಗಳನ್ನು” ಬಹಿರಂಗಪಡಿಸಿದ ನಂತರ ಹಾಗೂ ಪಾವತಿ ಬ್ಯಾಂಕ್ ಹೊಸ ಗ್ರಾಹಕರ ಠೇವಣಿ ಮಾಡುವುದನ್ನು ನಿರ್ಬಂಧಿಸಿದ ಸುಮಾರು ಎರಡು ವರ್ಷಗಳ ನಂತರ ಈ ನಿರ್ದೇಶನ ಜಾರಿಗೆ ಬಂದಿದೆ. ಇದರಿಂದ Paytm ಆಪ್ ಬಳಕೆದಾರರಿಗೆ ಏನಾಗುತ್ತದೆ? ಇದು ಪಾವತಿ ಬ್ಯಾಂಕ್‌ನ ಮೂಲ ಕಂಪನಿ (ವನ್ 97 […]

ಕೊಡವೂರು ಕಲ್ಮಾಡಿ ಗ್ರಾಮದ ನಿವಾಸಿ ನಾಪತ್ತೆ

ಉಡುಪಿ: ನಗರದ ಕೊಡವೂರು ಕಲ್ಮಾಡಿ ಗ್ರಾಮದ ನಿವಾಸಿ ರವಿಕುಮಾರ್ (44) ಎಂಬ ವ್ಯಕ್ತಿಯು ಜನವರಿ 20 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2537999, ಮಲ್ಪೆ ಪಿಎಸ್‌ಐ ಮೊ.ಸಂ: 9480805447 ಹಾಗೂ ಉಡುಪಿ ವೃತ್ತ ನಿರೀಕ್ಷಕರು ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ […]

ತುಳುನಾಡ ಕಂಬಳಕ್ಕೆ ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ತಂತ್ರಜ್ಞಾನದ ಪಾದಾರ್ಪಣೆ: ಅದಾನಿ ಫೌಂಡೇಶನ್ ನಿಂದ 10 ಲಕ್ಷ ರೂ ದೇಣಿಗೆ

ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಸಮರ್ಥ ಸಮಯ ನಿರ್ವಹಣೆಗಾಗಿ ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ. ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಅದಾನಿ ಫೌಂಡೇಶನ್ 10 ಲಕ್ಷ ರೂ ದೇಣಿಗೆ ನೀಡಿದ್ದು, ಬುಧವಾರ ನಡೆದ ಸಮಾರಂಭದಲ್ಲಿ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಸಮಿತಿ ಅಧ್ಯಕ್ಷರಿಗೆ ಚೆಕ್ ಹಸ್ತಾಂತರಿಸಿದ ಸಂದರ್ಭದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. […]

ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಾಲಕ್ಷ್ಮಿ ಕಿಣಿ ಅವರಿಗೆ ಸನ್ಮಾನ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಾಲಕ್ಷ್ಮಿ ಕಿಣಿ ಅವರನ್ನು ಉಡುಪಿಯ ಎಸ್‍ಎಂಎಸ್‍ಪಿ ಸಂಕೀರ್ಣದಲ್ಲಿರುವ ನಾಯಕ್ ಆ್ಯಂಡ್ ಎಸೋಸಿಯೇಟ್ಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಜೆ., ಟಿ. ವನಿತಾ ಕಿಣಿ, ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ಉಡುಪಿ ಶಾಖೆ ಮಾಜಿ ಅಧ್ಯಕ್ಷ ನರಸಿಂಹ ನಾಯಕ್ ಉಪಸ್ಥಿತರಿದ್ದರು. ಕಲ್ಸಂಕದ ಟಿ. ವಸಂತ ಕಿಣಿ, ವನಿತಾ ಕಿಣಿ ದಂಪತಿ ಪುತ್ರಿಯಾದ ಮಹಾಲಕ್ಷ್ಮಿ ಕಿಣಿ ಎಂಜಿಎಂನಲ್ಲಿ ದ್ವಿತೀಯ ಪಿಯುಸಿ, […]