ಉಡುಪಿ: ಕೋಡಿಬೆಂಗ್ರೆಯ ಡೆಲ್ಟಾ ಬೀಚ್’ನಲ್ಲಿ ಬ್ಯಾಂಕ್ ಉದ್ಯೋಗಿ ಸಮುದ್ರಪಾಲು

ಉಡುಪಿ: ಪ್ರವಾಸಕ್ಕೆ ಬಂದಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಸಮುದ್ರದ ನೀರಿನಲ್ಲಿ ಕೊಚ್ಚಿಹೋದ ಘಟನೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ನಾಪತ್ತೆಯಾದವರನ್ನು ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತೀನ್ (35) ಎಂದು ಗುರುತಿಸಲಾಗಿದೆ. ಇವರು ರಜೆಯ ಹಿನ್ನೆಲೆಯಲ್ಲಿ ಜ.26ರಂದು ಇಬ್ಬರು ಸ್ನೇಹಿತರೊಂದಿಗೆ ಉಡುಪಿಗೆ ಬಂದಿದ್ದು, ವಾಪಸ್ ತೆರಳುವ ಸಂದರ್ಭದಲ್ಲಿ ಡೆಲ್ಟಾ ಬೀಚ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲಿ ಸಮುದ್ರದ ನೀರಿನಲ್ಲಿ ಆಡುತ್ತಿರುವಾಗ ನಿತೀನ್ ಅಲೆಗಳೊಂದಿಗೆ ಕೊಚ್ಚಿ ಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು […]

ದೈವನರ್ತಕ ಅಶೋಕ್‌ ಬಂಗೇರ ಹೃದಯಾಘಾತದಿಂದ ನಿಧನ

ಮಂಗಳೂರು: ಪದವಿನಂಗಡಿ ಸಮೀಪದ ಗಂಧಕಾಡು ನಿವಾಸಿ ದೈವನರ್ತಕ, ಪದವಿನಂಗಡಿ ಕೊರಗಜ್ಜ ಸಾನಿಧ್ಯದ ದೈವಾರಾಧಕ ಅಶೋಕ್‌ ಬಂಗೇರ (47) ಅವರು ಜ. 27ರಂದು ನಿಧನ ಹೊಂದಿದರು. ಅಶೋಕ್‌ ಬಂಗೇರ ಅವರು ಸುಮಾರು 2 ದಶಕಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಹಳೆಯಂಗಡಿಯಲ್ಲಿ ದೈವನರ್ತನ ಮಾಡುತ್ತಿದ್ದಾಗ ಸುಸ್ತಾದ ಹಿನ್ನೆಲೆಯಲ್ಲಿ ಮನೆಗೆ ವಾಪಸಾಗಿ ಮಲಗಿದ್ದರು. ದೈವನರ್ತನವನ್ನು ಮತ್ತೋರ್ವರು ಮುಂದುವರಿಸಿದ್ದರು. ಮುಂಜಾವ 5 ಗಂಟೆಯ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಸ್ಥಳೀಯ ವೈದ್ಯರಲ್ಲಿಗೆ ಸಾಗಿಸಿ ಅನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ […]

ರಾಮಲಲ್ಲಾನಿಗೆ 1.751 ಕೆಜಿ ತೂಕದ ಬೆಳ್ಳಿ ಪೊರಕೆ ನೀಡಿದ ಅಖಿಲ ಭಾರತೀಯ ಮಾಂಗ್ ಸಮಾಜದ ರಾಮ ಭಕ್ತರು

ಅಯೋಧ್ಯೆ: ‘ಅಖಿಲ ಭಾರತೀಯ ಮಾಂಗ್ ಸಮಾಜ’ಕ್ಕೆ ಸೇರಿದ ರಾಮನ ಭಕ್ತರು 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದಾನ ಮಾಡಿದರು. ಪೊರಕೆಯನ್ನು ಗರ್ಭ ಗೃಹವನ್ನು ಸ್ವಚ್ಛಗೊಳಿಸಲು ಬಳಸಬೇಕೆಂದು ಈ ಭಕ್ತರು ವಿನಂತಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ವೀಡಿಯೋ ತುಣುಕಿನಲ್ಲಿ, ಭಕ್ತರು ಬೆಳ್ಳಿ ಪೊರಕೆಯನ್ನು ಎತ್ತರಕ್ಕೆ ಎತ್ತಿ ಹಾರಗಳಿಂದ ಅಲಂಕರಿಸಿ ಮೆರವಣಿಗೆಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. #WATCH | Ayodhya: Devotees of Shri Ram from the 'Akhil Bharatiya […]

ಸಾಧಿಸುವ ಛಲವೊಂದಿದ್ದರೆ ವಯಸ್ಸು ಅಡ್ಡಿಯಾಗಲಾರದು ಎಂದು ಜಗತ್ತಿದೆ ಸಾರಿದ ರೋಹನ್ ಬೋಪಣ್ಣ: ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಹೆಗ್ಗಳಿಕೆ

ಮೆಲ್ಬರ್ನ್: ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ 2024 ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ನಂತರ ಭಾರತದ ರೋಹನ್ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದು, ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎನ್ನುವುದನ್ನು ಪ್ರಮಾಣೀಕರಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ 44 ನೇ ವರ್ಷಕ್ಕೆ ಕಾಲಿಡಲಿರುವ ಬೋಪಣ್ಣ, ಶನಿವಾರ ಮೆಲ್ಬೋರ್ನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಪುರುಷರ ಡಬಲ್ಸ್ ಇತಿಹಾಸದಲ್ಲಿ ಅತ್ಯಂತ ಹಿರಿಯ ನಂಬರ್ ಒನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಶ್ರೇಯಾಂಕ […]