ದೈವನರ್ತಕ ಅಶೋಕ್‌ ಬಂಗೇರ ಹೃದಯಾಘಾತದಿಂದ ನಿಧನ

ಮಂಗಳೂರು: ಪದವಿನಂಗಡಿ ಸಮೀಪದ ಗಂಧಕಾಡು ನಿವಾಸಿ ದೈವನರ್ತಕ, ಪದವಿನಂಗಡಿ ಕೊರಗಜ್ಜ ಸಾನಿಧ್ಯದ ದೈವಾರಾಧಕ ಅಶೋಕ್‌ ಬಂಗೇರ (47) ಅವರು ಜ. 27ರಂದು ನಿಧನ ಹೊಂದಿದರು.

ಅಶೋಕ್‌ ಬಂಗೇರ ಅವರು ಸುಮಾರು 2 ದಶಕಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಹಳೆಯಂಗಡಿಯಲ್ಲಿ ದೈವನರ್ತನ ಮಾಡುತ್ತಿದ್ದಾಗ ಸುಸ್ತಾದ ಹಿನ್ನೆಲೆಯಲ್ಲಿ ಮನೆಗೆ ವಾಪಸಾಗಿ ಮಲಗಿದ್ದರು. ದೈವನರ್ತನವನ್ನು ಮತ್ತೋರ್ವರು ಮುಂದುವರಿಸಿದ್ದರು.

ಮುಂಜಾವ 5 ಗಂಟೆಯ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಸ್ಥಳೀಯ ವೈದ್ಯರಲ್ಲಿಗೆ ಸಾಗಿಸಿ ಅನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪ್ರಯೋಜನವಾಗದೆ ಹೃದಯಾಘಾತದಿಂದ ಮೃತಪಟ್ಟರು.

ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.