ದೇಶ ಸೇವೆ ಸಲ್ಲಿಸಿದ ಕರ್ನಾಟಕದ ಪ್ರಾಂಜಲ್‌’ಗೆ ಮರಣೋತ್ತರ ಶೌರ್ಯ ಪ್ರಶಸ್ತಿ

ನವದೆಹಲಿ: ಜೀವದ ಹಂಗು ತೊರೆದು ದೇಶ ಸೇವೆ ಸಲ್ಲಿಸಿದ ಕರ್ನಾಟಕದ ಯೋಧ ಪ್ರಾಂಜಲ್‌ಗೆ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ಪ್ರಾಂಜಲ್ ಸೇರಿದಂತೆ 80 ಮಂದಿ ಯೋಧರಿಗೆ 75ನೇ ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ರೈಫಲ್ಸ್‌ನ 63ನೇ ಬೆಟಾಲಿಯನ್‌ನಲ್ಲಿ ಯೋಧರಾಗಿದ್ದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಬೆಂಗಳೂರಿನವರಾಗಿದ್ದಾರೆ. ಕಳೆದ ವರ್ಷ ನ.22ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. 6 ಮಂದಿಗೆ ಕೀರ್ತಿ ಚಕ್ರ (3 ಮರಣೋತ್ತರ), 16 ಮಂದಿಗೆ ಶೌರ್ಯಚಕ್ರ (2 […]

ಈ ಬಾರಿ ಐಸ್ ಕ್ರೀಂ ನಮ್ದೇ….ಆರ್‌ಸಿಬಿ ಜೊತೆ ಪಯಣ ಆರಂಭಿಸಿದ ಹಾಂಗ್ಯೋ ಐಸ್ ಕ್ರೀಂ

ಮಂಗಳೂರು: ಕರಾವಳಿಯ ಹಾಂಗ್ಯೊ ಐಸ್‌ಕ್ರೀಂ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ನ ಅಧಿಕೃತ ಐಸ್‌ಕ್ರೀಮ್‌ ಪಾಲುದಾರನಾಗಿ ಒಡಂಬಡಿಕೆ ಮಾಡಿಕೊಂಡಿದೆ. ಐಪಿಎಲ್‌ ಸೀಸನ್‌ 2024ಕ್ಕೆ ರಾಯಲ್‌ ಚಾಲೆಂಜರ್ಸ್‌ ಜೊತೆ ಹಾಂಗ್ಯೋ ಐಸ್‌ಕ್ರೀಮ್‌ ಕೈಜೋಡಿಸಲಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಯೊಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ. ಕರ್ನಾಟಕ ಕರಾವಳಿಯ ಐಸ್‌ಕ್ರೀಮ್‌ ಅದ್ಭುತವು ಕ್ರಿಕೆಟ್‌ ಮ್ಯಾಜಿಕ್‌ ತಂಡದೊಂದಿಗೆ ಸೇರಿಕೊಂಡಿದ್ದು, ಇದು ಮೈದಾನದ ಒಳ-ಹೊರಗೆ ಹೊಸ ಉತ್ಸಾಹ, ಸಂತಸವನ್ನು ಪಸರಿಸಲಿದೆ. ಆರ್‌ಸಿಬಿ ಜತೆ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. […]

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ದ ಎಸ್‌ಎಫ್‌ಐ ಪ್ರತಿಭಟನೆ: Z+ ಭದ್ರತೆ ಒದಗಿಸಲು ಕೇಂದ್ರ ನಿರ್ಧಾರ

ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಅವರ ನಿವಾಸಕ್ಕೆ ಸಿಆರ್‌ಪಿಎಫ್ ಪಡೆಗಳ Z+ ಭದ್ರತೆ ಒದಗಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಕೇರಳ ರಾಜಭವನ ಶನಿವಾರ ಪ್ರಕಟಿಸಿದೆ. ಶನಿವಾರ ಮುಂಜಾನೆ ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಗವರ್ನರ್ ಖಾನ್ ಅವರು ತಮ್ಮ ವಾಹನದಿಂದ ಇಳಿದು ಬೀದಿ ಬದಿಯ ಅಂಗಡಿಯ ಮುಂದೆ ಕುರ್ಚಿ ಹಾಕಿ ಕುಳಿತು ಧರಣಿ ನಡೆಸಿದ್ದಾರೆ. ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ […]

ದ.ಕ ಜಿಲ್ಲೆಯ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಧಾರ್ಮಿಕ ಸಂಸ್ಥೆಗಳ ಮಹಾಸಂಘದ ನಿರ್ಧಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕ ಮೋಹನ್ ಗೌಡ ತಿಳಿಸಿದ್ದಾರೆ. ಅವರು ಮಂಗಳೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಪರಿಷತ್ತಿನ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, “ದೇವಾಲಯಗಳು ಹಿಂದೂಗಳಿಗೆ ಪವಿತ್ರ ಸ್ಥಳಗಳಾಗಿವೆ. ಅನೇಕ ಜನರು ಅನಾಗರಿಕ ಉಡುಪುಗಳನ್ನು ಧರಿಸಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಇದು ದೇವಾಲಯದ […]

ಲೋಕಸಭಾ ಚುನಾವಣೆ ಹಿನ್ನೆಲೆ: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೊದಲ ಕಾರ್ಯಕಾರಿಣಿ ಸಭೆ

ಬೆಂಗಳೂರು: ಬಿ.ವೈ.ವಿಜಯೇಂದ್ರ ಭಾಜಪಾದ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕಗೊಂಡು ರಾಜ್ಯ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಲಿದೆ. ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ 900ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದಾರೆಂದು ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ. ಶುಕ್ರವಾರ ಕಾರ್ಯಾಕಾರಿಣಿ ನಡೆಯುವ ಸ್ಥಳದಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಚಟುವಟಿಕೆ ಜೊತೆಗೆ ಮುಂದಿನ ಕಾರ್ಯ […]