ಈ ಬಾರಿ ಐಸ್ ಕ್ರೀಂ ನಮ್ದೇ….ಆರ್‌ಸಿಬಿ ಜೊತೆ ಪಯಣ ಆರಂಭಿಸಿದ ಹಾಂಗ್ಯೋ ಐಸ್ ಕ್ರೀಂ

ಮಂಗಳೂರು: ಕರಾವಳಿಯ ಹಾಂಗ್ಯೊ ಐಸ್‌ಕ್ರೀಂ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ನ ಅಧಿಕೃತ ಐಸ್‌ಕ್ರೀಮ್‌ ಪಾಲುದಾರನಾಗಿ ಒಡಂಬಡಿಕೆ ಮಾಡಿಕೊಂಡಿದೆ.

ಐಪಿಎಲ್‌ ಸೀಸನ್‌ 2024ಕ್ಕೆ ರಾಯಲ್‌ ಚಾಲೆಂಜರ್ಸ್‌ ಜೊತೆ ಹಾಂಗ್ಯೋ ಐಸ್‌ಕ್ರೀಮ್‌ ಕೈಜೋಡಿಸಲಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಯೊಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.

ಕರ್ನಾಟಕ ಕರಾವಳಿಯ ಐಸ್‌ಕ್ರೀಮ್‌ ಅದ್ಭುತವು ಕ್ರಿಕೆಟ್‌ ಮ್ಯಾಜಿಕ್‌ ತಂಡದೊಂದಿಗೆ ಸೇರಿಕೊಂಡಿದ್ದು, ಇದು ಮೈದಾನದ ಒಳ-ಹೊರಗೆ ಹೊಸ ಉತ್ಸಾಹ, ಸಂತಸವನ್ನು ಪಸರಿಸಲಿದೆ. ಆರ್‌ಸಿಬಿ ಜತೆ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್‌ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್‌ ಕ್ರೀಮ್‌ನ ಆಹ್ಲಾದಕರ ಐಸ್‌ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗಲಿದೆ ಎಂದು ಹಾಂಗ್ಯೋ ಐಸ್‌ಕ್ರೀಮ್ಸ್‌ ಕಂಪೆನಿ ಪ್ರಕಟಣೆ ತಿಳಿಸಿದೆ.

ಈ ಒಡಂಬಡಿಕೆ ವೇಳೆ ಹಾಂಗ್ಯೊ ಬಿಸಿನೆಸ್‌ ಡೆವಲಪ್‌ಮೆಂಟ್‌ ಮುಖ್ಯಸ್ಥ ಸಂಕೀರ್ಣ ಪ್ರದೀಪ್‌ ಪೈ, ನೀಮಾ ಪೈ, ಶ್ರೀನಿವಾಸ್‌ ಜೆ. ಪೈ ಹಾಗೂ ಶ್ರೀಕೃಷ್ಣ ಜೆ. ಪೈ ಉಪಸ್ಥಿತರಿದ್ದರು.