ಕಾರ್ಕಳ: ಕಾರುಗಳ ನಡುವೆ ಅಪಘಾತ – ಮಹಿಳೆ ಮೃತ್ಯು
ಕಾರ್ಕಳ: ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಕಾರುಗಳ ನಡುವೆ ಅಪಘಾತ ಉಂಟಾದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಜ. 25ರ ಸಂಜೆ ಸಂಭವಿಸಿದೆ. ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸಾಗುತ್ತಿದ್ದ ಕಾರು, ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರಿನ ಬಲ ಬದಿಯ ಡೋರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮವಾಗಿ ಕಾರಿನಲ್ಲಿದ್ದ ಮರಿಯಾ ಫೆರ್ನಾಂಡೀಸ್ (60) ಗಾಯಗೊಂಡಿದ್ದರು. ಗಾಯಾಳು ಮರಿಯ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ. […]
ಮಂಗಳೂರು: ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ಉದ್ಯೋಗಾವಕಾಶಗಳು
ಮಂಗಳೂರು: ಇಲ್ಲಿನ ಪ್ರತಿಷ್ಠಿತ ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹುದ್ದೆಗಳ ವಿವರ ಮೇಲ್ವಿಚಾರಕರು – 10 ಕ್ಯಾಪ್ಟನ್ – 4ಡ್ಯೂಟಿ ಮ್ಯಾನೇಜರ್-1(ಮೇಲೆ ತಿಳಿಸಿದ ಹುದ್ದೆಗಳಿಗೆ ಪುರುಷರಿಗೆ ಆದ್ಯತೆ) ಎಫ್.ಒ ಕಾರ್ಯನಿರ್ವಾಹಕ-1ಆತಿಥ್ಯಕಾರಿಣಿ – 2ಔತಣ ಮತ್ತು ಮಾರಾಟ ಸಂಯೋಜಕರು- 1ಅಸಿಸ್ಟೆಂಟ್ ಮ್ಯಾನೇಜರ್ ಸೇಲ್ಸ್- 1 ಹೊಸಬರಿಗೂ ಅವಕಾಶ ನೀಡಲಾಗುವುದು. ಇ ಮೇಲ್ : [email protected]ಸಂಪರ್ಕ: 9035008454
ದೊಡ್ಡಣ್ಣಗುಡ್ಡೆ: ಫಲ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ದೊಡ್ಡಣ್ಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ದೊಡ್ಡಣ್ಣಗುಡ್ಡೆಯ ಪುಷ್ಪ ಹರಾಜು ಕೇಂದ್ರದಲ್ಲಿ ಆಯೋಜಿಸಲಾದ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು […]
ಕಟಪಾಡಿ: ಎಸ್.ವಿ.ಎಸ್ ಹಾಗೂ ತ್ರಿಶಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಕಟಪಾಡಿ : ಜನವರಿ 26 ರಾಷ್ಟ್ರದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು ಆ ನಿಟ್ಟಿನಲ್ಲಿ ಕಟಪಾಡಿಯ ಎಸ್.ವಿ.ಎಸ್ ಸಂಸ್ಥೆಗಳು ಹಾಗೂ ತ್ರಿಶಾ ಸಂಸ್ಥೆಯಿಂದ ಗಣರಾಜ್ಯೋತ್ಸವದ ಆಚರಣೆ ಎಸ್.ವಿ.ಎಸ್ ಶಾಲೆಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ. ಇದರ ವ್ಯವಸ್ಥಾಪಕ ಶ್ರೀಧರ್ ರಾವ್ ಮಾತನಾಡಿ ಭಾರತದ ವಿವಿಧತೆಯಲ್ಲಿ ಏಕತೆಯನ್ನು ನಾವೆಲ್ಲರೂ ಅನುಭವಿಸಬೇಕು ಜೊತೆಗೆ ನಾವೆಲ್ಲರೂ ಒಂದೇ ಎನ್ನುವ ಸಂವಿಧಾನದ ಅಡಿಯಲ್ಲಿ ಬದುಕಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಎಸ್.ವಿ.ಎಸ್ ವಿದ್ಯಾವರ್ಧಕ […]
ಕುಂದಾಪುರ: ಜ. 27 ರಂದು ಯುಕ್ತಿ ಉಡುಪ- ಸುನಿಧಿ ಉಡುಪ ಭರತನಾಟ್ಯ ರಂಗಪ್ರವೇಶ
ಕುಂದಾಪುರ: ನೃತ್ಯ ವಸಂತ ನಾಟ್ಯಾಲಯ ಇದರ ನಿರ್ದೇಶಕಿ ವಿದುಷಿ ಪವಿತ್ರ ಅಶೋಕ್ ಅವರ ಶಿಷ್ಯೆಯರಾದ ಹಾಗೂ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ದಂಪತಿಗಳ ಪುತ್ರಿಯರಾದ ಯುಕ್ತಿ ಉಡುಪ ಹಾಗೂ ಸುನಿಧಿ ಉಡುಪ ಇವರ ಭರತನಾಟ್ಯ ರಂಗಪ್ರೇವೇಶವು ಜ.27 ರಂದು ಸಂಜೆ 4.30 ಕ್ಕೆ ಭಂಡಾರ್ಕರ್ಸ್ ಕಾಲೇಜಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಭಂಡಾರ್ಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಕರ್ನಾಟಕ ಕಲಾಶ್ರೀ ಗುರು ಉಲ್ಲಾಳ ಮೋಹನ್ ಕುಮಾರ್, ಕರ್ನಾಟಕ ಕಲಾಶ್ರೀ ಗುರು ಸತ್ಯನಾರಾಯಣ ರಾಜು, ಸಂದೇಶ ಲಲಿತಾ […]