ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ 1.80 ಲ.ರೂ. ಮೌಲ್ಯದ ಸೊತ್ತು ಕಳವು
ಉಡುಪಿ: ಜ.23ರಂದು ರಾತ್ರಿ ಬೆಂಗಳೂರಿನಿಂದ ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಮಟಾ ನಿವಾಸಿ ಅಭಿನ್ ವೈದ್ಯ (19) ಎಂ ವ್ಯಕ್ತಿ ತಮ್ಮ ಬ್ಯಾಗ್‌ನ್ನು ಸೀಟ್‌ನಲ್ಲಿರಿಸಿ ಶೌಚಾಲಯಕ್ಕೆ ತೆರಳಿದ್ದು, ಈ ವೇಳೆ ಕಳ್ಳರು ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ನಡೆದಿದೆ. ಬ್ಯಾಗ್‌ನಲ್ಲಿ 1.9 ಲ.ರೂ. ಮೌಲ್ಯದ ಆ್ಯಪಲ್ ಲ್ಯಾಪ್‌ಟಾಪ್, 20 ಸಾವಿರ ರೂ. ಮೌಲ್ಯದ ಆ್ಯಪಲ್ ಇಯರ್‌ಬಡ್, 50 ಸಾವಿರ ರೂ.ಮೌಲ್ಯದ ಚಿನ್ನದ ಸರ, ಬಟ್ಟೆ ಸೇರಿದಂತೆ ಒಟ್ಟು 1.80 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು […]
ಕೃಷಿ ನವೋದ್ಯಮ ಯೋಜನೆಯಡಿ ಅರ್ಹ ನವೋದ್ಯಮಗಳಿಗೆ ಸಹಾಯಧನ ಸೌಲಭ್ಯ
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲಾಗುವ ಕೃಷಿ ನವೋದ್ಯಮಗಳ ಪೈಕಿ ಅರ್ಹ ನವೋದ್ಯಮಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿ, ಹೊಸ ಕೃಷಿ ನವೋದ್ಯಮಗಳಿಗೆ ಶೇ. 50ರಷ್ಟು ಕನಿಷ್ಠ 5 ಲಕ್ಷ ರೂ. ಗಳಿಂದ […]
ಕನ್ನಡ ಭಾಷೆಯ ನಾಮಫಲಕ ದೊಡ್ಡದಾಗಿ ಎದ್ದುಕಾಣುವಂತೆ ಪ್ರದರ್ಶಿಸಿಲು ಜಿಲ್ಲಾಧಿಕಾರಿ ಆದೇಶ
ಉಡುಪಿ: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಬಳಕೆ ಆಗಬೇಕೆನ್ನುವ ಹಿತದೃಷ್ಟಿಯಿಂದ, ನಮ್ಮ ನಾಡಿನ ರಾಜ್ಯ ಭಾಷೆ ಕನ್ನಡದ ಉಳಿವಿಗಾಗಿ ಮತ್ತು ನಮ್ಮ ಸಂಸ್ಕೃತಿ ತಿಳಿದುಕೊಳ್ಳುವ ಸಲುವಾಗಿ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್ ಹಾಗೂ ಕಂಪನಿಗಳು ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ. ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್ ಹಾಗೂ ಕಂಪನಿಗಳು ಇತರೆ ಭಾಷೆಯನಾಮಫಲಕಕ್ಕಿಂತ ಕನ್ನಡ ಭಾಷೆಯ ನಾಮಫಲಕವನ್ನು ದೊಡ್ಡದಾಗಿ ಎದ್ದುಕಾಣುವಂತೆ ಅಳವಡಿಸುವಂತೆ ನಗರಸಭೆ ಪೌರಾಯುಕ್ತರಕಚೇರಿ […]
ವಿಶ್ವ ವಿಸ್ಮಿತ ಮಂದಸ್ಮಿತ ಸಜೀವ ಕಣ್ಣುಗಳ ರಾಮಲಲ್ಲಾನ ನಿರ್ಮಾತೃವಿಗೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ: ರಾಮನ ಆದೇಶದಂತೆ ಕೆಲಸ ಮಾಡಿದ್ದೇನೆ ಎಂದ ಅರುಣ್ ಯೋಗಿರಾಜ್
ಬೆಂಗಳೂರು: ವಿಶ್ವವೇ ವಿಸ್ಮಿತವಾಗಿ ನೋಡುತ್ತಿರುವ ಮಂದಸ್ಮಿತ ಸಜೀವ ನೇತ್ರಗಳ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಮೈಸೂರಿನ ಅರುಣ್ ಯೋಗಿರಾಜ್ ಜ.24 ರಂದು ರಾಜ್ಯಕ್ಕೆ ಮರಳಿದ್ದಾರೆ. ಅರುಣ್ ಯೋಗಿರಾಜ್ ಅವರಿಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅರುಣ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಜನರು ಅರುಣ್ ಯೋಗಿರಾಜ್ ಅವರನ್ನು ಮುತ್ತಿಕೊಂಡಿದ್ದು, ಪೇಟ ತೊಡಿಸಿ ಶಾಲು ಹೊದೆಸಿ ಗೌರವಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ದೇಶಾದ್ಯಂತ ಜನರಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿರುವ ಬಗ್ಗೆ ಹರ್ಷಿತರಾಗಿರುವ ಅರುಣ್ […]
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ “ಪಥ್ಯಾಹಾರ ದಿನ” ಆಚರಣೆ
ಮಣಿಪಾಲ: ಪ್ರತಿ ವರ್ಷ ಜನವರಿ ಹತ್ತರಂದು ಪಥ್ಯಾಹಾರ ದಿನವನ್ನಾಗಿ ದೇಶದಾದ್ಯಂತ ಆಚರಿಸುತ್ತಾರೆ. ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ಪಥ್ಯಾಹಾರ ತಜ್ಞರ ಪಾತ್ರ ಎಂಬ ಈ ವರ್ಷದ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಎಂ.ಸಿ.ಎಚ್.ಪಿ ಕಾಲೇಜಿನ ಪಥ್ಯಾಹಾರ ವಿಭಾಗದ ವಿದ್ಯಾರ್ಥಿಗಳು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಪಥ್ಯಾಹಾರ ತಜ್ಞರ ತಂಡವು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಪಥ್ಯಾಹಾರದ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸುವ ಹಲವು ಬಗೆಯ ಆಟಗಳನ್ನು ಆಯೋಜಿಸಿದ್ದರು ಪೌಷ್ಟಿಕಾಂಶದ ಕುರಿತು ಸರಳವಾದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದವರಿಗೆ ಬಹುಮಾನವಾಗಿ ಹಣ್ಣುಗಳನ್ನು ನೀಡಲಾಯಿತು. ಹಣ್ಣುಗಳನ್ನು […]