ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನಲ್ಲಿ 1.80 ಲ.ರೂ. ಮೌಲ್ಯದ ಸೊತ್ತು ಕಳವು

ಉಡುಪಿ: ಜ.23ರಂದು ರಾತ್ರಿ ಬೆಂಗಳೂರಿನಿಂದ ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಮಟಾ ನಿವಾಸಿ ಅಭಿನ್‌ ವೈದ್ಯ (19) ಎಂ ವ್ಯಕ್ತಿ ತಮ್ಮ ಬ್ಯಾಗ್‌ನ್ನು ಸೀಟ್‌ನಲ್ಲಿರಿಸಿ ಶೌಚಾಲಯಕ್ಕೆ ತೆರಳಿದ್ದು, ಈ ವೇಳೆ ಕಳ್ಳರು ಬ್ಯಾಗ್‌ ಅನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಬ್ಯಾಗ್‌ನಲ್ಲಿ 1.9 ಲ.ರೂ. ಮೌಲ್ಯದ ಆ್ಯಪಲ್‌ ಲ್ಯಾಪ್‌ಟಾಪ್‌, 20 ಸಾವಿರ ರೂ. ಮೌಲ್ಯದ ಆ್ಯಪಲ್‌ ಇಯರ್‌ಬಡ್‌, 50 ಸಾವಿರ ರೂ.ಮೌಲ್ಯದ ಚಿನ್ನದ ಸರ, ಬಟ್ಟೆ ಸೇರಿದಂತೆ ಒಟ್ಟು 1.80 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.