ಹಿರಿಯಡಕ: ಜ.26 ರಂದು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ 32ನೇ ವಾರ್ಷಿಕೋತ್ಸವ ಸಮಾರಂಭ

ಹಿರಿಯಡಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ 32ನೇ ವಾರ್ಷಿಕೋತ್ಸವ ಸಮಾರಂಭ ಜ.26 ಶುಕ್ರವಾರ ಸಂಜೆ ಘಂಟೆ 6.30ರಿಂದ ಕೋಟ್ನಕಟ್ಟೆ ಗಾಂಧಿ ಮೈದಾನದಲ್ಲಿ ಜರಗಲಿರುವುದು. ಜ.26-01-2024ನೇ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಸಂಜೆ ಘಂಟೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯವೈವಿಧ್ಯ – ಸ್ಥಳೀಯ ಪ್ರತಿಭೆಗಳಿಂದ. ರಾತ್ರಿ ಘಂಟೆ 7.30ರಿಂದ: ಸಭಾ ಕಾರ್ಯಕ್ರಮಗಳು ನಡೆಯಲಿವೆ. ಅಧ್ಯಕ್ಷತೆ: ಶ್ರೀಮತಿ ನಳಿನಾದೇವಿ ಎಂ. ಆರ್., ಕನ್ನಡ ಉಪನ್ಯಾಸಕರು ಸರಕಾರಿ ಪದವಿಪೂರ್ವ ಕಾಲೇಜು, ಹಿರಿಯಡಕ ಮುಖ್ಯ ಅತಿಥಿ: ಡಾ. ಜ್ಞಾನೇಶ್ವರ […]

ಮಂಗಳೂರು: ಸ೦ತ ಅಲೋಶಿಯಸ್‌ ಸ್ವಾಯತ್ತ ಕಾಲೇಜಿಗೆ ಪರಿಗಣಿತ ವಿಶ್ವವಿದ್ಯಾನಿಲಯ ಸ್ಥಾನಮಾನ

ಮಂಗಳೂರು: ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಜನವರಿ 25-2024 ರ ಅಧಿಸೂಚನೆ ಸಂಖ್ಯೆ 9-27/2017-0,3 (1) ಪ್ರಕಾರ ಮಂಗಳೂರಿನ ಸಂತ ಅಲೋಶಿಯಸ್‌ ಸ್ವಾಯತ್ತ ಕಾಲೇಜನ್ನು ಪರಿಗಣಿತ ವಿಶ್ವವಿದ್ಯಾನಿಲಯವೆಂದು ಘೋಷಿಸಲಾಗಿದೆ ಎಂದು ಕಾಲೇಜಿನ ಪ್ರಾಶುಂಪಾಲ ಡಾ. ಪ್ರವೀಣ್‌ ಮಾರ್ಟಿಸ್‌ ಎಸ್‌.ಜೆ ತಿಳಿಸಿದ್ದಾರೆ. ಮಂಗಳೂರಿನ ಪ್ರಸಿದ್ದ ಸ೦ತ ಅಲೋಶಿಯಸ್‌ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದಿಸಿದೆ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಿದೆ. ಈ ಸ್ಥಾನಮಾನದೊಂದಿಗೆ […]

ತ್ಯಾಜ ವಿಲೇವಾರಿಗಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 47.50 ಕೋಟಿ ರೂಪಾಯಿ ಅನುದಾನ ಮಂಜೂರು: ಶೋಭಾ ಕರಂದ್ಲಾಜೆ

ಉಡುಪಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್‌ ಅಭಿಯಾನ 2.0 ರ ಅಡಿಯಲ್ಲಿ ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾರಂಪರಿಕ ತ್ಯಾಜ್ಯದ ವಿಲೇವಾರಿಗಾಗಿ 47.50 ಕೋಟಿ ರೂಪಾಯಿ ಅನುದಾನವನ್ನು ಮಂಜೂರುಗೊಳಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ನಗರ ಸಭೆ ವ್ಯಾಪ್ತಿಯ ದ್ರವ ತ್ಯಾಜ್ಯ ನಿರ್ವಹಣೆ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರದ ನಗರ ವ್ಯವಹಾರಗಳ ಇಲಾಖೆಯು ಎನ್.ಜಿ.ಟಿ ನಿಧಿಯ ಮೂಲಕ 30 ಕೋಟಿ ರೂಪಾಯಿ ಹಾಗೂ ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಿದ್ಧಪಡಿಸಿದ್ದ […]

ಭಾರತದ ಏಕೈಕ ರಾಜ್ಯದಲ್ಲಿದೆ ಅಪರೂಪದ ‘ಚಿನ್ನದ ಬಣ್ಣದ ಹುಲಿ’: ಅಪರೂಪದಲ್ಲಿ ಅಪರೂಪ ಚಿನ್ನದ ಹುಲಿಗಳ ದರ್ಶನ; ಚಿತ್ರ ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದ ಅಪರೂಪದ ಚಿನ್ನದ ಹುಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ಮಯೂರೇಶ್ ಹೆಂಡ್ರೆ ಅವರು ಈ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಕಾಜಿ 106-ಎಫ್ ಎಂದು ಕರೆಯಲ್ಪಡುವ ಈ ಅಪರೂಪದ ಹುಲಿಯನ್ನು ವೀಕ್ಷಿಸುವ ಅದೃಷ್ಟವನ್ನು ಹೊಂದಿದ್ದಾರೆ. ಅಸ್ಸಾಂನ ಹೃದಯಭಾಗದಲ್ಲಿ ನೆಲೆಸಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಸ್ಟ್ರಾಬೆರಿ ಟೈಗರ್ ಅಥವಾ ಗೋಲ್ಡನ್ ಟ್ಯಾಬಿ ಟೈಗರ್ ಎಂದೂ ಕರೆಯಲ್ಪಡುತ್ತದೆ. ಅಪರೂಪದ ಚಿನ್ನದ […]

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಎನ್‌ಪಿಎಸ್‌ ನಿಂದ ಹೊರಬಂದು ಒಪಿಎಸ್‌ಗೆ ಒಳಪಡಲು ಅವಕಾಶ; ಜೂನ್ 30ರೊಳಗೆ ಅರ್ಜಿ ಸಲ್ಲಿಸಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, 2006ರ ಏಪ್ರಿಲ್ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆಯಾದ ನೌಕರರು, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ವ್ಯಾಪ್ತಿಯಿಂದ ಹೊರಬಂದು ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಗಲು ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಆಡಳಿತ ಮತ್ತು ಸಮನ್ವಯ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆಗೆ ಒಳಪಡಲು 6 ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ. ಹಳೆಯ ಪಿಂಚಣಿ ಸೇವೆಗೆ ಒಳಪಡಲು ಸರ್ಕಾರಿ ನೌಕರರು ತಾವೇ ಒಪ್ಪಿಗೆ ಸೂಚಿಸಬೇಕು. […]