ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ಹನುಮನ ಜನುಮ ಭೂಮಿ ಕಿಷ್ಕಿಂಧೆಯ ರಥ!!

ಅಯೋಧ್ಯೆ: ಇಂದಿನ ಕರ್ನಾಟಕದ ಹಂಪಿ ಅಂದಿನ ಹನುಮಂತನ ಜನ್ಮಸ್ಥಳ ಕಿಷ್ಕಿಂಧೆಯ ಟ್ಯಾಬ್ಲೋ ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೂ ಮುನ್ನ ಅಯೋಧ್ಯೆಗೆ ಆಗಮಿಸಿದೆ. ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡಿದ ರಥವು ಅಯೋಧ್ಯೆಗೆ ಆಗಮಿಸುವ ಮೊದಲು ಇಂದಿನ ನೇಪಾಳದ ಸೀತಾ ದೇವಿಯ ಜನ್ಮಸ್ಥಳ ಜನಕಪುರಕ್ಕೆ ಭೇಟಿ ನೀಡಿದೆ. 100 ಭಕ್ತರ ತಂಡವು ರಥದೊಂದಿಗೆ ಪ್ರಯಾಣಿಸಿದೆ. ಭಗವಾನ್ ರಾಮನ ಚಿತ್ರಗಳೊಂದಿಗೆ ಕೇಸರಿ ಧ್ವಜವನ್ನು ಬೀಸುತ್ತಾ ಹಾಡುಗಳು ಮತ್ತು ನೃತ್ಯದೊಂದಿಗೆ “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗುತ್ತಾ ಟ್ಯಾಬ್ಲೋ […]

ಪ್ರಾಣ ಪ್ರತಿಷ್ಠೆ ನಿಮಿತ್ತ ಉದಯಾಸ್ತಮಾನ ಅಖಂಡ ಭಜನಾ ಕಾರ್ಯಕ್ರಮಕ್ಕೆ ಪುತ್ತಿಗೆಶ್ರೀ ಗಳಿಂದ ಚಾಲನೆ

ಉಡುಪಿ: ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ರಾಮೋತ್ಸವದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣಮಠದ ಮಧ್ವಮಂಟಪದಲ್ಲಿ ವಿವಿಧ ಭಜನಾ ತಂಡಗಳಿಂದ ವಿಶೇಷ ಉದಯಾಸ್ತಮಾನ ಅಖಂಡ ಭಜನಾ ಕಾರ್ಯಕ್ರಮಕ್ಕೆ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು. ಪುತ್ತಿಗೆ ಮಠದ ಕಿರಿಯ ಸ್ವಾಮೀಜಿಗಳಾದ ಸುಶೀಂದ್ರ ತೀರ್ಥರು, ಯಶ್ ಪಾಲ್ ಸುವರ್ಣ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಶತಮಾನ ಕಂಡ ಎಂಸಿಸಿ ಬ್ಯಾಂಕ್: 1000 ಕೋಟಿ ರೂಪಾಯಿ ಮೈಲಿಗಲ್ಲು ದಾಟಿದ ಸಂಭ್ರಮಾಚರಣೆ

ಮಂಗಳೂರು: 1912 ರಲ್ಲಿ ಕ್ರೈಸ್ತ ಸಮಾಜದ ಅದ್ವಿತೀಯ ಸಮಾಜಮುಖಿ ಧುರೀಣ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಹತ್ತು ಸಾವಿರ ರೂಪಾಯಿ ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಎಂಸಿಸಿ ಬ್ಯಾಂಕ್ ಇಂದು ಸಾವಿರ ಕೋಟಿ ರುಪಾಯಿ ವಹಿವಾಟಿನ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಂಕಿನ ಪ್ರಸ್ತುತ ಅಧ್ಯಕ್ಷ ಅನಿಲ್ ಲೋಬೊ ನ್ಟೇತೃತ್ವದ ಆಡಳಿತ ಮಂಡಳಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಮೇಲೆ, ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಇಮ್ಮಡಿಯಾಗಿದೆ. 2018 ರಲ್ಲಿ ಬರೀ 503 ಕೋಟಿ ರುಪಾಯಿ ಇದ್ದ […]

ಕಾರ್ಕಳ: ಕಿರುತಿರುಪತಿ ವೆಂಕಟರಮಣ ದೇವಸ್ಥಾನದ ಶಿಲಾನ್ಯಾಸ ಸಮಾರಂಭ

ಕಾರ್ಕಳ: ಇಲ್ಲಿನ ದುರ್ಗ ಗ್ರಾಮದಲ್ಲಿ ಸುಮಾರು 2 ಶತಮಾನ ಪುರಾತನ ಕಿರುತಿರುಪತಿ ಎಂದು ಖ್ಯಾತಿವೆತ್ತ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೂಲ ವೆಂಕಟರಮಣ ಶಿಲಾ ವಿಗ್ರವನ್ನು ಕಳೆದ ಡಿಸೆಂಬರ್ ನಲ್ಲಿ ಬಾಲಾಲಯದಲ್ಲಿ ಸ್ಥಾಪಿಸಲಾದ್ದು, ಜನವರಿ 17 ರಂದು ನೂತನ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ವೇದಮೂರ್ತಿ ಅನಂತ ಗೋಖಲೆಯವರ ನೇತೃತ್ವದಲ್ಲಿ, ಪುಂಡಾಜೆ ಶಶಿಕಲಾ ಹಾಗೂ ರಮಾನಾಥ ಮರಾಠೆ ನೆರವೇರಿಸಿದರು. ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಅನಂತ ಗೋಖಲೆ ವೇದಘೋಷದೊಂದಿಗೆ ಪ್ರಾರಂಭಿಸಿ ‘ನಾಹಂ ಕರ್ತಾ ಹರಿ ಕರ್ತಾ’, ಎಲ್ಲವೂ ಭಗವಂತನ ಸಂಕಲ್ಪದಂತೆ […]