ಕಾರ್ಕಳ: ಕಿರುತಿರುಪತಿ ವೆಂಕಟರಮಣ ದೇವಸ್ಥಾನದ ಶಿಲಾನ್ಯಾಸ ಸಮಾರಂಭ

ಕಾರ್ಕಳ: ಇಲ್ಲಿನ ದುರ್ಗ ಗ್ರಾಮದಲ್ಲಿ ಸುಮಾರು 2 ಶತಮಾನ ಪುರಾತನ ಕಿರುತಿರುಪತಿ ಎಂದು ಖ್ಯಾತಿವೆತ್ತ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೂಲ ವೆಂಕಟರಮಣ ಶಿಲಾ ವಿಗ್ರವನ್ನು ಕಳೆದ ಡಿಸೆಂಬರ್ ನಲ್ಲಿ ಬಾಲಾಲಯದಲ್ಲಿ ಸ್ಥಾಪಿಸಲಾದ್ದು, ಜನವರಿ 17 ರಂದು ನೂತನ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ವೇದಮೂರ್ತಿ ಅನಂತ ಗೋಖಲೆಯವರ ನೇತೃತ್ವದಲ್ಲಿ, ಪುಂಡಾಜೆ ಶಶಿಕಲಾ ಹಾಗೂ ರಮಾನಾಥ ಮರಾಠೆ ನೆರವೇರಿಸಿದರು.

ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಅನಂತ ಗೋಖಲೆ ವೇದಘೋಷದೊಂದಿಗೆ ಪ್ರಾರಂಭಿಸಿ ‘ನಾಹಂ ಕರ್ತಾ ಹರಿ ಕರ್ತಾ’, ಎಲ್ಲವೂ ಭಗವಂತನ ಸಂಕಲ್ಪದಂತೆ ನಡೆಯುತ್ತಿದೆ ನಾವೆಲ್ಲಾ ನಿಮಿತ್ತ ಮಾತ್ರ. ಆ ಒಂದು ಸಂಕಲ್ಪವನ್ನು ನಾವೆಲ್ಲರು ಸಂಕಲ್ಪಿಸೋಣ ಎಂದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬ್ರಹ್ಮಾನಂದ ಮರಾಠೆ ದೇವಸ್ಥಾನದ ಜೀರ್ಣೋದ್ಧಾರದ ಮುಂದಿನ ಯೋಜನೆಯನ್ನು ವಿವರಿಸಿದರು.

ವೇದಮೂರ್ತಿ ಗೋಪಾಲಕೃಷ್ಣ ಚಿಪ್ಲೂಣ್ಕರ್ ಅವರು ಆಶೀರ್ವಚಿಸಿ, ತನ್ನ ಬಾಲ್ಯದಲ್ಲಿ ನೋಡಿದ ಹಿಂದಿನಿ ವೈಭವವನ್ನು ಸ್ಮರಿಸಿದರು.

ಕಾರ್ಕಳ ಪಡು ತಿರುಪತಿ ವೆಂಕಟರಮಣ ದೇವಸ್ಥಾನದ ಒಂದನೇ ಮೊಕ್ತೇಸರ ಜಯರಾಮ್ ಪ್ರಭುಗಳು ಮಾತನಾಡಿ ‘ಕಾಲಾಯ ತಸ್ಮೈ ನಮಃ ನಮ್ಮ ಮನಸ್ಸಿನಲ್ಲಿ ಸಂಯಮ ಅಗತ್ಯ. ಆದ್ದರಿಂದ ಎಲ್ಲರ ಮನಸ್ಸು ಒಂದಾಗಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕು’ ಎಂದರು.

ವೇದಿಕೆಯಲ್ಲಿ ಬೋಳ ರಘುರಾಮ್ ಕಾಮತ್ , ಕೃಷ್ಣ ಚಿಪ್ಲೂಣ್ಕರ್ , ಜಗದೀಶ್ ಮಲ್ಯ , ರಮಾನಾಥ ಲೊಂಡೇ , ನಿರಂಜನ್ ಚಿಪ್ಲೂಣ್ಕರ್, ಪ್ರದೀಪ್ ಫಾಟಕ್ , ಶ್ರೀಕೃಷ್ಣ ಚಿಂಚಲ್ಕರ್ , ಸುದರ್ಶನ್ ಚಿಪ್ಲೂಣ್ಕರ್ ಉಪಸ್ಥಿತರಿದ್ದರು.

ಸೌಜನ್ಯ ಉಪಾಧ್ಯಾಯ, ಗಣಪತಿ ಪೈ , ಪ್ರಶಾಂತ್ ಭಟ್, ವಿಜೇಂದ್ರ ಕಿಣಿ, ಸುಬ್ರಾಯ ಫಾಟಕ್, ಬೋಳ ಜಯವಂತ್ ಕಾಮತ್ ಶುಭ ಕೋರಿದರು.

ಕೊಪ್ಪಲ ಶ್ರೀಕರ ಮರಾಠೆ ವಂದಿಸಿದರು. ಗಿರೀಶ್ ಮರಾಠೆ ನಿರೂಪಿಸಿದರು.