ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್: ಉಡುಪಿಯ ರಾಯ್ ರಾಕರ್ಸ್ ಪ್ರಥಮ; ಮಂಗಳೂರಿನ ಶಟಲ್ ಬ್ಲಾಕರ್ಸ್ ರನ್ನರ್ಸ್ ಅಪ್

ಮಂಗಳೂರು: ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಜ. 14 ರಂದು ಫಾದರ್  ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮತ್ತು ಲೆಕ್ಸಾ ಲೈಟೆನಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಡಿಸೋಜಾ ಭಾಗವಹಿಸಿದ್ದರು. ಮೆಲ್ವಿನ್ ಪೆರಿಸ್ ನಿರೂಪಿಸಿದರು. ಅಜಯ್ ಟೆರೆನ್ಸ್ ಸ್ವಾಗತಿಸಿದರು. ಅರುಣ್ ಬ್ಯಾಪ್ಟಿಸ್ಟ್ ಪಂದ್ಯಾವಳಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಜಾನ್ ಪೈಸ್ […]

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗಮ್ಯ ಸ್ಥಾನ ತಲುಪಿ! ಪರ್ಯಾಯಕ್ಕಾಗಿ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆ ಜಾರಿ!

ಉಡುಪಿ: ಪುತ್ತಿಗೆ ಮಠ ಪರ್ಯಾಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಆಗಮಿಸುವ ಭಕ್ತಾದಿಗಳು ಹಾಗೂ ನಾಗರಿಕರಿಗೆ ಸುಗಮ ಸಂಚಾರ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆ ಜಾರಿಗೊಳಿಸಿದೆ. ನೂತನ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯಲ್ಲಿ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಗರದ 25 ಕಡೆಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಳವಡಿಸಲಾಗುತ್ತಿದ್ದು ಅದನ್ನು […]

ರಾಜಧಾನಿ ಅಯೋಧ್ಯೆಯಲ್ಲಿ 14.5 ಕೋಟಿ ರೂ. ಮೌಲ್ಯದ ಭೂಮಿ ಖರೀದಿಸಿದ ಅಮಿತಾಭ್ ಬಚ್ಚನ್

ರಾಜಧಾನಿ ಅಯೋಧ್ಯೆಯಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು 14.5 ಕೋಟಿ ರೂಪಾಯಿಗೆ ಭೂಮಿ ಖರೀಸಿದ್ದಾರೆ. ಈ ಜಾಗ ಸುಮಾರು 10 ಸಾವಿರ ಅಡಿ ಚದರ ಅಡಿ ಹೊಂದಿದೆ. ಈ ಜಾಗ ಖರೀದಿಸಲಾಗಿದ್ದು, ಜಾಗತಿಕ ಆಧ್ಯಾತ್ಮದ ರಾಜಧಾನಿ ಅಯೋಧ್ಯೆಯಲ್ಲೇ ನಾನು ಒಂದು ಮನೆ ಕಟ್ಟುವೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಅವರು ಖರೀದಿಸಿರುವ ಈ ಜಾಗದಿಂದ ಕೇವಲ 15 ನಿಮಿಷದಲ್ಲಿ ಅಯೋಧ್ಯೆ ರಾಮಮಂದಿರವನ್ನು ತಲುಪಬಹುದಾಗಿದೆ. ಅಯೋಧ್ಯೆಯ ಏರ್‌ಪೋರ್ಟ್‌ನಿಂದ ಈ ಜಾಗಕ್ಕೆ ಅರ್ಧ ಗಂಟೆಯ ಪ್ರಯಾಣದ […]

ಪುತ್ತಿಗೆ ಪರ್ಯಾಯ: ವಿವಿಧ ಸಮುದಾಯಗಳಿಂದ ಹೊರೆ ಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಪರ್ಯಾಯ (Puttige Paryaya) ಮಹೋತ್ಸವದ ಏಳನೇ ದಿನದಂದು ವಿವಿಧ ಸಮುದಾಯದ ಬಂಧುಗಳು ಹೊರೆಕಾಣಿಕೆ ಸಲ್ಲಿಸಿದರು. ಜೋಡುಕಟ್ಟೆ ಬಳಿ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಹಳೆ ತಾಲೂಕು ಕಚೇರಿ ರಸ್ತೆ, ಡಯಾನಾ ವೃತ್ತ, ಕವಿ ಮುದ್ದಣ ಮಾರ್ಗ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ ಮೂಲಕ ಉಗ್ರಾಣ ತಲುಪಿತು. ಕನಕದಾಸ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ […]

ಕಾರ್ಕಳ: ಜ.21 ರಿಂದ 26ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಕ್ಷೇತ್ರದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ಹೇಳಿದರು. ಅವರು ಬಸಿಲಿಕಾದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಾಂಕ 26-01-2024 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು […]