ಉಡುಪಿ: ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಭೇಟಿ

ಉಡುಪಿ: ಪೂರ್ವಭಾವಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳವಾರ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಮಾಜಿ ಸಾಸಕ ಕೆ ರಘುಪತಿ ಭಟ್ , ದೇವಳದ ಅರ್ಚಕರು , ಟ್ರಸ್ಟಿಗಳು ಭಕ್ತಿ ಆದರದಿಂದ ಉಭಯ ಶ್ರೀಗಳನ್ನು ಬರಮಾಡಿಕೊಂಡರು . ಇದೇ ಸಂದರ್ಭ ಶ್ರೀಗಳು ಕೋಟಿ ಗೀತಾಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯೋತ್ಸವವನ್ನು ಸಂಕಲ್ಪಿಸಿರುವುದರ ದ್ಯೋತಕವಾಗಿ ಶ್ರೀ ಮಠದ ಪಟ್ಟದ ದೇವರು ಮತ್ತು ಭಗವದ್ಗೀತೆ ಗ್ರಂಥಗಳನ್ನು ಸಾಲಂಕೃತ ಬೆಳ್ಳಿ […]

ವಿಶ್ವ ಗೀತಾ ಪರ್ಯಾಯಕ್ಕೆ ಜಪಾನಿನ ಗಣ್ಯರ ನಿಯೋಗದ ಆಗಮನ

ಉಡುಪಿ: ವಿಶ್ವ ಗೀತಾ ಪರ್ಯಾಯದಲ್ಲಿ ಪಾಲ್ಗೊಳ್ಳಲು ಪುತ್ತಿಗೆ ಮಠದ ಸುಗುಣೇಂದ್ರತೀರ್ಥರ ವಿಶೇಷ ಆಹ್ವಾನಿತ ಅತಿಥಿಯಾಗಿ ಜಪಾನ್ ದೇಶದ ರೇವ್ ಕೋಶೋ ನಿವಾನೋ ಮತ್ತು ಅವರ ಜೊತೆಯಲ್ಲಿ ಆರು ಮಂದಿಯ ನಿಯೋಗವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ವಿಶ್ವ ಗೀತಾ ಪರ್ಯಾಯದ ಸ್ವಾಗತ ಸಮಿತಿಯ ಕೋಶಾಧಿಕಾರಿ ರಂಜನ್ ಕಲ್ಕೂರ, ಲಕ್ಷ್ಮೀ ರಂಜನ್, ಪುತ್ತಿಗೆ ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯ ಚಟುವಟಿಕೆಗಳ ಸಂಯೋಜಕ ಡಾ. ಎ. ಕೇಶವರಾಜ್ ಮತ್ತು ಪರ್ಯಾಯ ಮಹೋತ್ಸವದ ಕಾರ್ಯಕರ್ತ, ಎ. ಮುರಳೀಧರ್ ಜಪಾನಿನಿಂದ ಆಗಮಿಸಿದ ಗಣ್ಯ ಅತಿಥಿಗಳನ್ನು […]

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಹಾಗೂ ಉಡುಪಿ ಪರ್ಯಾಯ ಮಹೋತ್ಸವ ದಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಶಿಕ್ಷೆ: ಪರೀಕ್ಷೆ ಮುಂದೂಡಲು ಮನವಿ

ಉಡುಪಿ: ಈಗಾಗಲೇ ಬಿಡುಗಡೆಗೊಳಿಸಿರುವ ಜಿಲ್ಲಾಮಟ್ಟದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯ ಪ್ರಕಾರ ನಾಡಹಬ್ಬ ಉಡುಪಿ ಪರ್ಯಾಯ ಜನವರಿ 17 ಹಾಗೂ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಜನವರಿ 22 ರಂದೆ ಪರೀಕ್ಷೆ ನಡೆಯಲಿದೆ. ಇದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡುವಂತೆ ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ ಪೋಷಕರ ಹಾಗೂ ಶಿಕ್ಷಕರ ಸಂಘದ ಸಂಸ್ಥಾಪಕ ಮಿಥೇಶ್ ಕುಮಾರ್ ಮೂಡುಕೊಣಾಜೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಪದವಿ ಪೂರ್ವ […]

ವಿಜಯ್ ರಾಘವೇಂದ್ರ ನಟನೆಯ ಕೇಸ್ ಆಫ್ ಕೊಂಡಾಣ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್; ಜನವರಿ 26 ರಂದು ತೆರೆಗೆ

ವಿಜಯ್ ರಾಘವೇಂದ್ರ ನಾಯಕ ನಟನಾಗಿರುವ ನಿರ್ಮಾಪಕ- ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಇವರ ಎರಡನೇ ಸಿನಿಮಾ ‘ಕೇಸ್ ಆಫ್ ಕೊಂಡಾಣ’ ಜನವರಿ 26 ರಂದು ರಾಜ್ಯದಾದ್ಯಂತ ತೆರೆಕಾಣಲಿದ್ದು, ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೂಟ್ಯೂಬ್ ನಲ್ಲಿ ಅದಾಗಲೇ 4ಲಕ್ಷ+ ವೀಕ್ಷಣೆಗಳನ್ನು ಕಂಡಿದೆ. ಈ ಚಿತ್ರವು ಬೆಂಗಳೂರಿನಲ್ಲಿ ನಡೆಯುವ ಮೂರು ಕಥೆಗಳೊಂದಿಗೆ ಪ್ರಾರಂಭವಾಗುತ್ತದೆ. ಅವುಗಳ ನಡುವಿನ ಸಂಪರ್ಕಗಳನ್ನು ಅನ್ವೇಷಿಸುತ್ತದೆ. ಚಿತ್ರದ ಎಂಭತ್ತರಷ್ಟು ಭಾಗವನ್ನು ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಚಿತ್ರೀಕರಿಸಲಾಗಿದ್ದು, ಒಂದು ರಾತ್ರಿಯಲ್ಲಿ ಇದು ನಡೆಯುತ್ತದೆ. […]

ಪುತ್ತಿಗೆ ಪರ್ಯಾಯ ಸಂಭ್ರಮಕ್ಕೆ ಸಂದೀಪ್ ನಾರಾಯಣ್ ಸ್ವರಮಾಧುರ್ಯದ ಮೆರುಗು

ಉಡುಪಿ: ಪುತ್ತಿಗೆ ಪರ್ಯಾಯ ನಡೆಯುತ್ತಿರುವ ಸಂಭ್ರಮದ ಕ್ಷಣಗಳಿಗೆ ಕರ್ನಾಟಕ ಸಂಗೀತದ ಗಾನ ಮಾಧುರ್ಯದ ರಸದೌತಣ ನೀಡಲು ಜ. 19 ರಂದು ರಾಜಾಂಗಣದಲ್ಲಿ ಸಂಜೆ 7 ರಿಂದ ಸಂದೀಪ್ ನಾರಾಯಣ್ ಮತ್ತು ತಂಡದವರಿಂದ ಸಂಗೀತ ಕಛೇರಿ ನಡೆಯಲಿದೆ. ಮತ್ತೂರು ಶ್ರೀನಿಧಿ, ಕೆ.ಯು.ಜಯಚಂದ್ರ ರಾವ್, ಗಿರಿಧರ್ ಉಡುಪ ಸಾಥ್ ನೀಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶ